Kannada Astrology: ಇನ್ನು ಒಂದೇ ತಿಂಗಳು; ಶನಿಶ್ಚರನ ಕೃಪೆಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ! ಸಂಕಷ್ಟಗಳೆಲ್ಲಾ ದೂರ

Kannada Astrology: ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ಒಂದು ಪ್ರಭಾವಯುತವಾದ ಗ್ರಹವಾಗಿದೆ. ಸವಾಲು ಹಾಗೂ ಜವಾಬ್ದಾರಿಗಳ ಮೂಲಕ ಜೀವನದಲ್ಲಿ ಪಾಠ ಕಲಿಸುವ ಗ್ರಹವಾಗಿದೆ. ಶನಿಯ ಪ್ರಭಾವವು ಆಳವಾದ ಹಾಗೂ ದೀರ್ಘಕಾಲಿನದ್ದಾಗಿದೆ. ಏಕೆಂದರೆ ಶನಿ ಗ್ರಹವು ಪ್ರತಿ ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತದೆ. ಈ ಅವಧಿಯು ವ್ಯಕ್ತಿಯ ಜೀವನದಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಮುಂಬರುವ ಹೊಸ ವರ್ಷದಲ್ಲಿ ಶನಿ ಗ್ರಹ ಪ್ರಭಾವದಿಂದ ಈ ರಾಶಿಯವರಿಗೆ ಬಹಳ ಒಳಿತಾಗಲಿದೆ. ಆ ರಾಶಿಗಳು ಯಾವದು ಎಂದು ತಿಳಿದುಕೊಳ್ಳೊಣ.

ಮೇಷ ರಾಶಿ:

ಮೇಷ ರಾಶಿಯವರಿಗೆ 2024 ರಲ್ಲಿ ಶನಿ ಗ್ರಹದ ಪ್ರಭಾವದಿಂದ ತುಂಬಾನೇ ಒಳಿತಾಗಲಿದೆ. ಈ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಕೆ ಸಾಧ್ಯವಾಗಲಿದೆ. ಅಲ್ಲದೆ ಹಣದ ಹರಿವು ಉತ್ತಮವಾಗಿರಲಿದೆ. ಜೀವನದಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ. ಇವರು ಯಾವುದಾದರೂ ಯೋಜನೆ ಆರಂಭಿಸಿದ್ದಲ್ಲಿ ಯಶಸ್ಸು ಕಾಣಲಿದ್ದಾರೆ. ಅಲ್ಲದೆ ಹೂಡಿಕೆಗಳಲ್ಲಿ ಇವರಿಗೆ ಲಾಭ ನಿಶ್ಚಿತ. ಶನಿ ದೇವದ ಪ್ರಭಾವದಿಂದ ಕಚೇರಿಯಲ್ಲಿ ಭಡ್ತಿ ಹಾಗೂ ಉದ್ಯೋಗ ಸ್ಥಳಾಂತರ ಆಗಬಹುದು. ಅಲ್ಲದೆ ಕೆಲಸ ಹುಡುಕುತ್ತಿರುವವರಿಗೆ ಹೊಸ ಹೊಸ ಅವಕಾಶಗಳು ಹುಡುಕಿ ಬರಲಿದೆ. ಇದರಿಂದ ನಿಮ್ಮಿಷ್ಟದ ಕೆಲಸ ನಿಮಗೆ ಸಿಗಲಿದೆ.

ಸಿಂಹ ರಾಶಿ:

ಶನಿಶ್ವರನು ಸಿಂಹ ರಾಶಿಯಿಂದ ಏಳನೆ ಮನೆಯಲ್ಲಿ ಸಂಚರಿಸುವುದರಿಂದ 2024 ರಲ್ಲಿ ಸಿಂಹ ರಾಶಿಯವರ ಜೀವನದಲ್ಲಿ ಅಭಿವೃದ್ಧಿ ಆಗಲಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಈಗ ಚಾಲನೆ ಸಿಗಲಿದೆ. ಈ ಅವಧಿಯಲ್ಲಿ ವೃತ್ತಿಪರ ಹಾಗೂ ವ್ಯವಹಾರದಲ್ಲಿ ಗಮನಾರ್ಹ ಯಶಸ್ಸು ಸಿಗಲಿದೆ. ಇದರ ಜೊತೆ ಪ್ರಚೋದನಕಾರಿ ಪಾಲುದಾರಿಕೆ ಹಾಗೂ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ನೀವು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಮನೆಯವರ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಭಡ್ತಿ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಮಕರ ರಾಶಿ:

2024 ರಲ್ಲಿ ಶನಿಶ್ವರನು ಮಕರ ರಾಶಿಯವರಿಗೆ ಲಾಭಕ್ಕೆ ಸಂಬಂಧಿಸಿದಂತೆ ಸಂಚರಿಸುವುದರಿಂದ ವಿಶೇಷ ಲಾಭಗಳಿಸುವ ಸಾಧ್ಯತೆಗಳಿವೆ. ಶನಿಶ್ವರನ ಈ ಸಂಚಾರದಿಂದ ಅನೀರಿಕ್ಷಿತವಾಗಿ ಧನಾಗಮನವಾಗಲಿದೆ. ಇದರಿಂದ ಜೀವನದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗತಿ ಉತ್ತಮಗೊಳ್ಳಲಿದೆ. ಶನಿದೇವನ ಪ್ರಭಾವದಿಂದ ಪೂರ್ವಜರ ಆಸ್ತಿಯಲ್ಲಿ ಹೆಚ್ಚಳ ಆಗಬಹುದು. ಕೆಲಸ ಮಾಡುವವರು ಪ್ರಗತಿ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಕಾಣಬಹುದು. ಶನಿದೇವನ ಕೃಪೆಯಿಂದ ನಿಮಗೆ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಹೀಗಾಗಿ ಜೀವನದಲ್ಲಿ ಏನೇ ಸವಾಲುಗಳು, ಕಷ್ಟಗಳು ಬಂದರೂ ಅದನ್ನು ಧೈರ್ಯದಿಂದ ಎದರಿಸಲು ಸಿದ್ಧರಾಗುತ್ತೀರಿ.

Comments are closed.