Lunar Eclipse 2023: ತಿಂಗಳಾಂತ್ಯಕ್ಕೆ ಸಂಭವಿಸುತ್ತಿದೆ ಚಂದ್ರ ಗ್ರಹಣ; ಅದ್ರೆ ಯಾರಿಗೂ ಬೇಡ ರಾಶಿಯವರಿಗೆ ಬರುವ ಸಂಕಷ್ಟ, ಹುಷಾರಾಗಿರಿ!

Lunar Eclipse 2023: ಗ್ರಹಗಳ ಚಲನೆಯನ್ನು ಆಧರಿಸಿ ಜ್ಯೋತಿಷ್ಯವನ್ನು ಹೇಳಲಾಗುತ್ತದೆ. ಈ ಗ್ರಹಗಳ ಚಲನೆಯನ್ನು ಆಧರಿಸಿಯೇ ಸೂರ್ಯ, ಚಂದ್ರ ಗ್ರಹಣಗಳು ಯಾವಾಗ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಈಗಾಗಲೇ ಕಳೆದ ಅಮಾವಾಸ್ಯೆಗೆ ಸೂರ್ಯ ಗ್ರಹಣ ಸಂಭವಿಸಿದೆ. ಇದೀಗ ಈ ಹುಣ್ಣಿಮೆಯಂದು ಚಂದ್ರ ಗ್ರಹಣ ಸಂಭವಿಸಲಿದೆ. sಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ ಅದರ ಆಚರಣೆ ಇರಲಿಲ್ಲ. ಆದರೆ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಆದ್ದರಿಂದ ಚಂದ್ರಗ್ರಹಣದ ಆಚರಣೆ ಮಾಡಲಾಗುತ್ತದೆ. ಈ ಚಂದ್ರಗ್ರಹಣದಿಂದ ಈ ರಾಶಿಯವರಿಗೆ ತೊಂದರೆ ಎದುರಾಗಲಿದೆ.

ಚಂದ್ರ ಗ್ರಹಣವು ಅಕ್ಟೋಬರ್ 28ರಂದು ಅಂದರೆ ಇದೇ ಶನಿವಾರ ರಾತ್ರಿ 1.೦4ಕ್ಕೆ ಪ್ರಾರಂಭವಾಗಿ 2.26ಕ್ಕೆ ಅಂತ್ಯಗೊಳ್ಳಲಿದೆ. ಈ ಚಂದ್ರ ಗ್ರಹಣವು ಭಾರತದಲ್ಲಿ ಭಾಗಶಃ ಗೋಚಾರವಾಗಲಿದೆ. ಯೂರೋಪ್, ಆಫ್ರಿಕಾ, ಏಷ್ಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶದಲ್ಲಿ ಸಂಪೂರ್ಣವಾಗಿ ಕಾಣಲಿದೆ.

ಚಂದ್ರ ಗ್ರಹಣವು ಅಶ್ವಿನಿ ನಕ್ಷತ್ರದಲ್ಲಿ ರಾಹುಗ್ರಸ್ತ ಚಂದ್ರ ಗ್ರಹಣವಾಗಿರಲಿದೆ. ಹೀಗಾಗಿ ಮೇಷ ರಾಶಿಯವರಂತೂ ಇನ್ನು ಮೂರು ತಿಂಗಳುಗಳ ಕಾಲ ತುಂಬಾ ಜಾಗರೂಕರಾಗಿರಬೇಕು. ಇದರ ಜೊತೆ ಇನ್ನು ನಾಲ್ಕು ರಾಶಿಯವರು ಸಹ ತಮ್ಮ ಹುಷಾರಿನಲ್ಲಿ ತಾವಿರಬೇಕಾಗುತ್ತದೆ. ಅವು ಯಾವುದು ಎಂದು ಈಗ ತಿಳಿದುಕೊಳ್ಳೊಣ.

ಮಕರ ರಾಶಿ:

ಚಂದ್ರ ಗ್ರಹಣದಿಂದ ಮಕರ ರಾಶಿಯವರಿಗೂ ತೊಂದರೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಮಕರ ರಾಶಿಯವರು ಬಹಳ ಜಾಗರೂಕರಾಗಿರಬೇಕು. ನಿಮಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗಲಿದೆ. ಆದರೆ ಆ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ದೇವರು ಅದಾಗಲೇ ನಿಮಗೆ ಕರುಣಿಸಿದ್ದಾನೆ. ಹಾಗಾಗಿ ಸಮಸ್ಯೆಗಳು ಎದುರಾದಾಗ ಅಂಜದೆ ಧೈರ್ಯವಾಗಿ ಎದುರಿಸಿ. ಮಕರ ರಾಶಿಯವರು ಮುಖ್ಯವಾಗಿ ಮಾತನಾಡುವ ವೇಳೆ ಬಹಳ ಕಾಳಜಿಯಿಂದ ಇರಬೇಕು. ವಿನಾಕಾರಣ ಮಾತನಾಡಲು ಹೋಗಬಾರದು. ಅಥವಾ ಕೆಲವೊಮ್ಮೆ ಆತ್ಮೀಯರು ಎಂದು ಆಡಿದ ತಮಾಷೆ ಮಾತೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಆದ್ದರಿಂದ ಆತ್ಮೀಯರೇ ಇರಲಿ, ಪರಿಚಯದವರೇ ಇರಲಿ ಮಾತನಾಡುವ ವೇಳೆ ಯೋಚಿಸಿ ಮಾತನಾಡುವುದು ಒಳಿತು.

ಕರ್ಕಾಟಕ ರಾಶಿ:

ರಾಹುಗ್ರಸ್ತ ಚಂದ್ರ ಗ್ರಹಣದಿಂದ ಕರ್ಕಾಟಕ ರಾಶಿಯವರು ಸಮಸ್ಯೆ ಎದುರಿಸಲಿದ್ದಾರೆ. ವೈಯಕ್ತಿಕ ಜೀವನದಲ್ಲಿ ಅಂದರೆ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಪದೇ ಪದೇ ಜಗಳ ಆಗುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ನೆಮ್ಮದಿಗೆ ಭಂಗ ಬರಲಿದೆ.ಅಲ್ಲದೆ ಅಕ್ಕಪಕ್ಕದ ಮನೆಯವರು, ದಾಯಾದಿಗಳು ಸಣ್ಣ ಸಣ್ಣ ವಿಚಾರಗಳಿಗೂ ನಿಮ್ಮ ಜೊತೆ ವಾಗ್ವಾದಕ್ಕೆ ಇಳಿಯಬಹುದು. ಇವೆಲ್ಲವುಗಳಿಂದ ನಿಮಗೆ ಸಂತೋಷ ಇಲ್ಲದಂತೆ ಆಗಬಹುದು.

ಕುಂಭ ರಾಶಿ:

ಕುಂಭ ರಾಶಿಯಲ್ಲಿ ಜನಿಸಿದವರು ಸಹ ಈ ರಾಹುಗ್ರಸ್ತ ಚಂದ್ರ ಗ್ರಹಣದಿಂದ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಗಳಿವೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮಾಡದ ತಪ್ಪಿಗೆ ನಿಮ್ಮನ್ನೆ ಹೊಣೆ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಕಚೇರಿಯಲ್ಲಿ ತುಂಬಾ ಜಾಗರೂಕರಾಗಿ ಇರುವುದು ಒಳಿತು. ಈ ಸಮಯದಲ್ಲಿ ನೀವು ಯಾರನ್ನೂ ಕೂಡ ನಂಬಲು ಹೋಗದಿರಿ.ಅಲ್ಲದೆ ವ್ಯಾಪಾರ ವ್ಯವಹಾರ ನಡೆಸುವವರು ನಷ್ಟ ಅನುಭವಿಸುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಈ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆಗಳಿವೆ. ಅಲ್ಲದೆ ಯಾವುದೇ ಕೆಲಸ ಮಾಡಲು ಹೊರಟರೂ ನಷ್ಟ ಉಂಟಾಗಲಿದೆ. ಅಲ್ಲದೆ ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆಗಳಿವೆ. ಹಾಗಾಗಿ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅವಶ್ಯಕ.

Comments are closed.