Kannada Astrology: ಅಂತೂ ರಾಹು-ಕೇತು ಕಾಟದಿಂದ ಸಿಕ್ತು ಮುಕ್ತಿ ! ಇನ್ಮುಂದೆ ಈ ಮೂರು ರಾಶಿಯವರಿಗೆ ರಾಜಯೋಗ

Kannada Astrology: ಗ್ರಹಗಳ ಚಲನೆಗೆ ಸಂಬಂಧಪಟ್ಟಂತೆ ಈ ವರ್ಷವು ಬಹಳ ಮಹತ್ವದ್ದಾಗಿದೆ.ಈ ವರ್ಷ ನಿಧಾನ ಚಲಿಸುವ ಗೃಹಗಳು, ಹಿಮ್ಮುಖವಾಗಿ ಚಲಿಸುವ ಗ್ರಹಗಳು ಎಂದೇ ಕರೆಯಲ್ಪಡುವ ರಾಹು-ಕೇತು ಗೃಹಗಳು ತಮ್ಮ ರಾಶಿಚಕ್ರ-ಚಿಹ್ನೆಗಳನ್ನು ಬದಲಾಯಿಸುತ್ತಿವೆ. ಒಂದೂವರೆ ವರ್ಷಗಳ ನಂತರ ನಡೆಯುತ್ತಿದೆ ಬದಲಾವಣೆ. ಈ ಅಕ್ಟೋಬರ್ ೩೦ ರಂದು ಈ ಎರಡು ಗ್ರಹಗಳು ಸ್ಥಾನಪಲ್ಲಟವಾಗಲಿವೆ. ಹಾಗಾಗಿ ಮುಂದಿನ ಒಂದೂವರೆ ವರ್ಷ ಯಾವ ಯಾವ ರಾಶಿಗೆ ಏನೇನು ಪರಿಣಾಮ ಆಗಲಿದೆ ಎಂದು ಈಗ ತಿಳಿದುಕೊಳ್ಳೊಣ.

ಮೇಷ ರಾಶಿ:

ರಾಹು-ಕೇತು ಗ್ರಹಗಳ ಸ್ಥಾನ ಪಲ್ಲಟದಿಂದ ಮೇಷ ರಾಶಿಯವರಿಗೆ ಒಳಿತಾಗಲಿದೆ. ವೃತ್ತಿಯಲ್ಲಿ ಇರುವವರು ಅಥವಾ ಉದ್ಯೋಗದಲ್ಲಿರುವವರಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ವ್ಯಾಪಾರ-ವ್ಯವಹಾರ, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಲಾಭ ಆಗಲಿದೆ. ಇದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಮೇಷ ರಾಶಿಯವರಿಗೆ ಉದ್ಯೋಗ ಸಂಬಂಧವಾಗಿ ದೂರ ಪ್ರಯಾಣಿಸುವ ಯೋಗವಿದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೂ ರಾಹು-ಕೇತುಗಳ ಚಲನೆಯಿಂದ ಜೀವನದಲ್ಲಿ ಹೊಸ ಬೆಳಕು ಕಾಣಿಸಲಿದೆ. ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ಅನೇಕ ವರ್ಷಗಳಿಂದ ಅಂದುಕೊಂಡಿದ್ದ ಕಾರ್ಯಗಳು ಈ ಸಮಯದಲ್ಲಿ ಈಡೇರಲಿದೆ. ಹೂಡಿಕೆ, ವ್ಯಾಪಾರ, ಸ್ವಂತ ಉದ್ಯೋಗ ಶುರು ಮಾಡಲು ಇದು ಪ್ರಶಸ್ತ ಸಮಯವಾಗಿದೆ. ಶೇರ್, ಮಾರ್ಕೇಟಿಂಗ್ ಕ್ಷೇತ್ರದಲ್ಲಿ ಇರುವವರು ಸಹ ಹೆಚ್ಚಿನ ಲಾಭ ಗಳಿಸಲಿದ್ದಾರೆ. ಅಲ್ಲದೆ ಇವರ ಕೌಟುಂಬಿಕ ಜೀವನವು ಉಲ್ಲಾಸಭರಿತವಾಗಿರಲಿದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ.

ಸಿಂಹ ರಾಶಿ:

ಹೆಸರೇ ಸೂಚಿಸುವಂತೆ ಸಿಂಹ ರಾಶಿಯಲ್ಲಿ ಜನಿಸಿದವರು ಬಹಳ ಧೈರ್ಯಶಾಲಿಗಳಾಗಿರುತ್ತಾರೆ. ಇವರಿಗೂ ಸಹ ರಾಹು ಕೇತು ಪರ್ಯಟನೆಯಿಂದ ಶುಭವಾಗಲಿದೆ. ಕುಟುಂಬದಿಂದ ಇವರು ಶುಭ ಸುದ್ದಿ ಕೇಳಲಿದ್ದಾರೆ. ಇನ್ನು ಉದ್ಯೋಗದಲ್ಲಿರುವವರಿಗೆ ಕಚೇರಿಯಲ್ಲಿ ಒಳ್ಳೆಯ ಸ್ಥಾನ ಮಾನ ದೊರೆಯಲಿದೆ. ಹಲವು ವರ್ಷಗಳಿಂದ ಭಡ್ತಿಗಾಗಿ ಪ್ರಯತ್ನಿಸುತ್ತಿದ್ದರೆ ಅದು ಈ ಸಂದರ್ಭದಲ್ಲಿ ಈಡೇರಲಿದೆ. ವಿದ್ಯಾರ್ಥಿಗಳಿಗೂ ಸಹ ಶುಭಫಲವಿದೆ. ಅಲ್ಲದೆ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಇದ್ದಲ್ಲಿ ಅವು ಸಹ ದೂರವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು, ಬೇರೆ ಕಂಪನಿಗೆ ಸೇರಿಕೊಳ್ಳಬೇಕು ಎಂದುಕೊಳ್ಳುವವರಿಗೂ ಇದು ಒಳ್ಳೆಯ ಸಂದರ್ಭ. ಈ ಸಮಯದಲ್ಲಿ ನೀವು ಪ್ರಯತ್ನ ಪಡುವುದರಿಂದ ನೀವು ಇಚ್ಚಿಸಿದ ಉದ್ಯೋಗ ನಿಮಗೆ ಸಿಗಲಿದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ರಾಹು-ಕೇತು ಶುಭ ಫಲಗಳನ್ನು ನೀಡಲಿದ್ದಾನೆ. ಹಲವು ವರ್ಷಗಳಿಂದ ವಿವಾಹಕ್ಕೆ ಪ್ರಯತ್ನಿಸುತ್ತಿರುವ ಅವಿವಾಹಿತರಿಗೆ ಈ ವರ್ಷದಲ್ಲಿ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ನಿಮ್ಮನ್ನು ಇಷ್ಟಪಡುವ, ನಿಮ್ಮನ್ನು ಅರ್ಥಮಾಡಿಕೊಳ್ಳುವಂತಹ ಸಂಗಾತಿ ನಿಮಗೆ ಸಿಗಲಿದ್ದಾಳೆ. ಉದ್ಯೋಗ, ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರಿಗೂ ಈ ಬಾರಿ ಒಳ್ಳೆಯ ದಿನಗಳು ಬರಲಿವೆ. ನಿಮ್ಮ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಲಿದೆ. ಇದರಿಂದ ನೀವು ನೆಮ್ಮದಿಯ ಜೀವನ ನಡೆಸಲಿದ್ದೀರಿ.

ಮೀನ ರಾಶಿ:

ಮೀನ ರಾಶಿಯವರಿಗೂ ರಾಹು-ಕೇತು ಗೃಹಗಳ ಬದಲಾವಣೆಯಲ್ಲಿ ಲಾಭ ತರಲಿದೆ. ಅನೇಕ ತಿಂಗಳಿಂದ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ನಿಮಗೆ ಈಗ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಅಲ್ಲದೆ ಉದ್ಯಮಗಳನ್ನು ನಡೆಸುತ್ತಿರುವ ಉದ್ಯಮಿಗಳು ಸಹ ಹೊಸ ಉದ್ಯಮ ಪ್ರಾರಂಭಿಸಲು ಇದು ಸುಸಮಯವಾಗಿದೆ.

Comments are closed.