SBI ATM Dealership: ಎಸ್ ಬಿ ಐನಿಂದ ಬಂಪರ್ ಆಫರ್; ಈ ಒಂದು ಕೆಲಸ ಮಾಡಿದ್ರೆ ಬ್ಯಾಂಕ್ ಕೊಡುತ್ತೆ ಲಕ್ಷಗಟ್ಟಲೆ ಹಣ!

SBI ATM Dealership: ಪ್ರತಿಯೊಬ್ಬರಿಗೂ ಜೀವನದಲ್ಲಿ ಹಣ ಸಂಪಾದನೆ ಮಾಡಬೇಕು. ಈ ಮೂಲಕ ಉತ್ತಮ ಜೀವನ ನಡೆಸಬೇಕು. ತಾನು ಹಾಗೂ ತನ್ನ ಕುಟುಂಬ ಆರಾಮವಾಗಿ, ನೆಮ್ಮದಿಯಾಗಿ ಇರಬೇಕು ಎನ್ನುವ ಆಸೆ, ಆಕಾಂಕ್ಷೆ ಇದ್ದೇ ಇರುತ್ತದೆ. ರಸ್ತೆಯ ಅಂಚಿಗೆ ನಿಮಗೆ ಸ್ವಲ್ಪ ಪ್ರಮಾಣದ ಜಮೀನು ಅಥವಾ ಜಾಗ ಇದ್ದರೂ ಸಾಕು. ನೀವು ಈ ಕೆಲಸ ಮಾಡುವ ಮೂಲಕ ಮನೆಯಲ್ಲಿಯೇ ಕುಳಿತು ಹಣ ಸಂಪಾದನೆ ಮಾಡಬಹುದು.

ಎಟಿಎಂ ಡೀಲರ್ಶಿಪ್ ನೀಡುತ್ತಿದೆ ಎಸ್ಬಿಐ

ಮನೆಯಲ್ಲಿಯೇ ಕುಳಿತು ಹಣ ಗಳಿಸಬೇಕು ಎನ್ನುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಳ್ಳೆಯ ಆಫರ್ ನೀಡಿದೆ. ಎಸ್ಬಿಐ ತನ್ನ ಎಟಿಎಂ ಫ್ರಾಂಚೈಸಿ ನೀಡಲು ಮುಂದಾಗಿದೆ. ನಿಮಗೂ ಆಸಕ್ತಿ ಇದ್ದಲ್ಲಿ ಎಸ್ಬಿಐ ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳಬಹುದು. ಅದು ಹೇಗೆ ಪಡೆದುಕೊಳ್ಳಬೇಕು ಎನ್ನುವುದನ್ನು ಈಗ ತಿಳಿದುಕೊಳ್ಳೋಣ.

ಫ್ರಾಂಚೈಸಿ ಪಡೆದುಕೊಳ್ಳುವುದು ಹೇಗೆ?

ಎಸ್ಬಿಐ ಮಾತ್ರವಲ್ಲದೆ ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಎಟಿಎಂ ಫ್ರಾಂಚೈಸಿ ನೀಡುತ್ತವೆ. ಈ ಫ್ರಾಂಚೈಸಿಯನ್ನು ಬ್ಯಾಂಕುಗಳು ನೇರವಾಗಿ ನೀಡುವುದಿಲ್ಲ. ಈ ರೀತಿ ಫ್ರಾಂಚೈಸಿ ನೀಡಲು ಅವು ಬೇರೆ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಬ್ಯಾಂಕುಗಳು ಯಾವ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆಯೋ ಅದನ್ನು ಸಂಪರ್ಕಿಸಿ ನೀವು ಫ್ರಾಂಚೈಸಿ ಪಡೆದುಕೊಳ್ಳಬಹುದು.

ಫ್ರಾಂಚೈಸಿ ಪಡೆದುಕೊಳ್ಳಲು  ಹೇಗಿರಬೇಕು ಜಾಗ?:

ಈ ಎಟಿಎಂ ಫ್ರಾಂಚೈಸಿ ಪಡೆದುಕೊಳ್ಳಲು ಮೊದಲು ನಿಮ್ಮ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ಅಥವಾ ಹೆಚ್ಚಿನ ಜನರು ಓಡಾಡುವ ಜಾಗದಲ್ಲಿ 5೦-8೦ ಸ್ಕ್ವೆರ್ಫೀಟ್ ಜಾಗ ಇರಬೇಕಾಗುತ್ತದೆ. ಬೇರೆ ಎಟಿಎಂ ಆದಲ್ಲಿ ಕನಿಷ್ಟ 1೦೦ ಸ್ಕ್ವೇರ್ ಫೀಟ್ ಜಾಗ ಇರಬೇಕಾಗುತ್ತದೆ. ಅಲ್ಲದೆ ಬೇರೆ ಎಟಿಎಂನಿಂದ ಕನಿಷ್ಟ 1೦೦ ಮೀಟರ್ ದೂರದಲ್ಲಿ ಗ್ರೌಂಡ್ ಫ್ಲೋರ್ನಲ್ಲಿ ಇರಬೇಕು. 24 ಗಂಟೆಯೂ ವಿದ್ಯುತ್ ಸಂಪರ್ಕ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು. ದಿನವೊಂದಕ್ಕೆ ಕನಿಷ್ಟ 3೦೦ ಟ್ರಾನ್ಸಾಕ್ಷನ್ ಆಗುವ ರೀತಿಯಲ್ಲಿ ಇರಬೇಕು. ಕಟ್ಟಡವು ಸಂಪೂರ್ಣ ಕಾಂಕ್ರಿಟ್ನಿಂದ ಮಾಡಿರಬೇಕು. ವಿ.ಸೆಟ್ ಅಳವಡಿಸಲು ಅದಕ್ಕೆ ಎನ್ಒಸಿ ಪಡೆದುಕೊಂಡಿರಬೇಕು.

ಫ್ರಾಂಚೈಸಿ ಪಡೆದುಕೊಳ್ಳಲು ಬೇಕಾದ ದಾಖಲೆಗಳು:

ನೀವು ಫ್ರಾಂಚೈಸಿ ಪಡೆದುಕೊಳ್ಳಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ನಾಲ್ಕು ಭಾವಚಿತ್ರ, ಓಟರ್ ಐಡಿ, ರೇಶನ್ ಕಾರ್ಡ್, ಕರೆಂಟ್ ಬಿಲ್, ಪಾಸ್ಬುಕ್, ಇ-ಮೈಲ್ ಐಡಿ, ಮೊಬೈಲ್ ನಂಬರ್ಗಳನ್ನು ನೀವು ನೀಡಬೇಕಾಗುತ್ತದೆ.

ಟಾಟಾ ಇಂಡಿಕ್ಯಾಶ, ಮತ್ತೂಟ್ ಫೈನಾನ್ಸ್ , ಇಂಡಿಯಾ ಒನ್ ಎಟಿಎಂಗಳು ಬೇರೆ ಬೇರೆ ಬ್ಯಾಂಕುಗಳ ಎಟಿಎಂ ಫ್ರಾಂಚೈಸಿಯನ್ನು ಕ್ರಾಂಟ್ರ್ಯಾಕ್ಟ್ ರೂಪದಲ್ಲಿ ಹೊಂದಿರುತ್ತದೆ. ಈ ಕಂಒಪನಿಗಳ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಅವರು ನಿಮ್ಮನ್ನು ಸಂಪರ್ಕಿಸಿ ನೀವು ಎಟಿಎಂ ಸ್ಥಾಪಿಸಲು ಬೇಕಾಗಿರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದೀರೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲಿದ್ದಾರೆ. ನೀವು ಅರ್ಹತೆ ಹೊಂದಿದಲ್ಲಿ ನಿಮಗೆ ಅವರು ಎಟಿಎಂ ಸ್ಥಾಪನೆಗೆ ಒಪ್ಪಿಗೆ ನೀಡುತ್ತಾರೆ.

Comments are closed.