Get Loan: ದೀಪಾವಳಿ ಹಬ್ಬದ ಸಮಯದಲ್ಲಿಯೇ ಸಿಹಿ ಸುದ್ದಿ- ಎಲ್ಲರಿಗೂ ಸಾಲ ಕೊಡಲು ಮುಂದಾದ ದೊಡ್ಡ ಮೂರು ಬ್ಯಾಂಕ್ ಗಳು!

Get Loan by Nationalized bank: ಪಂಜಾಬ್ ನ್ಯಾಶನಲ್ ಬ್ಯಾಂಕ್ (Panjab National Bank-PNB) ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಧಮಾಕಾ-2023 (Diwali Offers) ಆಫರ್ ಘೋಷಣೆ ಮಾಡಿದೆ. ಇದರ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾ ಕೂಡ ದೀಪಾವಳಿ ಹಬ್ಬಕ್ಕೆ ವಿಶೇಷ ಆಫರ್ ಘೋಷಣೆ ಮಾಡಿವೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಶಾಪಿಂಗ್ ಟ್ರೆಂಡ್ ಮೂಲಕ ತನ್ನ ಗಳಿಕೆ ಹೆಚ್ಚಿಸುವ ಗುರಿ ಹೊಂದಿದೆ. ಈ ಆಫರ್ ಅಡಿಯಲ್ಲಿ ಗ್ರಾಹಕರು ಶೇ.8.4ರ ಬಡ್ಡಿದರದಲ್ಲಿ ಗೃಹಸಾಲ (Home Loan) ವನ್ನು ಪಡೆಯಬಹುದಾಗಿದೆ. ಇದನ್ನೇ ಗಮನದಲ್ಲಿಟ್ಟುಂಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾ ಕೂಡ ವಿಶೇಷ ಆಫರ್ Get Loan ಘೋಷಣೆ ಮಾಡಿವೆ. ಅವು ಯಾವವು ಎಂದು ತಿಳಿದುಕೊಳ್ಳೊಣ.

Get Loan by Nationalized bank with less interest. Here are the Details.

ಪಂಜಾಬ್ ನ್ಯಾಶನಲ್ ಬ್ಯಾಂಕ್ ಕೊಡುಗೆ ಏನು?:

ಪಂಜಾಬ್ ನ್ಯಾಶನಲ್ ಬ್ಯಾಂಕ್ (PNB) ಗ್ರಾಹಕರು ಶೇ.8.7 ರ ಬಡ್ಡಿದರದಲ್ಲಿ ವಾಹನ ಸಾಲವನ್ನು ಪಡೆದುಕೊಳ್ಳಬಹುದು. ಈ ಹಬ್ಬದ ಋತುವಿನಲ್ಲಿ ವಾಹನ ಸಾಲ Get Loan ಪಡೆಯುವವರಿಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಾಲದ ಪ್ರಕ್ರಿಯೆ ಹಾಗೂ ದಾಖಲಾತಿ ಶುಲ್ಕಗಳಿಂದ ವಿನಾಯತಿ ನೀಡಲಾಗುತ್ತಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ನಿಂದ ಗೃಹ ಸಾಲ ಪಡೆಯುವವರಿಗೆ ಶೇ.೮.೪ರ ಬಡ್ಡಿದರದಲ್ಲಿ ನೀಡಲಾಗುತ್ತಿದೆ. ಬ್ಯಾಂಕ್ ಇದಕ್ಕೆ ಯಾವುದೇ ಸಂಸ್ಕರಣಾ ಶುಲ್ಕ ಹಾಗೂ ದಾಖಲಾತಿ ಶುಲ್ಕ ವಿಧಿಸುತ್ತಿಲ್ಲ. ಈ ಸೌಲಭ್ಯ ಪಡೆಯಲು ಇಚ್ಚಿಸುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಬ್ಯಾಂಕ್ಗೆ ತೆರಳಿ ಇಲ್ಲವೇ ಬ್ಯಾಂಕ್ನ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಜಮೀನು ಖರೀದಿಸಲು ಸರ್ಕಾರವೇ ಕೊಡುತ್ತೆ 25ಲಕ್ಷ ರೂಪಾಯಿ subsidy ಹಣ. ಪಡೆದುಕೊಳ್ಳುವುದು ಹೇಗೆ ಗೊತ್ತಾ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ (State Bank of India- SBI)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ವಿಶೇಷ ಆಫರ್ ಅಡಿಯಲ್ಲಿ ಬ್ಯಾಂಕ್ ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ಈ ಆಫರ್ ಸಫ್ಟೆಂಬರ್ 1 ರಿಂದಲೇ ಆರಂಭಗೊಂಡಿದೆ. 31 ಡಿಸೆಂಬರ್ಗೆ ಕೊನೆಗೊಳ್ಳಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಆಫರ್ ಯೋಜನೆ ಅಡಿಯಲ್ಲಿ ಟರ್ಮ್ ಲೋನ್ ಬಡ್ಡಿದರದಲ್ಲಿ ವಿಶೇಷ ರಿಯಾಯತಿ ಪಡೆಯಬಹುದು. ಆದರೆ ಈ ರಿಯಾಯತಿ ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬ್ಯಾಂಕ್ 65 ಬೇಸಿಕ್ ಪಾಯಿಂಟ್ಗಳ ವರೆಗೆ ಅಂದರೆ ಬಡ್ಡಿದರಗಳ ಶೇ.೦.65 ರಷ್ಟು ವಿನಾಯತಿ Get Loan ನೀಡುತ್ತದೆ.

ಉದಾಹರಣೆಗೆ ಹೇಳುವವುದಾದರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗ್ರಾಹಕರಾಗಿದ್ದಲ್ಲಿ ನಿಮ್ಮ ಸಿಬಿಲ್ ಸ್ಕೋರ್ 7೦೦-749 ರ ನಡುವೆ ಇದ್ದಲ್ಲಿ ನಿಮಗೆ ಶೇ. 8.7 ರ ದರದಲ್ಲಿ ಟರ್ಮ್ ಲೋನ್ ಪಡೆದುಕೊಳ್ಳಬಹುದು. ಈ ಅಭಿಯಾನ ಆರಂಭವಾಗುವ ಮೊದಲು ಈ ಬಡ್ಡಿದರವು ಶೇ.9.35 ರಷ್ಟಿತ್ತು.

ಬ್ಯಾಂಕ್ ಆಫ್ ಬರೋಡಾ ಆಫರ್ಗಳು (Bank of Baroda)

ಬ್ಯಾಂಕ್ ಆಫ್ ಬರೋಡಾ ವಿಶೇಷ ಉತ್ಸವ ಅಭಿಯಾನ ಬಿಒಬಿ (BOB) ಜೊತೆಗೆ ಹಬ್ಬದ ಭಾವನೆ ಅಡಿಯಲ್ಲಿ ಗ್ರಾಹಕರಿಗೆ ಭಾರಿ ರಿಯಾಯತಿ ನೀಡಲಾಗುತ್ತದೆ. ಈ ಅಭಿಯಾನವು ಡಿಸೆಂಬರ್ 31 ರವರೆಗೆ ಮುಂದುವರಿಯಲಿದೆ. ಈ ಅಭಿಯಾನದ ಅಡಿಯಲ್ಲಿ ಗೃಹಸಾಲದ ಬಡ್ಡಿದರಗಳು ಶೇ.8.4 ರಿಂದ ಆರಂಭಗೊಳ್ಳಲಿದೆ. ಇದರ ಮೇಲೆ ಬ್ಯಾಂಕ್ ಯಾವುದೇ ಸಂಸ್ಕರಣಾ ಶುಲ್ಕ ವಿಧಿಸುತ್ತಿಲ್ಲ. ಅಷ್ಟೇ ಅಲ್ಲ ಬ್ಯಾಂಕ್ ಆಫ್ ಬರೋಡಾ ಗ್ರಾಹಕರು  ಶೇ.8.7ರಷ್ಟು ಇಂಟ್ರೋಡಕ್ಷರಿ ದರದಲ್ಲಿ ಸಾಲವನ್ನು Get Loan ಪಡೆದುಕೊಳ್ಳಬಹುದು. ಈ ಸಾಲಕ್ಕೂ ಸಹ ಯಾವುದೇ ಸಂಸ್ಕರಣಾ ಶುಲ್ಕ ವಿಧಿಸಲಾಗುವುದಿಲ್ಲ.

Comments are closed.