Bajaj Chetak EV Scooter: ಹಳೇ ಪ್ರೀತಿ ಮತ್ತೆ ಸಿಕ್ಕಂತಹ ಅನುಭವ ಕೊಡಲಿದೆ ಬಜಾಜ್; ಅತಿ ಕಡಿಮೆ ಬೆಲೆ, ಅತ್ಯುತ್ತಮ ಮೈಲೇಜ್ ನೀಡುವ ಬಜಾಜ್ ಇವಿ ಚೇತಕ್ ಮಾರುಕಟ್ಟೆಗೆ

Bajaj Chetak EV Scooter: ನಮ್ಮ ದೇಶದಲ್ಲಿ ಹಲವು ಕಂಪನಿಗಳ ಬೈಕ್ಗಳು ಮಾರಾಟ ನಡೆಯುತ್ತಿದೆ. ಅದರಲ್ಲಿ ಹಿರೋ, ಟಿವಿಎಸ್ ಹಲವಾರು ಕಂಪನಿಗಳಿವೆ. ಇವುಗಳಲ್ಲಿ ಬಜಾಜ್ ಕೂಡ ಒಂದಾಗಿದೆ. ಬಜಾಜ್ ಕಂಪನಿಯು ಇತ್ತಿಚಿನ ವರ್ಷಗಳಲ್ಲಿ ಇ ಬೈಕ್ ಬಿಡುಗಡೆ ಮಾಡಿತ್ತು. ಆದರೆ ಅದಕ್ಕೆ ಜನರಿಗೆ ಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅದಕ್ಕೆ ಕಾರಣ ಬೈಕ್ನ ಬೆಲೆ ಜಾಸ್ತಿಯಾಗಿರುವುದು. ಇದೀಗ ಬಜಾನ್ ಕಂಪನಿಯು ಕಡಿಮೆ ಬೆಲೆಗೆ ಇ ಬೈಕ್ ಬಿಡುಗಡೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಬಿಡುಗಡೆ ಆಗಲಿರುವ ಬೈಕ್ನ ವಿಶೇಷತೆಗಳು:

ಈ ಬಜಾಜ್ ಚೇತಕ್ ಈ ಬೈಕ್ ಇಕೋ ಮೋಡ್ನಲ್ಲಿ 9೦ ಕಿಮೀ ಹಾಗೂ ಸ್ಪೋಟ್ಸ್ ಮೋಡ್ನಲ್ಲಿ 8೦ ಕಿಮೀ ರೇಂಜ ನೀಡುತ್ತದೆ. ಇದು ಐಯಾನ್ ಲೀಥಿಯಂ ಬ್ಯಾಟರಿ ಹೊಂದಿದೆ. ಈ ಬಜಾಜ್ ಚೇತಕ್ ಬೈಕ್ನ ವಿನ್ಯಾಸವು ಬಹಳ ಆಕರ್ಷಣೀಯವಾಗಿದ್ದು, ನೋಡಿದ ತಕ್ಷಣ ಖರೀದಿ ಮಾಡಬೇಕು. ನಾವು ಒಮ್ಮೆ ಓಡಿಸಬೇಕು ಎನಿಸುವಂತಿದೆ. ಸಂಪೂರ್ಣ ಬಾಡಿಯನ್ನು ಮೆಟಲ್ನಿಂದ ನಿರ್ಮಾಣ ಮಾಡಲಾಗಿದೆ. ಎಲ್ಇಡಿ ಲೈಟಿಂಗ್, ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸಹ ಇದೆ.

ಇದರಲ್ಲಿ ಬಳಕೆ ಮಾಡಿರುವ ಇಲೆಕ್ಟ್ರಿಕ್ ಮೋಟಾರ್ 2೦ಎನ್ಎಂ ಸಾಮರ್ಥ್ಯ ಹೊಂದಿದೆ. ಈ ಬೈಕ್ ಮ್ಯಾಟ್ ಕೋರ್ಸ್ ಗ್ರೇ, ಕೆರಬಿಯನ್ ಬ್ಲ್ಯೂ, ಸ್ಯಾಟಿನ್ ಬ್ಲಾಕ್ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದಿಷ್ಟೇ ಅಲ್ಲದೆ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಬೈಕ್ನ ಬೆಲೆ:

ಬಜಾಜ್ ಚೇತಕ್ ಇ ಬೈಕ್ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡದಿರಲು ಅದರ ಬೆಲೆಯೇ ಕಾರಣ ಎಂದರೆ ತಪ್ಪಲ್ಲ. ಮೊದಲ ಬೈಕ್ 1.40 ಲಕ್ಷ ರೂ.ಗೆ ಲಭ್ಯವಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆ ಆಗಲಿರುವ ಬೈಕ್ನ ಬೆಲೆ 1 ಲಕ್ಷ ರೂ. ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನೆರವಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಸಿಗುವ ಬಜಾಜ್ ಚೇತಕ್ ಬೈಕ್ 1.30 ಲಕ್ಷ ರೂ. ಆಗಿದೆ.

ಅಗಸ್ಟ್ ತಿಂಗಳಿನಲ್ಲಿ ಬಜಾಜ್ ಕಂಪನಿಯು ತನ್ನ ಬೈಕ್ಗಳ ಮಾರಾಟ ಹೆಚ್ಚಿಸಿಕೊಳ್ಳುವ ಸಲುವಾಗಿ ಇದ್ದಕ್ಕಿದ್ದಂತೆ ಬೈಕ್ಗಳ ಬೆಲೆಯನ್ನು ಇಳಿಸಿತ್ತು. ಅದು ಸರಿಸುಮಾರು 14,೦೦೦ ರೂ. ಕಡಿಮೆ ಮಾಡಿತ್ತು.

ಬಜಾಜ್ ಸಂಸ್ಥೆಯು ಹೊಸ ಇ ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಅದು ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗಲಿದೆ ಎನ್ನುವುದು ಗ್ರಾಹಕರ ಸಂತೋಷಕ್ಕೆ ಕಾರಣವಾಗಿದೆ. ಈ ಬಜಾಜ್ ಇ ಬೈಕ್ ಮಾರುಕಟ್ಟೆಗೆ ಬಂದರೆ ಉಳಿದ ಕಂಪನಿಗಳ ಬೈಕ್ಗಳ ಜೊತೆ ಪೈಪೋಟಿ ನೀಡುವುದು ಪಕ್ಕಾ ಎಂದು ಭಾವಿಸಲಾಗಿದೆ.

Comments are closed.