Bank Loan: ಸಾಲ ಮಾಡಿ ಕಾರು ಬೈಕ್ ಖರೀಸಿದವರಿಗೆ ಗುಡ್ ನ್ಯೂಸ್; ಆರ್ ಬಿ ಐ ಹೊಸ ರೂಲ್ಸ್!

Bank Loan: ಈಗ ಪ್ರತಿಯೊಬ್ಬರ ಮನೆಯಲ್ಲೂ ಬೈಕ್ ಅಥವಾ ಕಾರು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಈ ಬ್ಯೂಸಿ ಲೈಫ್ನಲ್ಲಿ ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಲು ಅಥವಾ ನಮಗೆ ಬೇಕಾದ ಸ್ಥಳ ತಲುಪಲು ಬೈಕ್ ಅಥವಾ ಕಾರು ಅಗತ್ಯ. ಬೈಕ್ ಕೊಳ್ಳುವಾಗ ಎಷ್ಟು ಜನರ ಬಳಿ ಹಣ ಇರುವುದಿಲ್ಲ. ಇದಕ್ಕಾಗಿಯೇ ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಸಾಲ ಮಾಡಿರುತ್ತಾರೆ. ಆದರೆ ಬೈಕ್ ತೆಗೆದುಕೊಂಡ ನಂತರ ಇಎಂಐ ಅಥವಾ ಸಾಲವನ್ನು ಸರಿಯಾಗಿ ಮರುಪಾವತಿ ಮಾಡದಿದ್ದರೆ ಬ್ಯಾಂಕ್ಗಳು ಬೈಕ್ಗಳನ್ನು ಸೀಜ್ ಮಾಡುತ್ತವೆ. ನಾವು ಸಾಲ ಪಾವತಿ ಮಾಡಿದ ನಂತರ ವಾಪಸ್ ನೀಡುತ್ತಾರೆ. ಇದಕ್ಕಾಗಿಯೇ ಹಲವರನ್ನು ನೇಮಿಸಿಕೊಂಡಿರುತ್ತಾರೆ. ಇವರಿಗೆ ರಿಕವರಿ ಎಜೆಂಟ್ ಎಂದು ಕರೆಯಲಾಗುತ್ತದೆ. ಆದರೆ ಇನ್ಮುಂದೆ ನಿಮ್ಮ ಬೈಕ್ ಸೀಜ್ ಮಾಡುವ ಹಕ್ಕು ಬ್ಯಾಂಕ್ಗೆ ಇಲ್ಲ. ಇದನ್ನೂ ಓದಿ: TATA Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಇಷ್ಟದ ಕಾರು; ಬಡವರ ಕೈಗೆಟುಕುವ ಕಾರು| ಅಬ್ಬಾ ಇಷ್ಟು ಕಡಿಮೆ ಬೆಲೆನಾ!

ವೆಹಿಕಲ್ ಲೋನ್ (Vehicle Loan) ಮಾಡಿದವರಿಗೆ ಗುಡ್ ನ್ಯೂಸ್:

ಹೌದು, ನೀವು ಕೇಳುತ್ತಿರುವುದು ಸತ್ಯ. ಇನ್ಮುಂದೆ ರಿಕವರಿ ಏಜೆಂಟ್ಗಳು ಬಂದು ನಿಮ್ಮ ಬೈಕ್ ಸೀಜ್ ಮಾಡಿದಲ್ಲಿ ನೀವು ಅವರ ವಿರುದ್ಧ ಮೊಕದ್ದಮೆ ದಾಖಲಿಸಬಹುದು. ನೀವು ಬೈಕ್ ತೆಗೆದುಕೊಂಡ ನಂತರ ಸರಿಯಾಗಿ ಇಎಂಐ ಪಾವತಿ ಮಾಡುತ್ತಿದ್ದೀರಿ. ಒಂದೆರಡು ತಿಂಗಳು ಸ್ವಲ್ಪ ತಡವಾಗಿ ಪಾವತಿ ಮಾಡಿದಿರಿ ಎಂದು ರಿಕವರಿ ಎಜೆಂಟ್ಗಳು ಬಂದು ನಿಮ್ಮ ಬೈಕ್ ಹೊತ್ತೊಯ್ಯುವ ಹಾಗಿಲ್ಲ ಎಂದು ಹೈಕೋಟ್ ತಾಕೀತು ಮಾಡಿದೆ.

ನ್ಯಾಯಮೂರ್ತಿ ರಾಜೀವ ಚಂದ್ರನ್ ಪ್ರಸಾದ್ ಅವರು ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದಾರೆ. ರಿಕವರಿ ಎಜೆಂಟ್ಗಳು ವಾಹನವನ್ನು ವಶಪಡಿಸಿಕೊಳ್ಳುವುದು ಕಾನೂನು ಬಾಹಿರ ಕ್ರಮವಾಗಿದೆ. ಇದು ಜೀವನೋಪಾಯ  ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ರಿಕವರಿ ಎಜೆಂಟ್ಗಳ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಬ್ಯಾಂಕ್ಗಳಿಗೆ ದಂಡ ವಿಧಿಸಿದ ಹೈಕೋರ್ಟ್ (High Court)

ತಪ್ಪಿತಸ್ಥ ಬ್ಯಾಂಕುಗಳು ಹಾಗೂ ಹಣಕಾಸು ಕಂಪನಿಗಳಿಗೆ ಹೈಕೋರ್ಟ್ ತಲಾ 5೦,೦೦೦ ರೂ. ದಂಡ ವಿಧಿಸಿದೆ. ಇಎಂಐ ಪಾವತಿ ಮಾಡುವಲ್ಲಿ ವಿಳಂಭವಾದಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲು ಬ್ಯಾಂಕ್ ಹಾಗೂ ರಿಕವರಿ ಎಜೆಂಟ್ಗಳನ್ನು ಬಳಸುವ ಹಾಗಿಲ್ಲ ಎಂದು ತಿಳಿಸಿದೆ.

Comments are closed.