SIP Investment: ನೀವು ಹತ್ತು ವರ್ಷದಲ್ಲಿ ಕೋಟ್ಯಧಿಪತಿ ಆಗಬೇಕಾ? ಹಾಗಾದ್ರೆ ಈ ರೀತಿ ಹೂಡಿಕೆ ಮಾಡಿ

SIP Investment for good return: ಮ್ಯೂಚುವಲ್ ಫಂಡ್ ಗಳಲ್ಲಿ ವ್ಯವಸ್ಥಿತ ಹೂಡಿಕೆ (Investment) ಯೋಜನೆ (SIP) ಹೂಡಿಕೆಗೆ ಉತ್ತಮ ಮಾರ್ಗ ಎನಿಸಿಕೊಂಡಿದೆ. ಹಾಗಾಗಿ ಹಲವರು ಅಲ್ಪಾವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಈ ಎಸ್ಐಪಿ ಮಾರ್ಗವನ್ನು ಅನುಸರಿಸುತ್ತಾರೆ. ಎಸ್ಐಪಿಯ ಒಂದು ಅನುಕೂಲ ಎಂದರೆ ನಿಮ್ಮ ಬಳಿ ಎಷ್ಟೇ ಕಡಿಮೆ ಮೊತ್ತದ ಹಣವಿದ್ದರೂ ಇಲ್ಲಿ ಹೂಡಿಕೆ ಮಾಡಬಹುದು. ಅಂದರೆ ಬಡವರು, ಮಧ್ಯಮ ವರ್ಗದವರು ಎಲ್ಲರೂ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆಗಳ ಮೇಲೆ ಸಂಯುಕ್ತ ಬಡ್ಡಿ ಪಡೆಯುವ ಮೂಲಕ ನೀವು ದೊಡ್ಡ ಮೊತ್ತದ ಹಣವನ್ನು ಹಿಂತಿರುಗಿ ಪಡೆಯಬಹುದಾಗಿದೆ. ಇದಲ್ಲದೆ ಈಕ್ವಿಟಿ ಸಾಲ (Equity Loan) , ಮ್ಯೂಚುವಲ್ ಫಂಡ್ನ ಇತರ ವಿಧಗಳಲ್ಲಿ ನೀವು ಹೂಡಿಕೆ ಮಾಡಬಹುದು. ಯಾವುದೇ ಹೂಡಿಕೆ Investment ಆರಂಭಿಸುವ ಮೊದಲು ನೀವು ದೀರ್ಘಾವಧಿ ಹೂಡಿಕೆ ಮಾಡುತ್ತೀರೋ, ಮಧ್ಯಾಮಾವಧಿ ಹೂಡಿಕೆ ಮಾಡುತ್ತೀರೋ, ಅಲ್ಪಾವಧಿ ಹೂಡಿಕೆ (Short Term Loan) ಮಾಡುತ್ತಿರೋ ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು.

SIP Investment is good to get best return, how to invest here are the details

ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ಕೋಟ್ಯಾಧಿಪತಿ ಆಗಲು ಸಾಧ್ಯವೇ?:

ನಾವಿಲ್ಲಿ 1೦,15 ಹಾಗೂ 2೦ ವರ್ಷದಲ್ಲಿ ಕೊಟ್ಯದಿಪತಿ ಆಗಲು ಹೇಗೆ ಸಾಧ್ಯ ಎನ್ನುವುದನ್ನು ತಿಳಿಸುತ್ತಿದ್ದೇವೆ. ನಾವಿಲ್ಲಿ ಮೂರು ವರ್ಷದ ಲೆಕ್ಕಾಚಾರದಲ್ಲಿ ಹೂಡಿಕೆ (SIP Investment) ಯೋಜನೆ ತಿಳಿಸುತ್ತಿದ್ದೇವೆ. ಶೇ.12ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ತಿಳಿಸಲಾಗುತ್ತಿದೆ.

ಇನ್ನು ಮುಂದೆ ಸುಲಭವಾಗಿ Bank Loan ತೆಗೆದುಕೊಳ್ಳುವುದಿದ್ದರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು ಗೊತ್ತಾ?

1೦ ವರ್ಷದಲ್ಲಿ ಕೋಟ್ಯಾಧಿಪತಿ ಆಗಬೇಕು ಎಂದರೆ ಎಷ್ಟು ಹೂಡಿಕೆ ಮಾಡಬೇಕು?:

ನೀವು 1೦ ವರ್ಷದಲ್ಲಿ 1 ಕೋಟಿ ರೂ.ಗೂ ಅಧಿಕ ಮೊತ್ತ ಸಂಪಾದನೆ ಮಾಡಬೇಕು ಎಂದರೆ ಎಸ್ಐಪಿಯಲ್ಲಿ(SIP Investment) ಪ್ರತಿ ತಿಂಗಳು 43,೦41 ರೂ. ಹೂಡಿಕೆ ಮಾಡಬೇಕಾಗುತ್ತದೆ. ನೀವು ಈ ರೀತಿ ಹೂಡಿಕೆ ಮಾಡಿದರೆ ಮೂರು ವರ್ಷಕ್ಕೆ ನೀವು 51.65 ಲಕ್ಷ ರೂ. ಆಗುತ್ತದೆ. ಈ ಹಣಕ್ಕೆ ನೀವು ಶೇ.12 ರಷ್ಟು ಬಡ್ಡಿ ಪಡೆದರೆ 48.35 ಲಕ್ಷ ರೂ. ಹೆಚ್ಚುವರಿಯಾಗಿ ಪಡೆಯುತ್ತೀರಿ. ಹೀಗೆ 10 ವರ್ಷದಲ್ಲಿ ಕೋಟಿ ರೂ.ಗೂ ಮಿಕ್ಕಿ ಆದಾಯ ಪಡೆಯಬಹುದಾಗಿದೆ.

15 ವರ್ಷದಲ್ಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ಸಂಪಾದಿಸುವ ಬಗೆ:

ನೀವು ಎಸ್ಐಪಿಯಲ್ಲಿ ಪ್ರತಿ ತಿಂಗಳು 19,819 ರೂ. ಹೂಡಿಕೆ (SIP Investment) ಮಾಡಿದರೆ ನೀವು 15 ವರ್ಷಕ್ಕೆ 35.67 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಈ ಹೂಡಿಕೆಯ ನಂತರ ಹೂಡಿಕೆಗೆ ಲಾಭವಾಗಿ ನೀವು ಬರೊಬ್ಬರಿ 64.33 ಲಕ್ಷ ರೂ. ಪಡೆಯುತ್ತೀರಿ.ಅಂದರೆ ಒಟ್ಟು ಆದಾಯ ಒಂದು ಕೋಟಿ ರೂ. ಆಗಿರುತ್ತದೆ.

ಹೊಸ Ration Card ಪಡೆದುಕೊಳ್ಳುವುದಕ್ಕೆ ಕಾಯುತ್ತಿರುವ ಜನರಿಗೆ ಉತ್ತರ ನೀಡಿದ ಸರ್ಕಾರ

2೦ ವರ್ಷ ಹೂಡಿಕೆ:

ಎಸ್ಐಪಿಯಲ್ಲಿ ಪ್ರತಿ ತಿಂಗಳು 1೦,೦೦9 ರೂ. ಹೂಡಿಕೆ ಮಾಡುವುದರಿಂದ ನಿಮ್ಮ ಒಟ್ಟು ಹೂಡಿಕೆಯೂ (SIP Investment) 2೦ ವರ್ಷಕ್ಕೆ  24.೦2 ಲಕ್ಷ ರೂ. ಆಗುತ್ತದೆ. ನಿಮ್ಮ ಈ ಹೂಡಿಕೆಗೆ ಲಾಭವಾಗಿ 73.98 ಲಕ್ಷ ರೂ.ಗಳನ್ನು ಪಡೆಯುತ್ತೀರಿ. ಅಂದರೆ ಒಟ್ಟಾರೆ ನೀವು ಒಂದು ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಾಪಾಸು ಪಡೆಯಲಿದ್ದೀರಿ.

Comments are closed.