Scholarship for students: ಗ್ರಾಮೀಣ ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ; 10ನೇ ತರಗತಿಯ ನಂತರ ಓದಲು ಸಿಗುತ್ತೆ 24 ಸಾವಿರ ರೂ. ಸ್ಕಾಲರ್ ಶಿಪ್; ಇಂದೇ ಅರ್ಜಿ ಸಲ್ಲಿಸಿ!

Scholarship for students: ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು (Students) ಎಸ್ಎಸ್ಎಲ್ ಸಿ (SSLC)ನಂತರ ಓದನ್ನು ಮುಂದುವರಿಸಲು ಇಚ್ಚಿಸುವುದಿಲ್ಲ. ಇದಕ್ಕೆ ಮನೆಯಲ್ಲಿರುವ ಬಡತನವೂ ಒಂದು ಕಾರಣವಾಗಿರುತ್ತದೆ. ವಿದ್ಯಾರ್ಥಿಗಳು ಎಷ್ಟೇ ಪ್ರತಿಭಾನ್ವಿತರಾಗಿದ್ದರೂ ಅವರಿಗೆ ಆರ್ಥಿಕ ಸಮಸ್ಯೆಯಿಂದ ಪಾಲಕರು ಓದನ್ನು ಮುಂದುವರಿಸಲು ಇಚ್ಚಿಸುವುದಿಲ್ಲ. ಆದರೆ ಈಗ ಇದರ ಚಿಂತೆ ಬೇಡ. ಸಂತೂರ್ Santoor Scholarship ಅವರ ಕಡೆಯಿಂದ ಈ ರೀತಿಯ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗಾಗಿ ಸ್ಕಾಲರ್ ಶಿಪ್ Scholarship for students ನೀಡುತ್ತಿದೆ. ಇದರ ಉಪಯೋಗ ಪಡೆದುಕೊಂಡು ವಿದ್ಯಾರ್ಥಿನಿಯರು ತಮ್ಮ ಓದನ್ನು ಮುಂದುವರಿಸಬಹುದು.

Santoor Providing 24,000rs Scholarship for students. this will applicable only for Girls. Here are the details

ಆರ್ಥಿಕ ಸಮಸ್ಯೆಯಿಂದ ಓದನ್ನು ಮುಂದುರಿಸಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗಾಗಿ ವಿಪ್ರೋ ಕೇರ್ಸ್ ಸಹಯೋಗದಲ್ಲಿ ಸಂತೂರ್ ಸ್ಕಾಲರ್ಶಿಪ್ ನೀಡುತ್ತಿದೆ. ಈ ವಿದ್ಯಾರ್ಥಿ ವೇತನದ ಲಾಭ Scholarship for students ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರು ಈ ಶಿಷ್ಯವೇತನದ ಲಾಭ ಪಡೆದುಕೊಂಡು ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಬದುಕನ್ನು ಕಟ್ಟಿಕೊಳ್ಳಬಹುದು. ಸಂತೂರ್ ಸ್ಕಾಲರ್ ಶಿಪ್ ಯೋಜನೆಗೆ ಯಾರ್ಯಾರು ಅರ್ಜಿ ಸಲ್ಲಿಸಬಹುದು, ಏನೇನು ದಾಖಲಾತಿಗಳು ಬೇಕಾಗುತ್ತದೆ ಎನ್ನುವುದನ್ನು ಈಗ ತಿಳಿದುಕೊಳ್ಳೊಣ:

ಈ ರೀತಿ Investment ಮಾಡಿದ್ರೆ ಕೇವಲ ಹತ್ತು ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗೋದ್ರಲ್ಲಿ ಡೌಟೇ ಇಲ್ಲ. ಹೇಗೆ ಗೊತ್ತಾ?

ಏನಿದು ಸಂತೂರ್ ಶಿಷ್ಯವೇತನ ಯೋಜನೆ:

ಸಂತೂರ್ ಶಿಷ್ಯವೇತನ ಯೋಜನೆಯೂ ಖಾಸಗಿ ಸಹಭಾಗಿತ್ವದಲ್ಲಿ ನೀಡುವ ಯೋಜನೆಯಾಗಿದೆ. 2016-17 ರಲ್ಲಿ ಈ ಯೋಜನೆ ಆರಂಭವಾಯಿತು.ಈ ಯೋಜನೆಯೂ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ನೆರವಾಗುತ್ತಿದೆ. ಸಬಲ ಹಾಗೂ ನ್ಯಾಯಯುತ ಸಮಾಜ ನಿರ್ಮಾಣ ಈ ಶಿಷ್ಯವೇತನ Scholarship for students ನೀಡುವ ಉದ್ದೇಶವಾಗಿದೆ.

ಯಾರ್ಯಾರು ಅರ್ಜಿ ಸಲ್ಲಿಸಬಹುದು?:

ಸಂತೂರ್ ಸ್ಕಾಲರ್ಶಿಪ್ಗೆ ಕೇವಲ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬೇಕು. ಕರ್ನಾಟಕ, ಆಂದ್ರಪ್ರದೇಶ, ಛತ್ತಿಸ್ಘಡ,ತೆಲಂಗಾಣ ರಾಜ್ಯದ ವಿದ್ಯಾರ್ಥಿನಿಯರಿಗೆ ಮಾತ್ರ ಈ ಶಿಷ್ಯವೇತನ ನೀಡಲಾಗುತ್ತದೆ. ಈ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು 1೦ ಹಾಗೂ 12ನೇ ತರಗತಿಯನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ಣಗೊಳಿಸಿರಬೇಕು. 2023-24ರಲ್ಲಿ ಪದವಿ ಶಿಕ್ಷಣಕ್ಕೆ ಪ್ರವೇಶಾತಿ ಪಡೆದುಕೊಂಡಿರಬೇಕು.

ಶಿಷ್ಯವೇತನದ ಮೊತ್ತ ಎಷ್ಟು?:

ಸಂತೂರ್ ಶಿಷ್ಯವೇತನ ಯೋಜನೆಯಡಿ ಅರ್ಹರಿರುವ 19೦೦ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣ ಮುಗಿಯುವ ವರೆಗೂ ಪ್ರತಿ ವರ್ಷ 24,೦೦೦ ರೂ. ನೀಡಲಾಗುತ್ತದೆ.

ಅರ್ಜೆಂಟಾಗಿ ಯಾವುದೇ Loan ಪಡೀಬೇಕು, ಅದರಲ್ಲೂ ಕಡಿಮೆ ಬಡ್ದಿದರದಲ್ಲಿ ಅಂದ್ರೆ ಏನ್ ಮಾಡ್ಬೇಕು ಗೊತ್ತಾ?

ಯಾವ ಯಾವ ದಾಖಲಾತಿ ಬೇಕು:

ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಖಾತೆ ಹೊಂದಿರುವ ಪಾಸ್ಬುಕ್, ಆಧಾರ್ ಕಾರ್ಡ್, 1೦ನೇ ತರಗತಿ ಅಂಕಪಟ್ಟಿ, 12 ನೇ ತರಗತಿ ಅಂಕಪಟ್ಟಿ, ಇ-ಮೇಲ್ ಐಡಿ, ಮೊಬೈಲ್ ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

ಈ ರೀತಿ ಎಲ್ಲ ದಾಖಲೆಗಳನ್ನು ಅರ್ಜಿಯ ಜೊತೆ ಸಲ್ಲಿಸಿದರೆ ನಿಮಗೆ ವಿದ್ಯಾರ್ಥಿವೇತನಕ್ಕೆ ನೀವು ಅರ್ಹರೋ ಇಲ್ಲವೋ ಎಂದು ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ನೀವು ವಿದ್ಯಾರ್ಥಿವೇತನಕ್ಕೆ Scholarship for students ಅರ್ಹರಾಗಿದ್ದರೆ ಕಂಪನಿಯವರು ನಿಮ್ಮನ್ನು ಸಂಪರ್ಕ ಮಾಡಲಿದ್ದಾರೆ. ಆ ವೇಳೆ ಅವರಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗುತ್ತದೆ.

ಅರ್ಜಿ ಹಾಕಲು ಈ ಲಿಂಕ್ ಕ್ಲಿಕ್ ಮಾಡಿ : https://www.buddy4study.com/page/santoor-scholarship-programme

Comments are closed.