Business Idea: ಈ ಪುಟ್ಟ ಪಕ್ಷಿ ಸಾಕಾಣಿಕೆ ಮಾಡಿ ನೋಡಿ; ವರ್ಷಕ್ಕೆ 300 ಮೊಟ್ಟೆ; ಆದಾಯ ಲಕ್ಷ ಲಕ್ಷ! ಬದುಕು ಬಂಗಾರ ಮಾಡೋ ಆ ಚಿನ್ನದ ಪಕ್ಷಿ ಯಾವುದು ಗೊತ್ತಾ?

Business Idea: ಈಗಿನ ಜನರು ಹೆಚ್ಚಿನದಾಗಿ ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ರೀತಿ ಸ್ವ-ಉದ್ಯೋಗ ಮಾಡುವುದರಿಂದ ಸ್ವತಂತ್ರವಾಗಿ ಇರಲು ಸಾಧ್ಯ. ಅಲ್ಲದೆ ಯಾವುದೇ ಒತ್ತಡ ಇರುವುದಿಲ್ಲ. ಈ ರೀತಿ ಸ್ವಂತ ಉದ್ಯೋಗ ಮಾಡಲು ಇಷ್ಟಪಡುತ್ತಿರುವವರು ಹೆಚ್ಚಾಗಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡಲು ಮುಂದಾಗುತ್ತಾರೆ. ಈ ರೀತಿ ಕುರಿ, ಕೋಳಿ ಸಾಕಾಣಿಕೆ ಜೊತೆ ಪಸಂಟ್ ಎನ್ನುವ ಕಾಡು ಜಾತಿಯ ಪಕ್ಷಿ ಸಾಕಾಣಿಕೆ ಮಾಡುವುದರಿಂದ ನೀವು ಲಕ್ಷಾಂತರ ರೂ. ಲಾಭ ಗಳಿಸಬಹುದು.

ಪಸೆಂಟ್ ಪಕ್ಷಿಯು ಕಾಡು ಪಕ್ಷಿಯಾಗಿರುತ್ತದೆ. ಇದು ವರ್ಷಕ್ಕೆ 25೦-3೦೦ ಮೊಟ್ಟೆಗಳನ್ನು ಇಡುತ್ತದೆ. ಇದು ಗಾತ್ರದಲ್ಲಿ ಸಣ್ಣದಾಗಿರುತ್ತದೆ. ಮಾರುಕಟ್ಟೆಯಲ್ಲಿ ಇದರ ಮಾಂಸಕ್ಕೆ ಬೇಡಿಕೆ ಇದೆ. ಹಾಗಾಗಿ ನೀವು ಪಸೆಂಟ್ ಪಕ್ಷಿ ಸಾಕಾಣಿಕೆ ಮಾಡುವುದರಿಂದ ಲಕ್ಷ ಲಕ್ಷ ರೂ. ಲಾಭ ಗಳಿಸಬಹುದು. ಪಸೆಂಟ್ ಪಕ್ಷಿಯು ಅಳಿವಿನಂಚಿನಲ್ಲಿರುವುದರಿಂದ ಇದರ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ.

ಪಸೆಂಟ್ ಪಕ್ಷಿಯ ಮಾಂಸವನ್ನು ತಿನ್ನುವವರು ಪಸೆಂಟ್ ಪಕ್ಷಿ ಸಾಕಾಣಿಕೆ ಮಾಡಿದ ರೈತರಿಂದ ಖರೀದಿಸಲು ಬಯಸುತ್ತಾರೆ. ಮನೆಯ ಅಂಗಳದಲ್ಲಿ ಸಣ್ಣದಾದ ಒಂದು ಶೆಡ್ ನಿರ್ಮಾಣ ಮಾಡಿ ಸಾಕಾಣಿಕೆ ಆರಂಭಿಸಬಹುದು. ಒಂದು ಪಸೆಂಟ್ ಪಕ್ಷಿಯು ವರ್ಷಕ್ಕೆ 3೦೦ ಮೊಟ್ಟೆ ಇಡುತ್ತದೆ.

ನೀವು ಒಂದು 1೦ ಪಸೆಂಟ್ ಪಕ್ಷಿಗಳನ್ನು ಸಾಕಾಣಿಕೆ ಮಾಡುವುದರಿಂದ ವ್ಯವಹಾರ ಆರಂಭಿಸಬಹುದು. ನೀವು ವರ್ಷದಲ್ಲಿ ೩೦೦೦ ಮೊಟ್ಟೆಗಳನ್ನು ಮಾರಾಟ ಮಾಡಬಹುದು.ಈ ಮೂಲಕವೂ ನೀವು ಆದಾಯ ಗಳಿಸಬಹುದು. ಕೋಳಿ ಹಾಗೂ ಭಾತುಕೋಳಿ ಮೊಟ್ಟೆಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಪಸೆಂಟ್ ಪಕ್ಷಿಯು ಬಹಳ ಬೇಗ ಬೆಳೆಯುತ್ತದೆ. ಹುಟ್ಟಿದ 25-3೦ ದಿನದೊಳಗೆ 2೦೦ ಗ್ರಾಂ ತೂಕ ಹೊಂದಿರುತ್ತದೆ.

ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಗಿಂತ ಪಸೆಂಟ್ ಪಕ್ಷಿಯ ಸಾಕಾಣಿಕೆಯು ಬಹಳ ಕಡಿಮೆಯಾಗಿದೆ. ಪಸೆಂಟ್ ಒಂದು ಕಾಡು ಪಕ್ಷಿಯಾಗಿದೆ.ಅದಕ್ಕಾಗಿ ಪಸೆಂಟ್ ಪಕ್ಷಿಯ ಸಾಕಾಣಿಕೆ ಮಾಡುವ ಮೊದಲು ಸರ್ಕಾರದಿಂದ ಅನುಮತಿ ಪಡೆಯುವುದು ಅವಶ್ಯಕವಾಗಿದೆ.

ಮಾರುಕಟ್ಟೆಯಲ್ಲಿ ಪಸೆಂಟ್ ಪಕ್ಷಿಗೆ ವಿಪರೀತ ಬೇಡಿಕೆ ಇದೆ. ಅವುಗಳ ತೂಕಕ್ಕೆ ಅನುಗುಣವಾಗಿ ಅದನ್ನು ಮಾರಾಟ ಮಾಡಲಾಗುತ್ತದೆ. ಪಸೆಂಟ್ ಪಕ್ಷಿಯ ಸರಾಸರಿ ತೂಕ 3೦೦ ಗ್ರಾಂ. ಇರುತ್ತದೆ. ಒಂದು ಹಕ್ಕಿಯನ್ನು ಸರಾಸರಿ 3೦೦ ರೂ.ನಿಂದ 5೦೦ ರೂ.ಗೆ ಮಾರಾಟ ಮಾಡಬಹುದು.

Comments are closed.