Pm Kisan Scheme: ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಫಲಾನುಭವಿಗಳ ಲಿಸ್ಟ್ನಲ್ಲಿ ಉಂಟೋ, ಇಲ್ಲವೋ ಇಂದೆ ಚೆಕ್ ಮಾಡಿಕೊಳ್ಳಿ

Pm Kisan Scheme: ಕೇಂದ್ರ ಸರ್ಕಾರವು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ವರ್ಷಕ್ಕೆ ೬೦೦೦ ರೂ.ಗಳನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವರ್ಷದ ಎರಡು ಕಂತುಗಳನ್ನು ಈಗಾಗಲೇ ಜಮಾ ಮಾಡಲಾಗಿದ್ದು, ಮುಂದಿನ ತಿಂಗಳು ಕೊನೆಯ ಕಂತು ಜಮಾ ಆಗುವ ಸಾಧ್ಯತೆಗಳಿವೆ. ಆದರೆ ಅದಕ್ಕೂ ಮುಂಚೆ ಅರ್ಹ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸರ್ಕಾರವು ಪ್ರಕಟಿಸಿದೆ. ಇದನ್ನು ಮೊದಲು ನೀವು ಚೆಕ್ ಮಾಡಿಕೊಳ್ಳಿ. ಇದರಲ್ಲಿ ನಿಮ್ಮ ಹೆಸರು ಇದ್ದಲ್ಲಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆ ಹಣ ಜಮಾ ಆಗಲಿದೆ.

ಚೆಕ್ ಮಾಡುವುದು ಹೇಗೆ?:

ಈ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಹಾಗೂ ಅನರ್ಹರ ಹೆಸರನ್ನು ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅದಕ್ಕೆ ಮೊದಲು ನೀವು ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ಗೆ https://pmkisan.gov.in/ ಭೇಟಿ ನೀಡಬೇಕು. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳನ್ನು ಒಂದಾದ ನಂತರ ಒಂದನ್ನು ಭರ್ತಿ ಮಾಡುತ್ತ ಹೋಗಬೇಕು. ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಪ್ರೆಸ್ ಮಾಡಬೇಕು. ಆಗ ನಿಮಗೆ ಅಲ್ಲಿ ಹಲವು ಆಯ್ಕೆಗಳು ಕಾಣಿಸುತ್ತದೆ. ಅಲ್ಲಿ ಆಧಾರ್ ಅಥರೈಜೆಸನ್ ಸ್ಟೇಟಸ್ (Aadhaar authentication status) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಸಕ್ಸಸ್ಫುಲಿ ಆಥರೈಸೈಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದರ್ಥ. ನೀವು ನಿಶ್ಚಿಂತೆಯಿಂದ ಇರಬಹುದು.

ಅದೇ ರೀತಿಯಾಗಿ ಟೋಟಲ್ ಇನ್ಲೆಜಿಬಲ್ ಎನ್ನುವ ಆಯ್ಕೆಯೂ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದಾಗ ಅನರ್ಹ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ನೀವು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ್ ಒನ್ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಪಹಣಿ, ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆ ನೀಡಿ ಈ ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ರೀತಿ ಈ ಕೆವೈಸಿ ಆಗದ ರೈತರನ್ನು ಅನರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿರುತ್ತದೆ.

Comments are closed.