Gruhalakshmi Scheme: ಇದೊಂದೇ ಟ್ರಿಕ್ಸ್ ಬಾಕಿ: ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ನೀವೇ ತಿಳಿದುಕೊಳ್ಳಿ!

Gruhalakshmi Scheme: ಗೃಹಲಕ್ಷ್ಮಿ ಯೋಜನೆ ಇತ್ತೀಚಿಗೆ  ಕಗ್ಗಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಮೊದಲ ಕಂತಿನ ಹಣ ಬಿಡುಗಡೆ ಆಗಿ ಒಂದು ತಿಂಗಳಿಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ, ಆದರೂ ಹಲವರ ಖಾತೆಗೆ ಹಣ ಬಂದು ಜಮಾ ಆಗಿಲ್ಲ. ಇದೇ ಕಾರಣಕ್ಕೆ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಲ್ಲರೂ ಖಾತೆಗೂ ಹಣ ಬಂದಿದೆ ಆದರೆ ನಮಗೆ ಮಾತ್ರ ಹಣ ಸಿಗುತ್ತಿಲ್ಲ ಅಂತ ವ್ಯಥೆ ಪಟ್ಟುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: World Cup: ವಿಶ್ವಕಪ್ ನಲ್ಲಿ ಈ ಎರಡು ತಂಡಗಳಲ್ಲಿ ಟ್ರೋಫಿ ಗೆಲ್ಲೋದು ಯಾರು? ಸಂಗಕ್ಕಾರ ಭವಿಷ್ಯ, ನಿಮ್ಮ ಫೇವರೇಟ್ ಟೀಮ್ ಇದೆನಾ?

ಗೃಹಲಕ್ಷ್ಮಿ 2000 ಯಾಕೆ ಬಂದಿಲ್ಲ?

ಈ ವಿಚಾರ ಬಹುತೇಕ ಈ ಎಲ್ಲರಿಗೂ ಗೊತ್ತು ಮೊಟ್ಟಮೊದಲನೆಯದಾಗಿ ಮಹಿಳೆಯರ ಬ್ಯಾಂಕ್ ಖಾತೆ ರೇಷನ್ ಕಾರ್ಡ್ ಆಧಾರ್ ಸೀಡಿಂಗ್ ಆಗಿರಬೇಕು. ರೇಷನ್ ಕಾರ್ಡ್ ನಲ್ಲಿ ಮಹಿಳೆಯದ್ದೆ ಮೊದಲ ಹೆಸರು ಇರಬೇಕು. ಇದರ ಜೊತೆಗೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಮಹಿಳೆಯ ಹೆಸರು ಮ್ಯಾಚ್ ಆಗಬೇಕು. ಬ್ಯಾಂಕ್ ಖಾತೆ ಕೂಡ ಆಕ್ಟಿವ್ ಇದ್ದರೆ ನಿಮ್ಮ ಖಾತೆಗೂ ಹಣ ಜಮಾ ಆಗುತ್ತದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ ಆರ್‌ಬಿಐ ನಿಂದ ಹಂತ ಹಂತವಾಗಿ ಖಾತೆಗೆ ಹಣ ಜಮಾ ಆಗುತ್ತಿದೆ. ಹೀಗಾಗಿ ಎಲ್ಲರ ಖಾತೆಗೂ ಒಮ್ಮೆಲೆ ಹಣ ಬರಲು ಸಾಧ್ಯವಿಲ್ಲ ಸೆಪ್ಟೆಂಬರ್ 30ರ ಒಳಗೆ ಫಲಾನುಭವಿಗಳ ಪ್ರತಿಯೊಬ್ಬ ಗೃಹಿಣಿ ಖಾತೆಗೆ ಹಣ ಬರುತ್ತೆ ಎಂದು ಸಚಿವೆ ಭರವಸೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಖಾತೆಯ ಹಣ ರೂಪಾಯಿಗಳು ಕೂಡ ಮಹಿಳೆಯರ ಖಾತೆಗೆ ಅಕ್ಟೋಬರ್ ತಿಂಗಳ ಒಳಗೆ ಜಮಾ ಆಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನು ರೇಶನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು 2000 ರೂ. ಗಳನ್ನು ಪಡೆದುಕೊಳ್ಳಲು ಅನಿವಾರ್ಯವಾಗಿತ್ತು. ಸರ್ಕಾರ ಕೆಲವು ದಿನಗಳ ಅವಕಾಶವನ್ನು ಕೂಡ ಕೊಟ್ಟಿತ್ತು. ಹಲವರು ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡಿದ್ದಾರೆ ಆದರೆ ಇನ್ನೂ ಅಪ್ಡೇಟ್ ಆಗದೆ ಇರುವ ಕಾರಣ ರೇಷನ್ ಕಾರ್ಡ್ ತಿದ್ದುಪಡಿ ಸರಿಯಾಗಿ ಆಗಿದೆ.

ಹೀಗೆ ಮಾಡಿದರೆ ನಿಮಗೆ ಹಣ ಬರುತ್ತೋ ಇಲ್ಲವೋ ನೀವೇ ತಿಳಿದುಕೊಳ್ಳಬಹುದು.

  • ಮೊದಲನೆಯದಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://mahitikanaja.karnataka.gov.in/department ಭೇಟಿ ನೀಡಿ.
  • ಬಳಿಕ ಸ್ಕ್ರೋಲ್ ಡೌನ್ ಮಾಡಿದರೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಎನ್ನುವ ಆಯ್ಕೆ ಕಾಣಿಸುತ್ತದೆ. ಮೇಲೆ ಕ್ಲಿಕ್ ಮಾಡಿ.
  • ಈಗ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ಮೊದಲನೆಯ ಆಯ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಮೂರನೆಯದಾಗಿ ಹೊಸ ಪೇಜ್ ನಲ್ಲಿ ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಪಡಿತರ ಚೀಟಿ ಸಂಖ್ಯೆಯನ್ನು ಹಾಕಿದರೆ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಯಾರ ಖಾತೆಗೆ ಹಣ ಬಂದಿಲ್ಲವೋ ಅವರಿಗೆ ಹಣ ಬರುತ್ತದೆಯೋ ಇಲ್ಲವೋ ಎಂಬುದು ಕೂಡ ತಿಳಿದುಕೊಳ್ಳಬಹುದು. ರೇಷನ್ ಕಾರ್ಡ್ ಅಪ್ಡೇಟ್ ಆಗಿರುವ ಸಂಪೂರ್ಣ ಮಾಹಿತಿ ಇದರಲ್ಲಿ ನಿಮಗೆ ಲಭ್ಯವಿದೆ.

ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಬಹುದು: https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

Comments are closed.