UPI update: ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನೇರ ಹಣ ವರ್ಗಾವಣೆ ಮಾಡುವವರಿಗೆ ಆರ್ ಬಿ ಐ ನಿಂದ ಸಿಹಿ ಸುದ್ದಿ! ಸಣ್ಣ ಅಂಗಡಿ ಮಾಲಿಕರಿಗೆ ಬೆನಿಫಿಟ್!

UPI update: ಇತ್ತಿಚಿನ ವರ್ಷಗಳಲ್ಲಿ ದೇಶದಲ್ಲಿ ದಿನದಿಂದ ದಿನಕ್ಕೆ ಆನ್ಲೈನ್ ವಹಿವಾಟು ಹೆಚ್ಚುತ್ತಿದೆ. ಬೀದಿಬದಿ ಮಾರಾಟಗಾರರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮ ನಡೆಸುವವರು ಸಹ ಯುಪಿಐ ಪೇಮೆಂಟ್ (UPI Payment) ಹೊಂದಿರುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ಹೇಳಿರುವುದು ಯಾಕೆ ಎನ್ನುವುದು ಈಗಲಾದರೂ ಜನರಿಗೆ ಅರ್ಥವಾದೀತು. ದೊಡ್ಡ ದೊಡ್ಡ ದೇಶದಲ್ಲಿಯೇ ಸಾಧ್ಯವಾಗದಿರುವ ಕೆಲಸವನ್ನು ಇನ್ನು ಅಭಿವೃದ್ಧಿ ಪಥದಲ್ಲಿ ಇರುವ ಭಾರತವು ಸಾಧಿಸಿರುವುದು ಸಾಧನೆಯೇ ಸರಿ. ಇದೀಗ ಈ ರೀತಿ ನೇರ ಹಣ ವರ್ಗಾವಣೆ ಮಾಡುವವರಿಗೆ ಆರ್ಬಿಐ ಸಿಹಿ ಸುದ್ದಿ ನೀಡಿದೆ. ಇದನ್ನೂ ಓದಿ: Business Idea: ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಲಾಭ; ಈ ವ್ಯಾಪಾರ ಮಾಡಿದ್ರೆ ಕೈತುಂಬಾ ಆದಾಯ ಫಿಕ್ಸ್! ಈ ಬ್ಯುಸನೆಸ್ ಸ್ಟಾರ್ಟ್ ಮಾಡಿ!

ಯುಪಿಐ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಗ್ರಾಹಕ ಸ್ನೇಹಿ ಆಗಿರುವ ಅಪ್ಡೇಟ್ ನೀಡುತ್ತಲೇ ಇದೆ. ಇದೀಗ ಮತ್ತೊಂದು ಹೊಸ ಅಪ್ಡೇಟ್ ನೀಡಿದೆ. ಯುಪಿಐ ಈ ಸೇವೆ ಆರಂಭವಾಗುತ್ತಲೇ ದೇಶದ ಎಲ್ಲ ಸರ್ಕಾರಿ ಹಾಗೂ ಪ್ರತಿಷ್ಠಿತ ಬ್ಯಾಂಕ್ಗಳು ಗ್ರಾಹಕರಿಗೆ ಈ ಸೌಲಭ್ಯ ಒದಗಿಸಲು ಮುಂದಾಗಿದೆ. ಇದೀಗ ಆರ್ಬಿಐ ಆನ್ಲೈನ್ ಹಣ ವರ್ಗಾವಣೆ ಮಾಡುವ ನಿಯಮವನ್ನು ಇನ್ನಷ್ಟು ಸರಳಗೊಳಿಸಿದೆ. ಇನ್ಮುಂದೆ ನೀವು ಈ ನಿಯಮ ತಿಳಿದುಕೊಳ್ಳದಿದ್ದರೆ ಕಷ್ಟವಾದಿತು.

ನೀವು ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಿದರೆ ಐಎಂಪಿಎಸ್ , ಎನ್ಎಫ್ಟಿ, ಆರ್ಟಿಜಿಎಸ್ ಬಗ್ಗೆ ನೀವು ತಿಳಿದುಕೊಂಡಿರಬೇಕು.ಸದ್ಯ ಐಎಂಪಿಎಸ್ ಸೇವೆಯನ್ನು ಆರ್ಬಿಐ ಮತ್ತಷ್ಟು ಸುಲಭಗೊಳಿಸುತ್ತಿದೆ. ಇನ್ನು ಮುಂದೆ ನೀವು ಯಾವ ಫಲಾನುಭವಿಯ ವಿವರ ನೀಡದೆ 5 ಲಕ್ಷ ರೂ.ಗಳವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಇದನ್ನೂ ಓದಿ: Digital literacy: ಗ್ರಾಮೀಣ ಭಾಗದ ಜನರಿಗೆ ಗುಡ್ ನ್ಯೂಸ್; ಫ್ರಿಯಾಗಿ ಸಿಗುತ್ತೆ ಈ ಸೌಲಭ್ಯ!

ಎನ್ಪಿಸಿಐ ಇದೀಗ ನಿಯಮ ಬದಲಾವಣೆಗೆ ಮುಂದಾಗಿದೆ. ಮೊದಲು ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಹಣ ವರ್ಗಾವಣೆ ಮಾಡುವವರು ಹಾಗೂ ಸ್ವೀಕರಿಸುವವರ ಹೆಸರು, ಖಾತೆ, ಐಎಫ್ಎಸ್ಸಿ ಕೋಡ್ ನಮೂದಿಸಬೇಕಾಗಿತ್ತು. ಆದರೆ ಇನ್ಮುಂದೆ ಈ ರೀತಿ ತಾಪತ್ರಯಗಳು ಇರುವುದಿಲ್ಲ. ಎನ್ಪಿಸಿಐ ನಿಯಮದಲ್ಲಿ ಬದಲಾವಣೆ ಮಾಡಿರುವುದರಿಂದ ಹಣ ಕಳುಹಿಸುವವರು ಮೊಬೈಲ್ ಸಂಖ್ಯೆಯಿಂದ ಇದ್ದರೆ ಸಾಕು, ಹಣ ಕಳುಹಿಸಬಹುದು. ಯಾವುದೇ ಮಾಹಿತಿ ನೀಡಿದೆ ನೀವು 5 ಲಕ್ಷ ರೂ. ವರೆಗಿನ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಎನ್ಪಿಸಿಐ ಅಧಿಕೃತವಾಗಿ ಮಾಹಿತಿ ನೀಡಿದೆ. ಇದರಿಂದ ಸಣ್ಣ ಸಣ್ಣ ವ್ಯವಹಾರ, ಅಂಗಡಿ ನಡೆಸುವವರಿಗೆ ಸಹಾಯಕವಾಗಲಿದೆ.

Comments are closed.