Ration Card: ಪಡಿತರ ಚೀಟಿದಾರರಿಗೆ ಮತ್ತೆ ಸಂಕಷ್ಟ; ಕೇಂದ್ರ ಸರ್ಕಾರದ ಮಹತ್ವದ ಆದೇಶ ಏನು ಗೊತ್ತೇ?  

Ration Card: ನಮ್ಮ ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯು ಜಾರಿಯಲ್ಲಿದ್ದು, ಇದರ ಅನ್ವಯವೇ ಪಡಿತರ ಚೀಟಿದಾರರಿಗೆ ಅಕ್ಕಿ, ರಾಗಿ, ಸಕ್ಕರೆ, ಜೋಳ ಸೇರಿದಂತೆ ಧವಸ ಧಾನ್ಯಗಳನ್ನು ವಿತರಿಸಲಾಗುತ್ತದೆ. ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಬಿಪಿಎಲ್ ಕಾರ್ಡ್ (BPL card) ಮಾನದಂಡವಾಗಿ ಉಪಯೋಗಿಸಲಾಗುತ್ತದೆ. ಇನ್ನು ಮುಂದೆ ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಸುಳ್ಳು ದಾಖಲೆ ನೀಡಿ ಅಥವಾ ಮೋಸದಿಂದ ಪಡೆದುಕೊಂಡವರ ಬಿಪಿಎಲ್ ಪಡಿತರ ಚೀಟಿ ರದ್ದಾಗುವ ದೂರವಿಲ್ಲ. ಹೀಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿ ಶಾಕ್  ನೀಡಲು ಸರ್ಕಾರ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.

ಹಾಗೇಯೇ ಕೇಂದ್ರ ಸರ್ಕಾರವು ಸಹ ಬಿಪಿಎಲ್ ಕಾರ್ಡ್ದಾರರಿಗೆ ಶಾಕ್ ನೀಡಲು ಸಿದ್ಧತೆ ನಡೆಸಿದೆ. ಎಲ್ಪಿಜಿ ಸಬ್ಸಿಡಿ (LPG Subsidy)  ಹಾಗೂ ಬಿಪಿಎಲ್ ಪಡಿತರ ಚೀಟಿ ಮೌಲ್ಯಮಾಪನ ಮಾಡಲು ನಿರ್ಧರಿಸಿದೆ. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಆಹಾರ ಭದ್ರತಾ ಕಾಯ್ದೆ:

ಸುಮಾರು ನಾಲ್ಕು ಲಕ್ಷ ಕೋಟಿ ರೂ.ಗಳ ಆಹಾರ ಭದ್ರತಾ ಕಾಯ್ದೆ ಮತ್ತು ಎಲ್ಪಿಜಿ ಸಬ್ಸಿಡಿಯನ್ನು ಯಾರ್ಯಾರು ಪಡೆದುಕೊಂಡಿದ್ದಾರೆ ಎನ್ನುವ ಲೆಕ್ಕಚಾರವನ್ನು ಕೇಂದ್ರ ಸರ್ಕಾರ ಶುರುಮಾಡಿದೆ. ಇದನ್ನು ಸರಿಯಾಗಿ ಜಾರಿ ಮಾಡಿ ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಸರ್ಕಾರದ ಯೋಜನೆ ಮುಟ್ಟಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.

ಈ ಆಹಾರ ಭದ್ರತಾ ಕಾಯ್ದೆ ಹಾಗೂ ಎಲ್ಪಿಜಿ ಸಬ್ಸಿಡಿ ಪಡೆಯುವಲ್ಲಿ ಎಲ್ಲಿ ಸೋರಿಕೆಯಾಗುತ್ತಿದೆ. ಯಾರಿಂದ ಈ ಸೋರಿಕೆ ಆಗುತ್ತಿದೆ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಸುಳ್ಳು ಮಾಹಿತಿ ನೀಡಿ ಅಥವಾ ಸುಳ್ಳು ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರಿಗೆ ಶಾಕ್ ನೀಡಲಿದೆ.

ಕೇಂದ್ರ ಸರ್ಕಾರದ ನೀತಿ ಆಯೋಗದ ಅಡಿಯಲ್ಲಿ ಬರುವ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿ ಎರಡು ಸೇರಿಕೊಂಡು ಈ ರೀತಿಯ ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನಾಲ್ಕು ಲಕ್ಷ ಕೋಟಿ ರೂ. ಹೊರತಾಗಿಯೂ ಅಧಿಕ ವೆಚ್ಚ ತಗಲುತ್ತಿರುವುದು ಇದಕ್ಕೆ ಕಾರಣವಾಗಿದೆ.

ಹೀಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರಿಗೆ ಸದ್ಯವೇ ಶಾಕ್ ಎದುರಾಗಲಿದೆ. ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಅಲ್ಲದೆ ಇದು ನೀವು ಪಡೆದುಕೊಂಡ ಸರ್ಕಾರಿ ಯೋಜನೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Comments are closed.