Ration Card: ಹೊಸ BPL ಕಾರ್ಡ್ ಯಾವಾಗ ಸಿಗತ್ತೆ? ಸರ್ಕಾರದಿಂದ ಬಂತು ಮಹತ್ತರ ಆದೇಶ!

Ration Card New Update: ರಾಜ್ಯ ಸರ್ಕಾರವು ಯಾವುದೇ ಯೋಜನೆ ಸೌಲಭ್ಯ ಪಡೆಯಲು ರೇಶನ್ ಕಾರ್ಡ್ ನ್ನು ಕೂಡ ಒಂದು ಮಾನದಂಡವಾಗಿ ಬಳಸುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಸೌಲಭ್ಯ ಪಡೆಯಲು ರೇಶನ್ ಕಾರ್ಡ್ (Ration Card) ಬೇಕೆ ಬೇಕು. ಇಲ್ಲಿಯವರೆಗೆ ರೇಶನ್ ಕಾರ್ಡ್ನಲ್ಲಿ(Ration Card) ಮನೆಯ ಯಜನಮಾನನ ಹೆಸರು ಮೊದಲು ಇರುತ್ತಿತ್ತು. ಇದೀಗ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ತಂದ ನಂತರ ಮನೆಯ ಯಜಮಾನಿಯ ಹೆಸರು ಮೊದಲು ಇರಬೇಕು ಎಂದು ತಿಳಿಸಿದೆ. ಅದಕ್ಕಾಗಿ ಬಿಪಿಎಲ್ ರೇಶನ್ ಕಾರ್ಡ್ ಹೊಂದಿರುವವರು ತಿದ್ದುಪಡಿ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ.

ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಬರೋಬ್ಬರಿ 8981 ಜನರು ಪಡಿತರ ಚೀಟಿ (Ration Card) ತಿದ್ದುಪಡಿಗಾಗಿ ಕಳೆದ ಎರಡೂವರೆ ವರ್ಷದಿಂದ ಕಾದು ಕುಳಿತಿದ್ದಾರೆ. ಇದರಲ್ಲಿ ಹಲವರು ಕೋವಿಡ್ ಪೂರ್ವದಲ್ಲಿಯೇ ಅರ್ಜಿ ಸಲ್ಲಿಸಿದವರಾಗಿದ್ದಾರೆ.

Government allowing Ration Card Correction again on November Month

3572 ಜನರ ಅರ್ಜಿ ತಿರಸ್ಕಾರ:

2020 ರಿಂದ ಇತ್ತಿಚೆಗೆ ಪಡಿತರ ಚೀಟಿ ತಿದ್ದುಪಡಿಗಾಗಿ 14೦೦4 ಜನರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 5409 ಜನರ ಅರ್ಜಿ ಸ್ವೀಕೃತವಾಗಿದೆ. ಅವುಗಳನ್ನು ತಿದ್ದುಪಡಿ ಮಾಡಿ ಮಂಜೂರು ಮಾಡಲಾಗಿದೆ. ಉಳಿದ ಅರ್ಜಿಗಳಲ್ಲಿ ವಿಳಾಸ, ಹೆಸರು ಸರಿಯಾಗಿ ಇರದ ಕಾರಣ 3572 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. Home Loan ಬೇಕಾ? ಹಾಗಾದ್ರೆ ಬ್ಯಾಂಕ್ ನೀಡುತ್ತಿದೆ ಗುಡ್ ನ್ಯೂಸ್!

ಅರ್ಜಿ ತಿರಸ್ಕರಿಸಲು ಕಾರಣಗಳು:

ಅರ್ಜಿದಾರನು ಅರ್ಜಿಯಲ್ಲಿ ತಪ್ಪು ವಿಳಾಸ ನೀಡಿರುವುದು, ನಮೂದಿಸಿದ ಸ್ಥಳದಲ್ಲಿ ವಾಸವಾಗದೆ ಇರುವುದು, ಆದಾಯ ಪ್ರಮಾಣ ಪತ್ರ ಸಲ್ಲಿಸದಿರುವುದು, ಸರಕಾರಿ ಕೆಲಸ, ನಿಗಮ ಮಂಡಳಿಗಳಲ್ಲಿ ಉದ್ಯೋಗದಲ್ಲಿರುವವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ 8981  ಜನರ ಅರ್ಜಿಗಳು ವಿಲೇಗಾಗಿ ಕಾಯುತ್ತಿವೆ.

ಹೊಸ ಅರ್ಜಿ ಸ್ವೀಕಾರ ಇಲ್ಲ:

ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದ ಅವಧಿಯಲ್ಲಿ 5404  ಅರ್ಜಿಗಳನ್ನು ತಿದ್ದುಪಡಿ ಮಾಡಿ ವಿಲೇವಾರಿ ಮಾಡಲಾಗಿದೆ. ಆದರೆ ಈಗ ರಾಜ್ಯ ಸರ್ಕಾರವು ಹೊಸ ಪಡಿತರ ಚೀಟಿ ನೀಡಲು ಹಾಗೂ ಪಡಿತರ ಚೀಟಿ (Ration Card) ತಿದ್ದುಪಡಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಅರ್ಜಿಗಳ ವಿಲೇವಾರಿ ಕಷ್ಟವಾಗಿದೆ.

ಗೃಹಲಕ್ಷ್ಮಿ ಯೋಜನೆಗಾಗಿ ಮಾತ್ರ ತಿದ್ದುಪಡಿ:

ಈ ಮಧ್ಯೆ ಕಳೆದ ಎರಡು ತಿಂಗಳಿನಿಂದ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯುವ ಸಲುವಾಗಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿತ್ತು. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯ ಹೆಸರು ಮೊದಲು ಇರಬೇಕು ಎನ್ನುವ ನಿಯಮ ಮಾಡಲಾಗಿದೆ. ಇದರಿಂದ ಹಲವರಿಗೆ ಸೌಲಭ್ಯ ಸಿಗದಂತಾಗಿತ್ತು. ಅದಕ್ಕಾಗಿ ತಿದ್ದುಪಡಿಗೆ (Ration Card) ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

Comments are closed.