Car Loan: ಕಾರ್ ಲೋನ್ ತೆಗೆದುಕೊಳ್ಳುವುದು ಹೇಗೆ, ಬಡ್ಡಿ ದರ ಮತ್ತು ಕಾರ್ ಲೋನಿನ ದಾಖಲೆಗಳು ಮತ್ತು ಪ್ರಕ್ರಿಯೆಯ ವಿವರ.

Car Loan: ನಮಸ್ಕಾರ ಸ್ನೇಹಿತರೇ ಕಾರ್ ಖರೀದಿಸಬೇಕು. ರಜಾ ದಿನಗಳಲ್ಲಿ ನಮಗೆ ಬೇಕುಬೇಕಾದಲ್ಲಿ ಓಡಾಡಬೇಕು ಸಂಬಂಧಿಕರ ಆತ್ಮೀಯರ ಮನೆಗಳಿಗೆ ಹೋಗಬೇಕು. ನಾವು ಅಂದುಕೊಂಡ ಟೈಮಲ್ಲಿ ಪ್ರವಾಸ ಹೋಗಬೇಕು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕು ಎಂಬ ಆಸೆಗಳು ಬಹುತೇಕ ಎಲ್ಲರಲ್ಲೂ ಚಿಗುರೊಡದಿರುತ್ತವೆ.

Car Loan Eligibility, Interest rates and Other details Explained

ಆದರೆ ಈ ಕಾರ್ ಕನಸು ನನಸಾಗಬೇಕಾದರೆ ಕಾರಿಗೆ ಬೇಕಾಗುವ ಎಲ್ಲಾ ಹಣವನ್ನು ಮೊದಲು ಜಮೆ ಮಾಡಿ ನಂತರ ಕಾರು ಖರೀದಿಸುತ್ತೇನೆ ಎಂದು ಯೋಚಿಸಿದರೆ ದುಡಿಮೆಯ ಆರೆಂಟು ವರ್ಷಗಳು ಹಣ ಜೋಡಿಸಲು ಸವೆದು ಹೋಗುತ್ತವೆ. ಆರೆಂಟು ವರ್ಷಗಳ ಯೌವನ ಕಳೆದು ಹೋಗಿರುತ್ತದೆ. ಅಷ್ಟೊತ್ತಿಗೆ ಏನಾದರೂ ಹೊಸ ಸವಾಲುಗಳು ಎದುರಾಗುತ್ತವೆ. ಕಾರ್ ನಲ್ಲಿ ಸುತ್ತಾಡುವ ಸುಂದರ ಕನಸುಗಳು ಮಸುಕಾಗಲು ಪ್ರಾರಂಭಿಸುತ್ತವೆ. ಹಲ್ಲುಇದ್ದಾಗ ಕಡಲೆ ತಿಂದರೆ ಅದರ ರುಚಿಯೇ ಬೇರೆ.

ಹಾಗೆಯೇ ಕಾರ್ ಬಯಕೆ ಮನಸ್ಸಲ್ಲಿ ಚಿಗುರೆಡೆದ ಕೂಡಲೇ ಕಾರು ಖರೀದಿಸಿದರೆ ಅದರ ಮಜವೇ ಬೇರೆ. ಆಶೆ ಇದೆ ಸಾಕಷ್ಟು ಹಣ ಇಲ್ಲ ಅಂತಾದರೆ ಏನು ಮಾಡಬೇಕು. ಕಾರ್ ಲೋನ್ ಪಡೆಯಲು ಮುಂದಾಗಬೇಕು. ಡೌನ್ ಪೇಮೆಂಟ್ಗಾಗಿ ಅಂದರೆ ಕಾರಿನ ಮೊಬ ಲಗಿನ ಸ್ವಲ್ಪ ಭಾಗ ಹಣ ನಮ್ಮ ಕೈಯಲ್ಲಿ ಇದ್ದರೆ ಸಾಕು ಬೇರೆ ಎಲ್ಲಾ ಅವಶ್ಯಕತೆಗಳನ್ನು ಆರ್ಥಿಕ ಸಂಸ್ಥೆಗಳು ಪೂರೈಸುತ್ತವೆ. ಕಾರಿಗಾಗಿ ಸಾಲವನ್ನು ಮಾಡುವಾಗ ನಮಗೆ ಸರಿಹೊಂದುವ ಬಡ್ಡಿ ದರಗಳು ಯಾವ ಬ್ಯಾಂಕುಗಳು ಅಥವಾ ಆರ್ಥಿಕ ಸಂಸ್ಥೆಗಳಲ್ಲಿ ಇವೆ ಮತ್ತು ಮರುಪಾವತಿ ಕಂತುಗಳು ಕೈಗೆಟುಕುವ ಸ್ಥಿತಿಯಲ್ಲಿ ಎಲ್ಲಿವೆ ಎಂಬುದನ್ನು ನೀವು ಮೊದಲು ನಿರ್ಧರಿಸಿಕೊಳ್ಳಬೇಕು.

ಆಗ ನಿಮ್ಮ ಆದಾಯಕ್ಕೆ ಹೊಂದಿಕೊಂಡು ಎಷ್ಟು ದೊಡ್ಡ ಕಾರು ಖರೀದಿಸಬಹುದು ಎಂಬ ಯೋಚನೆ ಮಾಡಿ ಕಾರ್ ಯೋಜನೆಯನ್ನು ಸಾಕಾರ ಮಾಡಿಕೊಳ್ಳಬಹುದು. ಇಲ್ಲಿ ಕೆಲವು ವಿಷಯಗಳನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಅದೇನೆಂದರೆ ಸಾಲ ಕೊಡ ಮಾಡಿದ ಸಂಸ್ಥೆ ಹೆಸರು ಕಾರ್ ರಿಜಿಸ್ಟ್ರೇಷನ್ ದಾಖಲೆಗಳಲ್ಲಿ ಕಂಡು ಬರುತ್ತದೆ. ಅಂದರೆ ಇದರ ಅರ್ಥ ಕಾರ್ ನ ಅನುಭೋಗದ ಹಕ್ಕನ್ನು ನಿಮಗೆ ಸಂಸ್ಥೆ ಬಿಟ್ಟುಕೊಟ್ಟಿರುತ್ತದೆ. ನೀವು ಎಲ್ಲಾ ಸಾಲದ ಮರುಪಾವತಿ ಕಂತುಗಳನ್ನು ತುಂಬಿ ಆ ಸಂಸ್ಥೆಯ ಅಥವಾ ಬ್ಯಾಂಕಿನ ಸಾಲವನ್ನು ಪಾವತಿಸಿ ಋಣಮುಕ್ತ ಆದಾಗ ನೀವು ಕಾರಿನ ಪೂರ್ಣ ಮಾಲಕತ್ವವನ್ನು ಪಡೆಯುತ್ತೀರಿ ಅಲ್ಲಿಯವರೆಗೆ ಕಾರಿನ ಒಂದು ಕಿ ಮತ್ತು ದಾಖಲೆಗಳನ್ನು ಬ್ಯಾಂಕಿನಲ್ಲಿ ಅಡವಿ ಇಡಬೇಕಾಗಿರುತ್ತದೆ.

ಹಾಗಾಗಿ ನೀವು ಅರ್ಥಮಾಲಕತ್ವವನ್ನು ಮಾತ್ರ ಪಡೆದಿರುತ್ತೀರಿ. ಕಂತುಗಳನ್ನು ಪಾವತಿಸಲಾಗದೆ ಸುಸ್ತಿದಾರರಾದರೆ ಆಗ ಕಾರ್ನ ಮೇಲಿನ ಅಧಿಕಾರ ಬ್ಯಾಂಕು ಹೊಂದಿರುತ್ತದೆ. ಇದಕ್ಕಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಇಂದು ಸಾಮಾನ್ಯವಾಗಿ ಸಾಲ ಪಡೆದುಕೊಳ್ಳುವವರು ಎಲ್ಲರಿಗೂ ಇದು ಗೊತ್ತಿರುವ ಮಾಹಿತಿ ಆದರೆ ಎಚ್ಚರಿಸುವ ನಿಟ್ಟಿನಲ್ಲಿ ಸರಿಯಾದ ಪ್ಲಾನ್ ಮಾಡಿಕೊಳ್ಳಿ ಎನ್ನುವ ದೃಷ್ಟಿಕೋನದಿಂದ ಈ ವಿಚಾರಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ.

ಇದನ್ನು ಕೂಡ ಓದಿ: Personal Loan: SBI ನ ಈ ಆಪ್ ಮೂಲಕ 8 ಲಕ್ಷದವರೆಗೆ ಸಾಲ, ಅದೂ 4 ನಿಮಿಷಗಳಲ್ಲಿ, ಇದಕ್ಕಾಗಿ ನಿಮಗೆ ಬೇಕಾಗಿರುವುದು, ಕೈಯಲ್ಲಿ ಒಂದು ಸ್ಮಾರ್ಟ್ ಪೋನ್ ಅಷ್ಟೇ!

ತಿಂಗಳ ಆದಾಯ ಚೆನ್ನಾಗಿದೆ ಎಂದಾದರೆ ಕಾರ್ ಖರೀದಿಸುವ ಸುಂದರ ಕನಸನ್ನು ಸಾಕಾರಗೊಳಿಸಿಕೊಳ್ಳಿ. ಇಂದಿಗೂ ಸಹ ಕಾರ್ ಹೊಂದಿರುವವರು ನಮ್ಮ ಜನಸಂಖ್ಯೆಗೆ ಹೋಲಿಸಿದರೆ ತುಂಬಾ ಕಡಿಮೆ.

ಸಾಧಾರಣವಾಗಿ ಎಲ್ಲ ಸಂಸ್ಥೆಗಳು ಕಾರ್ ಲೋನಿಗಾಗಿ ಈ ಕೆಳಗಿನ ದಾಖಲೆಗಳನ್ನು ಕೇಳುತ್ತವೆ.

  • ಆಧಾರ್ ಕಾರ್ಡ
  • ಪಾನ್ ಕಾರ್ಡ್
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಡ್ರೈವಿಂಗ್ ಲೈಸನ್ಸ್
  • ಅಡ್ರೆಸ್ ಪ್ರೂಫ್
  • ಕಾರು ಕೊಡ ಮಾಡುವ ಕಂಪನಿಯ ಕೊಟೇಶನ್
  • ಸ್ಯಾಲರಿ ಸ್ಲಿಪ್
  • ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.
  • ನಿಮ್ಮಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲ ಅಥವಾ ಇನ್ಸುರೆನ್ಸ್ ಪಾಲಿಸಿ ಇಲ್ಲ ಅಂತಾದರೆ ಯಾವ ಸಂಸ್ಥೆಯಿಂದಲೂ ಸಾಲ ಪಡೆಯುವುದು ಕಷ್ಟವಾಗುವುದು.

ಬಡ್ಡಿಯರಗಳು ಬೇರೆ ಬೇರೆ ಸಂಸ್ಥೆಗಳಲ್ಲಿ ಬೇರೆ ಬೇರೆಯಾಗಿರುತ್ತವೆ ಅಂದಾಜು 6.65 ರಿಂದ 10.3ರವರೆಗೆ ಇರುತ್ತದೆ. ಪ್ರೋಸೆಸಿಂಗ್ ಚಾರ್ಜ್ ಅಂತ 0.4 ರಿಂದ 1% ವರೆಗೆ ಇರುತ್ತದೆ. ಸಾಧಾರಣವಾಗಿ ನಿಗದಿಪಡಿಸಿದ ಅವಧಿಗಿಂತ ಮೊದಲು ಸಾಲಮರುಪಾವತಿಸಿದರೆ ಅದಕ್ಕೂ ನೀವು ಹೆಚ್ಚು ಚಾರ್ಜ್ಗಳನ್ನು ಕೊಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನೀವು ಸಾಲ ಪಡೆದು ಆರು ತಿಂಗಳ ಮೊದಲು ಸಾಲವನ್ನು ಮರುಪಾವತಿಸುವ ಅವಕಾಶ ಯಾವುದೇ ಬ್ಯಾಂಕುಗಳಲ್ಲಿ ಅಥವಾ ಆರ್ಥಿಕ ಸಂಸ್ಥೆಗಳಲ್ಲಿ ಇರುವುದಿಲ್ಲ.

ಸಾಲದ ಬಡ್ಡಿ ದರಗಳು ಮರುಪಾವತಿ ಕಂತುಗಳು ಮತ್ತು ಪ್ರೋಸೆಸಿಂಗ್ ಚಾರ್ಜ್ ಇತ್ಯಾದಿ ಅಂಶಗಳನ್ನು ಅವಲೋಕಿಸಿ ನೀವು ಆಯ್ಕೆ ಮಾಡಿದ ಬ್ಯಾಂಕ್ನ ನೆಟ್ ಬ್ಯಾಂಕಿಂಗ್ ಗೆ ಹೋಗಿ ವೆಹಿಕಲ್ ಲೋನ್ ಅಪ್ಲಿಕೇಶನ್ ಗೆ ಹೋಗಿ ಅಲ್ಲಿ ಕೇಳುವ ದಾಖಲೆಗಳನ್ನು ನೀಡಿದರೆ ಸಾಕು. ಆಗ ಬ್ಯಾಂಕಿನವರು ನಿಮ್ಮಲ್ಲಿ ನಿಮ್ಮ ಅವಶ್ಯಕತೆ ಬಗ್ಗೆ ತಿಳಿದುಕೊಂಡು ನಿಮಗೆ ಸಾಲ ಮಂಜೂರು ಮಾಡುತ್ತಾರೆ. ಇನ್ನೂ ಕೆಲವು ಬ್ಯಾಂಕುಗಳಲ್ಲಿ ಪ್ರೀapproved ಸಾಲ ತನ್ನ ಗ್ರಾಹಕರಿಗಾಗಿ ಮಂಜೂರು ಮಾಡಿರುತ್ತಾರೆ. ಅಂತಹ ಬ್ಯಾಂಕುಗಳಲ್ಲಿ ಆದರೆ ನೀವು ಆ ಫ್ರೀ ಅಪ್ಪ್ರೋಡ್ ಸಾಲ ಯೋಜನೆಗೆ ಕ್ಲಿಕ್ ಮಾಡಿ ಅಲ್ಲಿ ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು

Comments are closed.