Agriculture: ವರ್ಷಕ್ಕೆ 20 ಲಕ್ಷ ಪ್ಯಾಕೇಜ್: ಯಾವುದೇ ಐಟಿ ಕಂಪನಿ ಅಲ್ಲ, ಈ ಒಂದು ಕೃಷಿಯಿಂದ ಸಂಪಾದಿಸಬಹುದು ಲಕ್ಷ ಹಣ!

Agriculture: ಭಾರತವು ಮೊದಲಿನಿಂದಲೂ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿ ಕೃಷಿಯೇ ಮುಖ್ಯ ಕಸುಬು. ಉಳಿದಿದ್ದೆಲ್ಲ ಎರಡನೆ ಆದ್ಯತೆಯ ಉದ್ಯೋಗವಾಗಿದೆ. ಮೊದಲಿನಿಂದ ಪ್ರಪಂಚದ ಇತರ ರಾಷ್ಟ್ರಗಳಿಗೆ ಕೃಷಿ ಉತ್ಪನ್ನಗಳನ್ನು ನಾವು ರಫ್ತು ಮಾಡುತ್ತಿದ್ದೇವೆ. ಅದರಲ್ಲೂ ನಮ್ಮ ದೇಶದ ಸಾಂಬಾರು ಪದಾರ್ಥಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಮೊದಲಿನಿಂದಲೂ ಇದೆ. ಈ ರೀತಿ ರೈತರು ಸಾಂಬಾರ ಪದಾರ್ಥಗಳಾದ ಲವಂಗ, ದಾಲ್ಚಿನ್ನಿಗಳನ್ನು ಬೆಳೆಯುವುದರಿಂದ ಸಾಕಷ್ಟು ಲಾಭಗಳಿಸಬಹುದಾಗಿದೆ.

ದಾಲ್ಚಿನ್ನಿಯು ಅಡುಗೆಗೆ ಮಾತ್ರ ಘಮ ನೀಡುವುದು ಮಾತ್ರವಲ್ಲದೆ ರೈತರು ಆರ್ಥಿಕವಾಗಿ ಸಬಲವಾಗಲು ಸಹಕಾರಿಯಾಗಿದೆ. ದಾಲ್ಚಿನ್ನಿಯನ್ನು ಸುಲಭವಾಗಿ ಬೆಳೆಯಬಹುದು.

ದಾಲ್ಚಿನ್ನಿಯನ್ನು ಅತ್ಯಂತ ಸುಲಭವಾಗಿ ಮಾಡುವ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಕ್ಕೆ ಫಲವತ್ತಾದ ಮಣ್ಣು, ರಾಸಾಯನಿಕ ಗೊಬ್ಬರ, ಅತಿಯಾದ ಆರೈಕೆ ಯಾವುದೂ ಅಗತ್ಯವಿಲ್ಲ. ನಿಮಗೆ ಇರುವಷ್ಟೇ ಜಾಗದಲ್ಲಿ ದಾಲ್ಚಿನ್ನಿಯನ್ನು ಬೆಳೆದು ಲಾಭ ಗಳಿಸಬಹುದು.

ನಿಮಗೆ ಒಂದು ಎಕರೆ ಜಮೀನಿದ್ದರೆ ಅಲ್ಲಿ ಒಂಬತ್ತು ಅಡಿ ಅಂತರದಲ್ಲಿ ಒಂದು ಗಿಡಗಳನ್ನು ನೆಟ್ಟು ದಾಲ್ಚಿನ್ನಿ ಬೆಳೆಯಬಹುದು. ಒಂದು ಎಕರೆಗೆ 75೦ ಗಿಡಗಳನ್ನು ಹಚ್ಚಬಹುದಾಗಿದೆ.

ಎರಡು ವಿಧ

ದಾಲ್ಚಿನ್ನಿ ಕೃಷಿಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ಬೀಜವನ್ನು ನೆಟ್ಟು ಅದನ್ನು ಆರೈಕೆ ಮಾಡುವುದು. ಎರಡನೆಯದು ಡೊಂಗೆ ಕೃಷಿ. ಡೊಂಗೆ ಕೃಷಿ ಎಂದರೆ ಸಣ್ಣ ಟೊಂಗೆಯನ್ನು ಎರಡು ಇಂಚಿನಷ್ಟು ಸೀಳಬೇಕು. ಅದರ ಮೇಲಿನ ಭಾಗಕ್ಕೆ ಮಣ್ಣಿನ ಉಂಡೆಯ ಸಪೋರ್ಟ್ ನೀಡಬೇಕು. ಹೀಗೆ ಮಾಡಿದ ನಾಲ್ಕು ತಿಂಗಳಿನಲ್ಲಿ ಬೇರು ಬೆಳೆಯುತ್ತದೆ. ನಂತರ ಅದನ್ನು ಭೂಮಿಯಲ್ಲಿ ನೆಡಬೇಕು. ಈ ರೀತಿ ಮಾಡುವ ದಾಲ್ಚಿನ್ನಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ದಾಲ್ಚಿನ್ನಿ ಬೀಜವು ಸಹ ಬಹು ಬೇಡಿಕೆಯ ಪದಾರ್ಥವಾಗಿದೆ.

ದಾಲ್ಚಿನ್ನಿ ಎಲೆಗಳಿಗೂ ಬಹು ಬೇಡಿಕೆ ಇದ್ದು, ಇದನ್ನು ಬೇಸಿಗೆಯಲ್ಲಿ ತೆಗೆದು ಒಣಗಿಸಿ ಇಡಬೇಕು. ದಾಲ್ಚಿನ್ನಿಯ ತೊಗಟೆಯನ್ನು ಮಾತ್ರ ಕಡ್ಡಾಯವಾಗಿ ಬೇಸಿಗೆ ಕಾಲದಲ್ಲಿ ಮಾತ್ರ ತೆಗೆಯಬೇಕು. ನಂತರ ಸರಿಯಾಗಿ ಒಣಗಿಸಿ ಮಾರಾಟ ಮಾಡಬೇಕು. ತೊಗಟೆ ತೆಗೆದು ಬಿಟ್ಟೇವು ಎಂದು ಚಿಂತಿಸುವ ಅಗತ್ಯವಿಲ್ಲ. ದಾಲ್ಚಿನ್ನಿಯು ಒಮ್ಮೆ ಗಟ್ಟಿಯಾಗಿ ಬೇರು ಕೊಟ್ಟ ನಂತರ ವರ್ಷದಿಂದ ವರ್ಷಕ್ಕೆ ಹೆಮ್ಮರಾಗಿ ಬೆಳೆಯುತ್ತದೆ.

ಅಧಿಕ ಲಾಭ:

ನೀವು ಒಂದು ಎಕರೆ ಪ್ರದೇಶದಲ್ಲಿ ದಾಲ್ಚಿನ್ನಿ ಕೃಷಿಯನ್ನು ಮಾಡಿದರೆ ಒಂದು ವರ್ಷಕ್ಕೆ 18-2೦ ಲಕ್ಷ ರೂ. ಆದಾಯ ಗಳಿಸಬಹುದು. ಅಲ್ಲದೆ ದಾಲ್ಚಿನ್ನಿಯ ಮಧ್ಯದಲ್ಲಿ ಬೇರೆ ಬೇರೆ ಸಣ್ಣ ಸಣ್ಣ ಗಿಡಗಳನ್ನು ನೆಡುವುದರಿಂದ ಅದರಿಂದಲೂ ಆದಾಯ ಗಳಿಸಬಹುದಾಗಿದೆ.

Comments are closed.