Bank Update: ಚೆಕ್ ಮೇಲೆ ಸಂಖ್ಯೆ ಮುಂದೆ “Only” ಅಂತ ಬರೆಯದೇ ಇದ್ರೆಚೆಕ್ ಬೌನ್ಸ್ ಆಗುತ್ತಾ? ಶಿಕ್ಷೆಯೂ ಆಗುತ್ತಾ? ಆರ್ ಬಿ ಐ ಏನ್ ಹೇಳತ್ತೆ?
Bank Update: ಇತ್ತಿಚಿನ ದಿನಗಳಲ್ಲಿ ಜನರು ಬ್ಯಾಂಕುಗಳಿಗೆ ಅಡ್ಡಾಡುವುದನ್ನು ಕಡಿಮೆ ಮಾಡಿದ್ದಾರೆ. ಅದಕ್ಕೆ ಕಾರಣ ಯುಪಿಐ ಪೇಮೇಂಟ್ ಸಿಸ್ಟಮ್ (UPI payment system) ಬಂದಿರುವುದು, ಬ್ಯಾಂಕ್ ವ್ಯವಹಾರಗಳ ಡಿಜಿಟಲೀಕರಣ. ಈಗ ಎಷ್ಟೇ ಹಣ ಬೇಕಾದರೂ ಒಬ್ಬರಿಂದ ಇನ್ನೊಬ್ಬರಿಗೆ ಕುಳಿತ ಸ್ಥಳದಿಂದ ಕಳುಹಿಸಬಹುದು. ಆದರೆ ಕೆಲವೊಮ್ಮೆ ಚೆಕ್ (Cheque) ಬಳಸುವ ಪ್ರಸಂಗ ಎದುರಾಗುತ್ತದೆ. ಆಗ ನಾವು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಚೆಕ್ ರಿಜೆಕ್ಟ್ ಆಗಲಿದೆ. ಅಲ್ಲದೆ ಚೆಕ್ ಬೌನ್ಸ್ ಕೂಡ ಆಗಬಹುದು. ಚೆಕ್ ಬೌನ್ಸ್ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿದರೆ ಶಿಕ್ಷೆ ಖಚಿತ. ಹಾಗಾಗಿ ಪ್ರತಿಯೊಬ್ಬರು ಚೆಕ್ ಬರೆಯುವ ವೇಳೆ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಇದನ್ನೂ ಓದಿ: Digital literacy: ಗ್ರಾಮೀಣ ಭಾಗದ ಜನರಿಗೆ ಗುಡ್ ನ್ಯೂಸ್; ಫ್ರಿಯಾಗಿ ಸಿಗುತ್ತೆ ಈ ಸೌಲಭ್ಯ!
ಚೆಕ್ ಮೂಲಕ ವಹಿವಾಟು ನಡೆಸುವವರಿಗೆ ಆರ್ಬಿಐ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಚೆಕ್ ಬಳಸುವವರು ಪಾಲಿಸುವುದು ಕಡ್ಡಾಯವಾಗಿದೆ.
ಚೆಕ್ ಬರೆಯುವ ವೇಳೆ ಈ ತಪ್ಪು ಮಾಡಬೇಡಿ:
ಚೆಕ್ ಬರೆಯುವ ವೇಳೆ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಚೆಕ್ ಬರೆಯುವ ವೇಳೆ ಚೆಕ್ ತಿದ್ದಿದ್ದರೆ, ಹೆಸರು ಬರೆಯುವ ವೇಳೆ ತಪ್ಪಾಗಿ ಕಾಟು ಹೋಡೆದು ಮತ್ತೊಮ್ಮೆ ಬರೆದಿದ್ದರೆ ಚೆಕ್ ಬೌನ್ಸ್ ಆಗುವ ಸಾಧ್ಯತೆಗಳಿವೆ. ಚೆಕ್ ಬೌನ್ಸ್ ಆದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಬ್ಯಾಂಕ್ಗಳಿಗಿದೆ.
ಚೆಕ್ ಮೇಲೆ ಮಾತ್ರ ಅಥವಾ ಓನ್ಲಿ ಅಂತ ಯಾಕೆ ಬರೆಯುತ್ತಾರೆ ಗೊತ್ತಾ?:
ಚೆಕ್ನಲ್ಲಿ ಹಣದ ಮೊತ್ತ ಬರೆದಾದ ನಂತರ ಒನ್ಲಿ ಅಥವಾ ಮಾತ್ರ ಎಂದು ಬರೆಯಲಾಗುತ್ತದೆ. ಹೀಗೆ ಬರೆಯುವುದು ನಿಯಮವೂ ಕೂಡ ಆಗಿದೆ. ಹೀಗೆ ಬರೆಯಲು ಒಂದು ಕಾರಣ ಇದೆ. ಚೆಕ್ನಲ್ಲಿ ಹಣದ ಮೌಲ್ಯವನ್ನು ಅಂಕಿಯಲ್ಲಿ ಬರೆದಾದ ನಂತರ ಅಕ್ಷರದಲ್ಲಿಯೂ ಬರೆಯಬೇಕಾಗುತ್ತದೆ. ಹೀಗೆ ಅಕ್ಷರದಲ್ಲಿ ಬರೆದಾದ ನಂತರ ಅದರ ಮುಂದೆ ಮಾತ್ರ ಎಂದು ಬರೆಯಬೇಕಾಗುತ್ತದೆ. ಹೀಗೆ ಬರೆಯದಿದ್ದರೆ ಮೋಸ ಹೋಗುವ ಸಾಧ್ಯತೆಗಳಿವೆ. ಒಂದು ವೇಳೆ ನೀವು ಮಾತ್ರ ಎಂದು ಬರೆಯದಿದ್ದಲ್ಲಿ ನಿಮ್ಮಿಂದ ಚೆಕ್ ಪಡೆದವರು ಹಣವನ್ನು ಹೆಚ್ಚಿಗೆ ಸೇರಿಸುವ ಸಾಧ್ಯತೆಗಳಿವೆ. ಇದರಿಂದ ನಿಮಗೆ ಮೋಸ ಆಗುವ ಸಾಧ್ಯತೆಗಳಿವೆ. ಮಾತ್ರ ಎಂದು ಬರೆಯದಿದ್ದರೆ ಬ್ಯಾಂಕ್ಗಳು ಚೆಕ್ಗಳನ್ನು ನಿರಾಕರಿಸುತ್ತದೆ. ಹಾಗಾಗಿ ಚೆಕ್ ಬರೆಯುವ ವೇಳೆ ಹಣದ ಮೊತ್ತವನ್ನು ಬರೆದಾದ ನಂತರ ಓನ್ಲಿ ಎಂದು ಬರೆಯಲೇಬೇಕು. ಇದನ್ನು ಓದಿ: Business Idea: ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಲಾಭ; ಈ ವ್ಯಾಪಾರ ಮಾಡಿದ್ರೆ ಕೈತುಂಬಾ ಆದಾಯ ಫಿಕ್ಸ್! ಈ ಬ್ಯುಸನೆಸ್ ಸ್ಟಾರ್ಟ್ ಮಾಡಿ!
ಹೀಗೆ ಚೆಕ್ ಬರೆಯುವ ವೇಳೆ ಆರ್ಬಿಐನ ನಿಯಮಗಳನ್ನು ಪಾಲಿಸುವುದರಿಂದ ನೀವು ಮೋಸ ಹೋಗುವ ಸಾಧ್ಯತೆ ಕಮ್ಮಿ ಎಂದು ಹೇಳಬಹುದು. ಅಲ್ಲದೆ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ. ನೀವು ದುಡಿದ ಹಣವನ್ನು ಇನ್ನೊಬ್ಬರಿಗೆ ವಿನಾಕಾರಣ ಅಥವಾ ಮೋಸ ಹೋದರೆ ನಿಮಗೆ ಕಷ್ಟವಾಗುತ್ತದೆ. ಆದ್ದರಿಂದ ನೀವು ಚೆಕ್ ಬರೆಯುವ ವೇಳೆ ಬಹಳ ಜಾಗರೂಕರಾಗಿರಿ.
Comments are closed.