CIBIL Score: ಬ್ಯಾಂಕ್ ಗ್ರಾಹಕರಿಗೆ ಹೊಸ ನಿಯಮ ಜಾರಿಗೆ ತಂದ RBI; ಬ್ಯಾಂಕ್ ಲೋನ್ ಮೇಲೆ ಈ ಪರಿಣಾಮ ಬೀರಲಿದೆ ಸಿಬಿಲ್ ಸ್ಕೋರ್!

CIBIL Score Latest updates from RBI: ನೀವು ಬ್ಯಾಂಕ್ನಲ್ಲಿ ಖಾತೆ ಆರಂಭ ಮಾಡಿದಾಗಿನಿಂದ ನಿಮಗೆ ಸಿಬಿಲ್ ಸ್ಕೋರ್ ಅನ್ವಯವಾಗುತ್ತದೆ. ಸಿಬಿಲ್ ಸ್ಕೋರ್ ಎಂದರೆ ನೀವು ಗೃಹಸಾಲ, ಬ್ಯಾಂಕ್ನಲ್ಲಿ ಯಾವ ರೀತಿ ವ್ಯವಹಾರ ಮಾಡಿದ್ದೀರಿ ಎಂದು ತೋರಿಸುವ ನಿಮ್ಮ ಸಾಧನೆಯ ಪಟ್ಟಿ ಇದ್ದ ಹಾಗೆ. ಉತ್ತಮ ಕ್ರೆಡಿಟ್ ಇತಿಹಾಸ ಉಳಿಸಿಕೊಳ್ಳುವ ಮೂಲಕ ನೀವು ಸಿಬಿಲ್ ಸ್ಕೋರ್ ಮಾಡಬಹುದು. ಸಿಬಿಲ್ ಸ್ಕೋರ್ ಅನ್ನು ಕ್ರೆಡಿಟ್ ಸ್ಕೋರ್ ಎಂದೂ ಕರೆಯಲಾಗುತ್ತದೆ. ಈ ಸಿಬಿಲ್ ಸ್ಕೋರ್ಗೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಣಯ ಕೈಗೊಂಡಿದೆ.

Below is the Latest rules from RBI about CIBIL Score- This is how CIBIL Score can impact your loan.

ಏಪ್ರಿಲ್ ನಿಂದ  ಜಾರಿಗೆ ಬರಲಿದೆ ಹೊಸ ನಿಯಮ:

ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಬಿಲ್ ಸ್ಕೋರ್ (Bank Loan CIBIL Score) ಅಡಿ ಹಲವು ನಿಯಮಗಳನ್ನು ರೂಪಿಸಿದೆ. ಇವು 26 ಏಪ್ರಿಲ್ 2024 ರಿಂದ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದೆ. ಗ್ರಾಹಕರು ಸಾಲಕ್ಕೆ ಅರ್ಜಿ ಸಲ್ಲಿಸಿದ ವೇಳೆ ಬ್ಯಾಂಕ್ಗಳು ಸಹಜವಾಗಿಯೇ ಸಿಬಿಲ್ ಸ್ಕೋರ್ ಪರಿಶೀಲನೆ ನಡೆಸುತ್ತವೆ. ಈ ಕಾರಣಕ್ಕಾಗಿ ಆರ್ಬಿಐ ಒಟ್ಟು 5 ನಿಯಮಗಳನ್ನು  ಜಾರಿಗೆ ತರಲು ಮುಂದಾಗಿದೆ.

ಗ್ರಾಹಕರ ಸಿಬಿಲ್ ಚೆಕ್ ಮಾಹಿತಿ ನೀಡಿ: (CIBIL Score)

RBI changed Bank Loan CIBIL Score Importance so that customers can get loan easily

ಬ್ಯಾಂಕ್ ಅಥವಾ ಎನ್ಬಿಎಫ್ಸಿ ಗ್ರಾಹಕರ ಸಿಬಿಲ್ ಸ್ಕೋರ್ (Bank Loan CIBIL Score) ಪರಿಶೀಲನೆ ನಡೆಸಿದ ನಂತರ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಕೇಂದ್ರ ಬ್ಯಾಂಕ್ ಎಲ್ಲ ಕ್ರೆಡಿಟ್ ಕಂಪನಿಗಳಿಗೆ ಆದೇಶ ನೀಡಿದೆ. ಈ ಮಾಹಿತಿಯನ್ನು ಅವು ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕವೂ ನೀಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಬಿಲ್ ಸ್ಕೋರ್ (Bank Loan CIBIL Score) ಸಂಬಂಧಪಟ್ಟಂತೆ ಹಲವು ದೂರುಗಳು ದಾಖಲಾಗಿರುವುದುರಿಂದ ಆರ್ಬಿಐ ಈ ನಿಯಮ ಜಾರಿ ಮಾಡಿದೆ.

ವಿನಂತಿ ತಿರಸ್ಕರಿಸಲು ಕಾರಣ ನೀಡಿ:

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಯಾವುದೇ ಬ್ಯಾಂಕ್ ನಿಮ್ಮ ಮನವಿಯನ್ನು ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು. ಇದರಿಂದ ಗ್ರಾಹಕರು ಯಾವ ಕಾರಣದಿಂದ ತಮ್ಮ ಮನವಿ ತಿರಸ್ಕರಿಸಲ್ಪಟ್ಟಿದೆ ಎಂದು ತಿಳಿದುಕೊಳ್ಳಲು ಸಹಾಯವಾಗಲಿದೆ.

ಇದನ್ನು ಕೂಡ ಓದಿ: SBI ಕೊಡತ್ತೆ ಲಕ್ಷಗಟ್ಟಲೇ ಹಣ; ಆದ್ರೆ ಇದು ಸಾಲವಲ್ಲ ಮತ್ತೆ ಹೇಗೇ? Business Idea

ವರ್ಷಕ್ಕೊಮ್ಮೆ ಗ್ರಾಹಕರಿಗೆ ಸಿಬಿಲ್ ಸ್ಕೋರ್ ಪಟ್ಟಿ ಸಲ್ಲಿಸಿ:

ಕ್ರೆಡಿಟ್ ಕಂಪನಿಗಳು ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಎಲ್ಲ ಗ್ರಾಹಕರಿಗೆ ವರ್ಷಕ್ಕೊಮ್ಮೆ ಉಚಿತವಾಗಿ ಅವರ ಸಿಬಿಲ್ ಸ್ಕೋರ್ ವರದಿ ಸಲ್ಲಿಸಬೇಕು. ಇದಕ್ಕಾಗಿ ಕ್ರೆಡಿಟ್ ಕಂಪನಿ ತನ್ನ ವೆಬ್ಸೈಟ್ ಲಿಂಕಿನಲ್ಲಿ ಅದನ್ನು ಪ್ರದರ್ಶನ ಮಾಡಬೇಕಾಗುತ್ತದೆ.

ಡಿಫಾಲ್ಟ್ ವರದಿಗೂ ಮುನ್ನ ಗ್ರಾಹಕರಿಗೆ ಮಾಹಿತಿ ನೀಡಿ:

ಡಿಫಾಲ್ಟ್  (Default) ನ ವರದಿ ಮಾಡುವ ಮುನ್ನ ಎಲ್ಲ ಬ್ಯಾಂಕ್ಗಳು ಗ್ರಾಹಕರಿಗೆ ವರದಿ ನೀಡುವುದು ಮುಖ್ಯವಾಗಿದೆ. ಸಾಲ ನೀಡುವ ಸಂಸ್ಥೆಗಳು ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಬೇಕು. ಇದರ ಜೊತೆ ಬ್ಯಾಂಕ್ಗಳು ನೋಡಲ್ ಅಧಿಕಾರಿ ನೇಮಕ ಮಾಡಿಕೊಳ್ಳಬೇಕು.

ದೂರುಗಳನ್ನು 3ದಿನದಲ್ಲಿ ಪರಿಹರಿಸಿ: (Complaint)

ಕ್ರೆಡಿಟ್ ಕಂಪನಿಯು ಗ್ರಾಹಕರು ನೀಡಿದ ದೂರನ್ನು 3೦ ದಿನದ ಒಳಗೆ ಪರಿಹರಿಸಬೇಕು. ಒಂದು ವೇಳೆ ಕಂಪನಿಯು ಪರಿಹರಿಸದಿದ್ದರೆ ಕಂಪನಿಗೆ ದಿನಕ್ಕೆ 1೦೦ ರೂ. ದಂಡ ವಿಧಿಸಲಾಗುತ್ತದೆ. ದೂರನ್ನು ಪರಿಹರಿಸಲು ಕಂಪನಿ ಎಷ್ಟು ವಿಳಂಬ ಮಾಡುತ್ತದೆಯೋ ಅಷ್ಟು ದಂಡವನ್ನು ಕಂಪನಿಯು ಪಾವತಿಸಬೇಕಾಗುತ್ತದೆ. ಸಾಲ ವಿತರಿಸುವ ಸಂಸ್ಥೆಗೆ 21 ದಿನಗಳು ಹಾಗೂ ಕ್ರೆಡಿಟ್ ಬ್ಯೂರೋಗೆ 9 ದಿನಗಳನ್ನು ನೀಡಲಾಗುತ್ತದೆ. 21 ದಿನದಲ್ಲಿ ಬ್ಯಾಂಕ್ ಕ್ರೆಡಿಟ್ (Bank Loan CIBIL Score) ಬ್ಯೂರೋಗೆ ತಿಳಿಸಿದಿದ್ದರೆ ಬ್ಯಾಂಕ್ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

Comments are closed.