Bank Loan: ತುರ್ತು ಸಂದರ್ಭದಲ್ಲಿ ಕಡಿಮೆ ಬಡ್ಡಿಯ ಸಾಲ ಬೇಕಾ? ಹಾಗಾದ್ರೆ ತಕ್ಷಣ ಹೀಗೆ ಮಾಡಿ ಕೂಡಲೇ ಸಿಗುತ್ತೇ!

Bank Loan for emergency purpose: ಪ್ರತಿಯೊಬ್ಬರಿಗೂ ಜೀವನ ನಡೆಸಲು ಹಣದ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಆದರೂ ಕೆಲವೊಮ್ಮೆ ವೈದ್ಯಕೀಯ ಕಾರಣಗಳಿಗೆ, ಮಕ್ಕಳ ಶಾಲಾ ಫೀಸ್ (School Fee) ತುಂಬಲು ಹೀಗೆ ಹಲವು ಕಾರಣಗಳಿಗೆ ತುರ್ತು ಹಣದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಪರಿಚಯದವರು, ಸ್ನೇಹಿತರಿಂದ ಸಾಲ (Bank Loan) ಪಡೆದುಕೊಳ್ಳುತ್ತಾರೆ. ಇನ್ನು ಕೆಲವರು ಹೆಚ್ಚಿನ ಬಡ್ಡಿಗೆ ಸಾಲ ತಂದು ಸಾಲದ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹೀಗೆ ಮಾಡುವ ಬದಲು ಕಾನೂನು ಬದ್ಧವಾದ ಮೂಲಗಳಿಂದ ನೀವು ಸಾಲ ತಂದರೆ ನೀವು ಕಡಿಮೆ ಬಡ್ಡಿದರದಲ್ಲಿ (Low interest Loan) ಸಾಲ ಪಡೆದುಕೊಳ್ಳಬಹುದು. ಇಂದಿನ ದಿನದಲ್ಲಿ ತುರ್ತು ಸಾಲ ಪಡೆದುಕೊಳ್ಳಲು ಅನೇಕ ಆಯ್ಕೆಗಳಿವೆ.

ವೈಯಕ್ತಿಕ ಸಾಲ: (Personal Loan)

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೀವು ಸಾಲ ಪಡೆದುಕೊಳ್ಳಲು ವೈಯಕ್ತಿಕ ಸಾಲ ಉತ್ತಮ ಮಾರ್ಗವಾಗಿದೆ. ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದಲ್ಲಿ ಯಾವುದೇ ಬ್ಯಾಂಕ್ ನಿಮಗೆ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನಿಮ್ಮ ಸಾಲದ (Bank Loan) ಬಡ್ಡಿದರ ನಿರ್ಧಾರ ಮಾಡಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಹೆಚ್ಚಿರುತ್ತದೆಯೋ ಅಷ್ಟು ಕಡಿಮೆ ಬಡ್ಡಿದರದಲ್ಲಿ ನಿಮಗೆ ಸಾಲ ನೀಡಲಾಗುತ್ತದೆ.

This is the easy way to get emergency Bank Loan, here are the Details about bank Loans

ಮ್ಯೂಚುವಲ್ ಫಂಡ್ ಹಾಗೂ ಶೇರ್ ಗಳ ವಿರುದ್ಧದ ಸಾಲ:

ಮ್ಯೂಚುವಲ್ ಫಂಡ್ಗಳು ಹಾಗೂ ಶೇರು ಬಾಂಡುಗಳ ಮೇಲೆ ನೀವು ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ಹೆಚ್ಚಿನ ಬ್ಯಾಂಕುಗಳು ಮ್ಯೂಚುವಲ್ ಫಂಡ್ ಹಾಗೂ ಸ್ಟಾಕ್ಗಳ ಮೇಲೆ ಪ್ರಸ್ತುತ ಮೌಲ್ಯದ ಶೇ.5೦ ರಷ್ಟು ಸಾಲವನ್ನು ನೀಡುತ್ತದೆ.ಶೇರುಗಳು ಹಾಗೂ ಮ್ಯೂಚುವಲ್ ಫಂಡ್ಗಳ ಬಾಂಡ್ಗಳನ್ನು ಅಡವಿಟ್ಟು ಪಡೆದಿರುವ ಸಾಲ (Bank Loan)ಸುರಕ್ಷಿತವಾಗಿರುತ್ತದೆ. ಅಲ್ಲದೆ ಇದರ ಮೇಲೆ ವಿಧಿಸುವ ಬಡ್ಡಿದರ ಕೂಡ ಕಡಿಮೆ ಇರುತ್ತದೆ.

ಕಡೆಗೂ ಸರ್ಕಾರ ತಿಳಿಸಿದೆ ನೋಡಿ, ಈ ದಿನಾಂಕದಂದು ಸಿಗಲಿದೆ ಹೊಸ ರೇಶನ್ ಕಾರ್ಡ್/ Ration Card

ಆಸ್ತಿಯ ಮೇಲಿನ ಸಾಲ: (Loan on Property)

ನಿಮಗೆ ಒಂದು ವೇಳೆ ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ ನಿಮ್ಮ ಆಸ್ತಿಯನ್ನು ಬ್ಯಾಂಕ್ಗಳಲ್ಲಿ ಅಡಮಾನವಿಟ್ಟು ಸಾಲ ಪಡೆದುಕೊಳ್ಳುವುದು ಸೂಕ್ತ.ಇದರಲ್ಲಿ ನಿಮ್ಮ ಆಸ್ತಿ ಮೌಲ್ಯದ ಶೇ.6೦-7೦ ರಷ್ಟು ಸಾಲವನ್ನು ನಿಮಗೆ ನೀಡಲಾಗುತ್ತದೆ. ಬಡ್ಡಿದರವೂ ಕೂಡ ಕಡಿಮೆಯೇ ಇದೆ.

ಈ ರೀತಿ ನಿಮಗೆ ಯಾವುದಾದರೂ ತುರ್ತು ಸಂದರ್ಭದಲ್ಲಿ ಹಣದ ಅವಶ್ಯಕತೆ ಬಿದ್ದಲ್ಲಿ ಕಾನೂನು ಮಾರ್ಗದ ಮೂಲಕ ಸುಲಭವಾಗಿ ಸಾಲ (Bank Loan) ಪಡೆದುಕೊಳ್ಳಬಹುದು. ಅಲ್ಲದೆ ಕಡಿಮೆ ಬಡ್ಡಿದರದಲ್ಲಿ. ಅಲ್ಲದೆ ಸಮಯಕ್ಕೆ ನೀವು ಸರಿಯಾಗಿ ಪಾವತಿ ಮಾಡಿದರೆ ಮತ್ತೊಮ್ಮೆ ಇದಕ್ಕಿಂತಲೂ ಹೆಚ್ಚಿನ ಮೊತ್ತದ ಹಣ ಅವಶ್ಯಕತೆ ಇದ್ದಾಗ ಬ್ಯಾಂಕುಗಳು ಯಾವುದೇ ತಕರಾರು ಇಲ್ಲದೆ ಸಾಲ ನೀಡುತ್ತದೆ.

Comments are closed.