Gruhalakshmi Scheme: ಬರಗಾಲದಿಂದ ಗೃಹಜ್ಯೋತಿ ಗ್ಯಾರೆಂಟಿಗೆ ಬಿತ್ತಾ ಹೊಡೆತ? ಸದ್ಯದಲ್ಲೇ ರದ್ದಾಗುತ್ತಾ ಗೃಹಜ್ಯೋತಿ ಯೋಜನೆ!

Gruhalakshmi Scheme: ನಮ್ಮ ರಾಜ್ಯದಲ್ಲಿ ಬರಗಾಲವಿದೆ. ಈ ವರ್ಷದಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ತೀರಾ ಕಡಿಮೆ ಬಿದ್ದಿದೆ. ಆದ್ದರಿಂದ ಯಾವ ಡ್ಯಾಂ, ಹಳ್ಳ ಕೊಳ್ಳಗಳು ತುಂಬಿಲ್ಲ. ಇದರಿಂದಾಗಿ ರೈತಾಪಿ ವರ್ಗ ಚಿಂತೆಯಲ್ಲಿದೆ. ರಾಜ್ಯ ಸರ್ಕಾರವು ನೂರಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಜನರಿಗೆ ಸಹಕಾರ ನೀಡಲು ಮುಂದಾಗಿದೆ. ಈ ಬರಗಾಲದಿಂದಾಗಿ ಗೃಹಜ್ಯೋತಿ ಯೋಜನೆ (Gruhajyoti Scheme) ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: Second hand bike market: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬೇಕೆ? ಅತ್ಯಂತ ಕಡಿಮೆ ಬೆಲೆಗೆ, ಅದೂ ಉತ್ತಮ ಕಂಡೀಶನ್ ಬೈಕ್! ಎಲ್ಲಿ ಸಿಗುತ್ತೆ ಗೊತ್ತಾ?

ವಿದ್ಯುತ್ ಉತ್ವಾದನೆ ಕುಂಠಿತವಾಗಿದೆ:

ಈ ವರ್ಷ ರಾಜ್ಯದಲ್ಲಿ ಮುಂಗಾರು ತೀರಾ ದುರ್ಬಲವಾಗಿತ್ತು. ವಾಡಿಕೆಗಿಂತ ತೀರಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಹಾಗಾಗಿ ನಮ್ಮ ಇಡೀ ರಾಜ್ಯವೇ ಬರದ ಅಂಚಿನಲ್ಲಿ ಬಂದು ನಿಂತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದಲ್ಲಿ ಜಲವಿದ್ಯುತ್ (Electricity) ಮಾತ್ರವಲ್ಲದೆ, ಅಣು ವಿದ್ಯುತ್, ಸೌರ ವಿದ್ಯುತ್, ಗಾಳಿ ವಿದ್ಯುತ್ ಕೂಡ ಉತ್ಪಾದನೆ ಮಾಡಲಾಗುತ್ತದೆ. ಆದರೆ ಇವುಗಳಿಂದಲೂ ಕೂಡ ವಿದ್ಯುತ್ ಸರಿಯಾಗಿ ಉತ್ಪಾದನೆ ಆಗದೆ ವಿದ್ಯುತ್ ಅಭಾವ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನಮ್ಮ ರಾಜ್ಯದಲ್ಲಿ ಪವನ ವಿದ್ಯುತ್  ಕೂಡ ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿತ್ತು. ಪ್ರಸಕ್ತ ವರ್ಷದಲ್ಲಿ ಈ ವಿದ್ಯುತ್ ಉತ್ಪಾದನೆ ಕೂಡ ಕುಂಠಿತವಾಗುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ ಎನ್ನಲಾಗುತ್ತಿದೆ.

ಪವನ ವಿದ್ಯುತ್ ಕೂಡ ಕೈ ಕೊಡ್ತಾ?

ನಮ್ಮ ರಾಜ್ಯದಲ್ಲಿ ಪ್ರಸಕ್ತ ವರ್ಷ ಗಾಳಿಯೂ ಕೂಡ ಸರಿಯಾದ ವೇಗದಲ್ಲಿ ಬೀಸುತ್ತಿಲ್ಲ. ಇದರಿಂದಾಗಿ ವಿದ್ಯುತ್ ಉತ್ಪಾದಿಸುವ ಫ್ಯಾನ್ಗಳು ಸರಿಯಾಗಿ ತಿರುಗುತ್ತಿಲ್ಲ. ಇದರಿಂದಾಗಿ ವಿದ್ಯುತ್ ಉತ್ಪಾದನೆ ದಿನೇ ದಿನೇ ಕಡಿಮೆ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Business Idea: ಈ ಪುಟ್ಟ ಪಕ್ಷಿ ಸಾಕಾಣಿಕೆ ಮಾಡಿ ನೋಡಿ; ವರ್ಷಕ್ಕೆ 300 ಮೊಟ್ಟೆ; ಆದಾಯ ಲಕ್ಷ ಲಕ್ಷ! ಬದುಕು ಬಂಗಾರ ಮಾಡೋ ಆ ಚಿನ್ನದ ಪಕ್ಷಿ ಯಾವುದು ಗೊತ್ತಾ?

ಪವನ ವಿದ್ಯುತ್ ತಯಾರಿಸಲು ದೊಡ್ಡ ದೊಡ್ಡ ಗುಡ್ಡಗಳ ಮೇಲೆ ಫ್ಯಾನ್ಗಳನ್ನು ಸ್ಥಾಪಿಸಲಾಗಿರುತ್ತದೆ. ಇವುಗಳು ಜೋರಾಗಿ ಗಾಳಿ ಬೀಸಿದರೆ ಮಾತ್ರ ತಿರುಗುತ್ತವೆ. ಇವುಗಳು ತಿರುಗುವುದರಿಂದ ವಿದ್ಯುತ್ ಉತ್ಪಾದನೆ ಆಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ವಿದ್ಯುತ್ ಕೂಡ ಖರೀದಿಸುವ ಸ್ಥಿತಿಗೆ ಬಂದಿದೆ. ಇದರ ಪರಿಣಾಮ ಗೃಹ ಜ್ಯೋತಿ ಯೋಜನೆ ಮೇಲೆ ಬೀರುವ ಸಾಧ್ಯತೆ ಇದೆ. ಇನ್ನು ಮುಂದೆ ಗೃಹ ಜ್ಯೋತಿ ಯೋಜನೆ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಉತ್ತಮ ಮಳೆ, ಗಾಳಿ ಆದ ಸಂದರ್ಭದಲ್ಲಿ ಮತ್ತೆ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಗಾಳಿ ವೇಗ ಕಡಿಮೆ ಆಗಿರುವುದರ ಬಗ್ಗೆ ವರದಿ:

ಅಕ್ಟೋಬರ್ ತಿಂಗಳಿನಲ್ಲೇ ಗಾಳಿ ತಿರುಗುವ ವೇಗ ಸಂಪೂರ್ಣ ಕ್ಷೀಣಿಸಿದೆ. ಇದರಿಂದಾಗಿ ಪವನ ವಿದ್ಯುತ್ ಉತ್ಪಾದನೆ ತೀರಾ ಕುಂಠಿತಗೊಂಡಿದೆ. ಸಾಮಾನ್ಯವಾಗಿ ಪ್ರತಿ ಸೆಕೆಂಡಿಗೆ 36೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಬೇಕಿತ್ತು. ಈಗ ಕೇವಲ 6೦೦ ಮೆ.ವ್ಯಾ. ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಸರ್ಕಾರ ವಿದ್ಯುತ್ಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾದ ಸ್ಥಿತಿಗೆ ಬಂದಿದೆ. ಈಗಾಗಲೇ ಸರ್ಕಾರವು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ ಮಾರಾಟ ಮಾಡದಿರುವ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಯಾವ ಯಾವ ನಿರ್ಧಾರ ಕೈಗೊಳ್ಳಲಿದೆ. ಜನರಿಗೆ ಹೇಗೆ ಸಮರ್ಪಕವಾಗಿ ವಿದ್ಯುತ್ ನೀಡಲಿದೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: Business Idea: ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಲಾಭ; ಈ ವ್ಯಾಪಾರ ಮಾಡಿದ್ರೆ ಕೈತುಂಬಾ ಆದಾಯ ಫಿಕ್ಸ್! ಈ ಬ್ಯುಸನೆಸ್ ಸ್ಟಾರ್ಟ್ ಮಾಡಿ!

Comments are closed.