Get Loan: ದೇಶದ ಪ್ರತಿಯೊಬ್ಬ ರೈತರಿಗೂ ಗುಡ್ ನ್ಯೂಸ್, ಈ ಕೆಲಸಕ್ಕೆ ಸಿಗುತ್ತೆ ಸರ್ಕಾರದಿಂದ ಲಕ್ಷ ಸಹಾಯಧನ, ಇಂದೇ ಅಪ್ಲೈ ಮಾಡಿ!  

Get Loan for Dairy Farming: ನಮ್ಮದು ಕೃಷಿ ಪ್ರಧಾನ ದೇಶ. ರೈತರು ಇಲ್ಲ ಎಂದರೆ ದೇಶವೇ ಇಲ್ಲ. ಹಾಗಾಗಿ ರೈತರನ್ನು ನಮ್ಮ ದೇಶದಲ್ಲಿ ಕಡೆಗಣಿಸುವಂತಿಲ್ಲ. ಕೃಷಿ ಕಾರ್ಯದಲ್ಲಿ ಉಪಕಸುಬಾಗಿ ಪಶುಸಂಗೋಪನೆಯನ್ನು ಹಲವು ರೈತರು ಮಾಡುತ್ತಾರೆ. ಇದು ಉಪ ಆದಾಯವಾಗಿ ರೈತರಿಗೆ ಸಹಾಯಕವಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಸರ್ಕಾರವು ಸಹ ಪಶುಸಂಗೋಪನೆಗೆ ಆದ್ಯತೆ ನೀಡುತ್ತಿದೆ. ಇದಕ್ಕಾಗಿಯೇ ಹಲವಾರು ಯೋಜನೆಗಳನ್ನು ತರುತ್ತಿದೆ. ಸರ್ಕಾರ ತಂದಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ Get Loan ಕುರಿತು ಈಗ ತಿಳಿದುಕೊಳ್ಳೊಣ.

You can apply Loan for Dairy Farming, Government will provide low Interest Loan

ಪಶು ಸಂಗೋಪನೆ ಚಟುವಟಿಕೆಗಳಾದ ಕುರಿ-ಮೇಕೆ ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ ಮೊಲ ಸಾಕಾಣಿಕೆ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ Get Loan ನೀಡಲಾಗುತ್ತಿದೆ. ಈ ಸೌಲಭ್ಯವನ್ನು ರೈತರು ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬಹುದು.

ಕಿಸಾನ್ ಕ್ರೆಡಿಟ್ ಲೋನ್-2023 (Kisan Credit Card Loan)

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲು ಅಭಿಯಾನ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅನ್ವಯ ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ Get Loan ಬರಿಸಲು ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಹಾಗೂ ಸಹಕಾರ ಸಂಘಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮಾಹಿತಿ:

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅನ್ವಯ ಬಡ್ಡಿ ರಿಯಾಯತಿ ಸೌಲಭ್ಯವು 3 ಲಕ್ಷ ರೂ.ವರೆಗೆ ಸಿಗಲಿದೆ. ಇಷ್ಟೇ ಅಲ್ಲದೆ 1೦ ಲಕ್ಷ ರೂ.ವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಪಡೆಯುವ ಸಾಲಕ್ಕೆ ಶೇ.2 ರಷ್ಟು ಬಡ್ಡಿದರದಲ್ಲಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ನಿಮಗೆ ಶೇ. 3ರಷ್ಟು ಬಡ್ಡಿದರದಲ್ಲಿ ಸಹಾಯಧನ Get Loan ನೀಡಲಾಗುತ್ತದೆ.

ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿಂದ ಒಟ್ಟಾರೆ ಶೇ.5 ರಷ್ಟು ಬಡ್ಡಿದರದ ಸಹಾಯಧನವನ್ನು ಪಡೆಯಬಹುದಾಗಿದೆ.

ಹೈನುಗಾರಿಕೆ:

ಮಿಶ್ರತಳಿ ದನಗಳ ನಿರ್ವಹಣೆಗೆ (1+1) ಪ್ರತಿ ಹಸುವಿಗೆ ಗರಿಷ್ಟ 18,೦೦೦ ರೂ.ನಂತೆ ಎರಡು ಹಸುವಿಗೆ 36,೦೦೦ರೂ. ನೀಡಲಾಗುತ್ತದೆ.

ಸುಧಾರಿತ ಎಮ್ಮೆಗಳ ನಿರ್ವಹಣೆಗೆ (1+1) ಗರಿಷ್ಟ 21,೦೦೦ ರೂ. ನಂತೆ 42,೦೦೦ ರೂ. ನೀಡಲಾಗುತ್ತದೆ.

ಕುರಿ ಸಾಕಾಣಿಕೆ:

8 ತಿಂಗಳ ಕುರಿ ಸಾಕಾಣಿಕಾ ಅವಧಿಗೆ 1೦+1 ಕುರಿಗಳ ನಿರ್ವಹಣೆಗೆ ಕುರಿಗಳನ್ನು ಕಟ್ಟಿ ಸಾಕಾಣಿಕೆ ಮಾಡುವುದಾದರೆ 29,95೦ ರೂ. ನಂತೆ  ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,7೦೦ ರೂ. ನೀಡಲಾಗುತ್ತದೆ.

8 ತಿಂಗಳ ಅವಧಿಯ 2೦+1 ಕುರಿಮರಿಗಳ ಸಾಕಾಣಿಕೆಗೆ  ಕಟ್ಟಿ ಮೇಯಿಸುವ ಕುರಿಮರಿಗಳಿಗೆ 57,2೦೦ ರೂ. ಹಾಗೂ ಬಯಲಿನಲ್ಲಿ ಬಿಟ್ಟು ಸಾಕಾಣಿಕೆ ಮಾಡುವ ಕುರಿ ಮರಿಗಳಿಗೆ 28,2೦೦ ರೂ. ನೀಡಲಾಗುತ್ತದೆ.

1೦ ಕುರಿಮರಿಗಳ ಕೊಬ್ಬಿಸುವಿಕೆಗೆ 13,12೦ ರೂ. ಹಾಗೂ 2೦ ಕುರಿಮರಿಗಳ ಕೊಬ್ಬಿಸುವಿಕೆಗೆ 26,2೦೦ ರೂ. ನೀಡಲಾಗುತ್ತದೆ.

ಮೇಕೆ ಸಾಕಾಣಿಕೆ:

8 ತಿಂಗಳ ಅವಧಿಯ 1೦+1 ಮೇಕೆಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ 29,95೦ ರೂ. ಹಾಗೂ ಬಯಲಿನಲ್ಲಿ ಬಿಟ್ಟು ಸಾಕಾಣಿಕೆ ಮಾಡುವ ಮೇಕೆಗಳಿಗೆ 14,7೦೦ ರೂ. Get Loan ನೀಡಲಾಗುತ್ತದೆ.

8 ತಿಂಗಳ ಅವಧಿಯ 2೦+1 ಮೇಕೆಗಳ ಕಟ್ಟಿ ಮೇಯಿಸುವ ಸಾಕಾಣಿಕೆಗೆ 57,2೦೦ ರೂ. ಬಯಲಿನಲ್ಲಿ ಬಿಟ್ಟು ಸಾಕಾಣಿಕೆ ಮಾಡುವ ಮೇಕೆಗಳಿಗೆ 28,2೦೦ ರೂ. ನೀಡಲಾಗುತ್ತದೆ.

ಹಂದಿ ಸಾಕಾಣಿಕೆ:

8 ತಿಂಗಳ ಅವಧಿಯ 1೦ ಕೊಬ್ಬಿಸುವ ಹಂದಿಗಳಿ ಸಾಕಾಣಿಕೆಗೆ 6೦,೦೦೦ ರೂ. ನೀಡಲಾಗುತ್ತದೆ.

ಕೋಳಿ ಸಾಕಾಣಿಕೆ:

ಮಾಂಸದ ಕೋಳಿಗಳ ಸಾಕಾಣಿಕೆಗೆ ತಲಾ 1 ಕೋಳಿಗೆ 8೦ ರೂ. ನಂತೆ 1೦೦೦ ಕೋಳಿಗಳಿಗೆ 8೦,೦೦೦ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.

ಮೊಟ್ಟೆ ಕೋಳಿ ಸಾಕಾಣಿಕಗೆ ತಲಾ ಒಂದು ಕೋಳಿಗೆ 18೦ ರೂ.ನಂತೆ 1೦೦೦ ಕೋಳಿಗಳಿಗೆ 1.8೦ ಲಕ್ಷ ರೂ. ವರೆಗೆ ಸಹಾಯಧನ ಪಡೆದುಕೊಳ್ಳಬಹುದು.

Comments are closed.