Gruhalakshmi Scheme: NPCI ಚೆಕ್ ವಿಫಲ, ಪುಷ್ ಟು ಡಿಬಿಡಿ, ಪೆಂಡಿಂಗ್ ಈತರಹದ ಮೆಸೇಜ್ ಯಾಕೆ ಬರ್ತಿದೆ ಗೊತ್ತಾ? 2,000 ರೂ. ಹಣ  ಬೇಕು ಅಂದ್ರೆ ಈ ಕೆಲಸ ಮೊದಲು ಮಾಡಿ

Gruhalakshmi Scheme: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಸೇರಿವೆ. ಈ ಎರಡು ಯೋಜನೆಗೆ ನಾವು ಅರ್ಜಿ ಸಲ್ಲಿಸಿದ್ದೇವೆ. ಆದರೂ ನಮ್ಮ ಖಾತೆಗೆ ಹಣ ಸಂದಾಯವಾಗಿಲ್ಲ ಎನ್ನುವ ಗೊಂದಲ,ಚಿಂತೆ ನಿಮಗೆ ಇರಬಹುದು. ಆದರೆ ಚಿಂತೆ ಬಿಡಿ, ಈಗ ನಾವು ಹೇಳುವ ರೀತಿ ಮಾಡಿ. ನಿಮ್ಮ ಹಣ ಆದಷ್ಟು ಶೀಘ್ರ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದನ್ನೂ ಓದಿ: Electrical Vehicle: ಕೇವಲ 1419 ರೂ.ಗೆ ಮನೆಗೆ ತನ್ನಿ ಇ-ಬೈಕ್; ಇದನ್ನು ಓಡಿಸಲು ಲೈಸನ್ಸ, ಬೇಡ ರಿಜಿಸ್ಟ್ರೇಶನ್ ಕೂಡ ಬೇಕಿಲ್ಲ, ಖರೀದಿಗೆ ಮುಗಿ ಬಿದ್ದ ಜನ!

ಸರ್ಕಾರ ಗ್ಯಾರಂಟಿ ಯೋಜನೆಗಳ (Government Guarantee Scheme) ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದರಿಂದ ಇದರಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಸಹಜ. ಕೊಟ್ಯಂತರ ಜನರ ಖಾತೆಗೆ ಹಣ ವರ್ಗಾವಣೆ ಮಾಡುವುದು ಸಣ್ಣ ವಿಚಾರವೇನಲ್ಲ. ಅಲ್ಲದೆ ಕೆಲವೊಮ್ಮೆ ನಮ್ಮ ತಪ್ಪಿನಿಂದಾಗಿಯೂ ಹಣ ಬಾರದೆ ಇರಬಹುದು. ಈಗ ಅಂತಹ ತಪ್ಪುಗಳ ಕುರಿತು ನೋಡೋಣ

ಎನ್ಪಿಸಿಐ ವಿಫಲ: (IPCI Check Failed)

ನೀವು ನಿಮ್ಮ ಖಾತೆಗೆ ಆಧಾರ್ ನಂಬರ್ ನ (Aadhaar Number) ಸರಿಯಾಗಿ ಜೋಡಣೆ ಮಾಡದಿದ್ದಲ್ಲಿ, ಅಥವಾ ಜೋಡಣೆ ಮಾಡದಿದ್ದಲ್ಲಿ ನಿಮಗೆ ಯಾವುದೇ ಯೋಜನೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ನೀವು ಯಾವ ಬ್ಯಾಂಕ್ ಖಾತೆಯನ್ನು ಸರ್ಕಾರಿ ಯೋಜನೆಗಳಿಗೆ ಲಿಂಕ್ ಮಾಡಿದ್ದಿರೋ ಆ ಬ್ಯಾಂಕ್ಗೆ ಭೇಟಿ ನೀಡಿ ಎನ್ಪಿಸಿಐ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಸರಿಯಾಗಿ ಜೋಡಣೆ ಆಗದಿದ್ದಲ್ಲಿ ಬ್ಯಾಂಕ್ನವರು ನೀಡುವ ಅರ್ಜಿ ಭರ್ತಿ ಮಾಡಿ, ಅದರ ಜೊತೆ ನಿಮ್ಮ ಆಧಾರ್ ಕಾರ್ಡಿನ ಕಾಪಿಯನ್ನು ನೀಡಿ. ಈ ಒಂದು ಸಮಸ್ಯೆಯಿಂದಲೂ ಹಲವರ ಖಾತೆಗೆ ಹಣ ಬಂದಿರುವುದಿಲ್ಲ. ಇದನ್ನೂ ಓದಿ: Hydrogen Car:  ದೇಶದಲ್ಲಿ ಹೈಡ್ರೋಜನ್ ಕಾರು ಬಳಕೆ; ಅರ್ಧದಷ್ಟು ಇಳಿಯಲಿದೆ ಪೆಟ್ರೋಲ್ ದರ!

ಆಧಾರ್ ಚೆಕ್ ವಿಫಲ: (Aadhaar Check Failed)

ಈಗ ಯಾವುದೇ ಯೋಜನೆ ಫಲಾನುಭವಿಯಾಗಲು ಆಧಾರ್ ಕಡ್ಡಾಯವಾಗಿದೆ. ನೀವು ಅರ್ಜಿ ಸಲ್ಲಿಸುವ ವೇಳೆ ಆಧಾರ್ ನೀಡಿರಬಹುದು. ಆದರೆ ಆಧಾರ್ನಲ್ಲಿರುವ ಹಾಗೂ ನೀವು ನೀಡಿರುವ ವಿಳಾಸದಲ್ಲಿ, ನಿಮ್ಮ ಹೆಸರಿನಲ್ಲಿ ಏನೋ ಒಂದು ಸಣ್ಣ ತಪ್ಪಿನಿಂದಾಗಿ ಆಧಾರ್ ಸರಿಯಾಗಿ ಸ್ವೀಕರಿಸಿರುವುದಿಲ್ಲ. ಆದ್ದರಿಂದ ಮೊದಲು ನೀವು ನಿಮ್ಮ ವಿಳಾಸ, ಹೆಸರು, ಹಾಗೂ ಆಧಾರ್ನಲ್ಲಿ ಇರುವ ಹೆಸರು, ವಿಳಾಸ ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿ. ಆಧಾರ್ ಕಾರ್ಡಿನಲ್ಲಿ ಏನಾದರೂ ಬದಲಾವಣೆ ಆಗಬೇಕು ಎಂದಾದರೆ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.

ಪುಷ್ ಟು ಡಿಬಿಟಿ: (Push To DBT)

ಅನ್ನಭಾಗ್ಯ ಯೋಜನೆಯಾಗಿರಲಿ, ಗೃಹಲಕ್ಷ್ಮಿ ಯೋಜನೆ ಆಗಿರಲಿ ಅದರ ಸ್ಟೇಟಸ್ ಆಗಾಗ ಚೆಕ್ ಮಾಡುತ್ತಿರಬೇಕು. ನಿಮ್ಮ ಸ್ಟೇಟಸ್ ಚೆಕ್ ಮಾಡುವ ವೇಳೆ ಪುಷ್ ಟು ಡಿಬಿಟಿ ಎಂದು ತೋರಿಸಿದಲ್ಲಿ ಸರ್ಕಾರದಿಂದ ಬ್ಯಾಂಕ್ಗೆ ಹಣ ಕಳುಹಿಸಲ್ಪಟ್ಟಿದೆ. ಆದರೆ ನಿಮ್ಮ ಖಾತೆಗೆ ಜಮಾ ಆಗಿಲ್ಲ ಎಂದರ್ಥ. ಹಾಗಾಗಿ ಕೂಡಲೇ ಬ್ಯಾಂಕ್ಗೆ ಭೇಟಿ ನೀಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಆಗ ಬ್ಯಾಂಕ್ನಲ್ಲಿರುವ ಅಧಿಕಾರಿಗಳು ಅದನ್ನು ಸರಿಪಡಿಸುತ್ತಾರೆ. ಈ ರೀತಿ ಆದಲ್ಲಿ ಒಂದು ವಾರದೊಳಗೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಯಾವುದೇ ರೀತಿಯ ಭಯ ಬೇಡ.

ಅರ್ಜಿ ಪೆಂಡಿಂಗ್; (Pending)

ನೀವು ಗ್ಯಾರಂಟಿ ಯೋಜನೆಗೆ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ಸ್ವೀಕರಿಸದಿದ್ದಲ್ಲಿ ಈ ರೀತಿಯ ಸ್ಟೇಟಸ್ ನಿಮಗೆ ಕಾಣಿಸುತ್ತದೆ. ಸೇವೆ ಕೇಂದ್ರದಲ್ಲಿ ನಿಮ್ಮ ಅರ್ಜಿ ಸ್ವೀಕಾರವಾಗಿದೆ ಎಂದು ಹೇಳಬಹುದು. ಆದರೆ ಸರ್ಕಾರ ನಿಮ್ಮ ಅರ್ಜಿಯನ್ನು ಸ್ವೀಕರಿಸಿರುವುದಿಲ್ಲ. ಆದ್ದರಿಂದ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸದ್ಯಕ್ಕೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿಲ್ಲ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಸ್ವೀಕರಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕಾದು ಅರ್ಜಿ ಸಲ್ಲಿಸಿ. ಸರ್ಕಾರ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತನ್ನ ಯೋಜನೆ ಮುಟ್ಟಿಸುವ ಗುರಿ ಹೊಂದಿದೆ. ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ. ಇದನ್ನೂ ಓದಿ: Ration Card: ಪಡಿತರ ಚೀಟಿದಾರರಿಗೆ ಮತ್ತೆ ಸಂಕಷ್ಟ; ಕೇಂದ್ರ ಸರ್ಕಾರದ ಮಹತ್ವದ ಆದೇಶ ಏನು ಗೊತ್ತೇ?  

Comments are closed.