Purchase Land Loan: ಜಾಮೀನು ಖರೀದಿ ಮಾಡಲು ಹಣ ಬೇಕೇ?? ಸರ್ಕಾರನೇ ಕೊಡುತ್ತೆ 25 ಲಕ್ಷ. ಅರ್ಜಿ ಹಾಕಿದ, ಜಾಮೀನು ಖರೀದಿಸಿ.

Purchase Land Loan: ನಮಸ್ಕಾರ ಸ್ನೇಹಿತರೇ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮನೆಯಿಂದ 1೦ ಕಿಮೀ ವ್ಯಾಪ್ತಿ ಒಳಗಡೆ ಇರುವ ಕೃಷಿಯೋಗ್ಯವಾದ ಎರಡು ಎಕರೆ ಇಲ್ಲವೆ ಶುಷ್ಕ ಒಂದು ಎಕರೆ ಜಮೀನು ಖರೀದಿಸಲು ಸಹಾಯಧನ ಮತ್ತು ಸಾಲ ನೀಡಲಾಗುತ್ತದೆ. ಭೂ ಒಡೆತನ ಯೋಜನೆಯಡಿ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಗೆ ನಿಗದಿಪಡಿಸಿರುವ ಘಟಕ ವೆಚ್ಚ ರೂ. 25 ಲಕ್ಷ ಹಾಗೂ ಇನ್ನುಳಿದ ಜಿಲ್ಲೆಗಳಿಗೆ 20 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಇದರಲ್ಲಿ ಶೇ.50 ರಷ್ಟು ಸಹಾಯಧನವಾಗಿದ್ದು, ಇನ್ನುಳಿದಿದ್ದು ಸಾಲವಾಗಿರುತ್ತದೆ.

ಬ್ಯಾಂಕ್ ಆಫ್ ಬರೋಡಾದಿಂದ ಗುಡ್ ನ್ಯೂಸ್; ಕ್ಷಣ ಮಾತ್ರ ದಲ್ಲಿ ಪಡೆಯಿರಿ ವೈಯಕ್ತಿಕ ಸಾಲ, ಅದೂ ಯಾವುದೇ ಅಡಮಾನ ಇಡದೆ – Loan

ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: Documents needed to get Purchase Land Loan.
ಭಾವಚಿತ್ರ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಕೃಷಿ ಕಾರ್ಮಿಕರ ದೃಢಿಕರಣ ಪತ್ರ.

ಯಾವ ಯಾವ ನಿಗಮಗಳ ಅಡಿಯಲ್ಲಿ ಬರುವ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದು? Purchase Land Loan

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೇಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ. ಈ ಎಲ್ಲ ನಿಗಮದ ಅಡಿಯಲ್ಲಿ ಬರುವ ಅರ್ಹ ರೈತ ಮಹಿಳೆಯರು ಸೂಕ್ತ

ದಾಖಲೆಗಳೊಂದಿಗೆ ಆನ್ಲೈನ್ ಇಲ್ಲವೇ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಅಲ್ಲಿ ಅರ್ಜಿ ಯನ್ನು ಸಲ್ಲಿಸಬಹುದಾದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 29 ಕೊನೆಯ ದಿನವಾಗಿದೆ. ನೀವು ಸಲ್ಲಿಸಿದ ಅರ್ಜಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ನೀವು ಸಲ್ಲಿಸಿದ ಅರ್ಜಿಯಲ್ಲಿ ತಪ್ಪಾಗಿದ್ದರೆ ಅರ್ಜಿ ತಿರಸ್ಕರಿಸಲಾಗುತ್ತದೆ. ಸರಿಯಾಗಿದ್ದ ಪಕ್ಷದಲ್ಲಿ ನಿಮ್ಮ ಅರ್ಜಿ ಸ್ವೀಕರಿಸಿ ನಿಮಗೆ ಸೌಲಭ್ಯ ಮಂಜೂರು ಮಾಡಲಾಗುತ್ತದೆ.

Comments are closed.