Personal Loan: SBI ನ ಈ ಆಪ್ ಮೂಲಕ 8 ಲಕ್ಷದವರೆಗೆ ಸಾಲ, ಅದೂ 4 ನಿಮಿಷಗಳಲ್ಲಿ, ಇದಕ್ಕಾಗಿ ನಿಮಗೆ ಬೇಕಾಗಿರುವುದು, ಕೈಯಲ್ಲಿ ಒಂದು ಸ್ಮಾರ್ಟ್ ಪೋನ್ ಅಷ್ಟೇ!
Personal Loan by SBI YONO App: ಎಸ್ ಬಿ ಐ ಇವರ ಯೋನೋ ಆಪ್ ಲೋನ್: ಇತ್ತೀಚಿನ ದಿನಗಳಲ್ಲಿ ಹಣದ ಸಮಸ್ಯೆ ಬಾರದೇ ಇರುವವರು ಯಾರು ಇಲ್ಲ. ಎಲ್ಲರಿಗೂ ಆರ್ಥಿಕ ಮುಗ್ಗಟ್ಟು ಅನುಭವಿಸುವ ಸನ್ನಿವೇಶ ಬರಬಹುದು. ಹಾಗಿದ್ದಾಗ, ಯಾರಾದ್ರೂ ಸಾಲ Personal Loan ಕೊಟ್ಟು ನಿಮಗೆ ತಕ್ಷಣದ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಿದರೆ ಎಷ್ಟೂ ಚೆನ್ನಾಗಿರುತ್ತೆ ಅಲ್ವಾ?
ನಿಜಕ್ಕೂ ಹೀಗೆ ಯೋಚನೆ ಮಾಡಿದ್ರೆ ಯಾರು ಬರ್ತಾರೊ ಇಲ್ವೋ ಗೊತ್ತಿಲ್ಲ ಆದ್ರೆ SBI ಸದಾ ನಿಮ್ಮ ಜೊತೆಗಿರುತ್ತೆ. ಹೌದು, ಸಾಲಕ್ಕಾಗಿ ನೀವು ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ ಕೇವಲ ನಾಲ್ಕೇ ನಾಲ್ಕು ನಿಮಿಷಗಳಲ್ಲಿ ನೀವು ಈ ಸಾಲವನ್ನು ಪಡೆಯಬಹುದು. SBI ನ ಈ ಲೋನ್ ಪಡೆಯುವುದು ಹೇಗೆ ಇದಕ್ಕಾಗಿ ನೀವು ಏನು ಮಾಡಬೇಕು. ಎಲ್ಲದರ ವಿವರ ಈ ಲೇಖನದಲ್ಲಿದೆ. ಮುಂದೆ ಓದಿ.
Get Personal loan by SBI, YONO App Loan, here are the Details.
ಎಸ್ ಬಿ ಐ ಬ್ಯಾಂಕ್ ನ ಯೋನೋ ಆಪ್ ಲೋನ್ Personal Loan by SBI YONO App
ಏನಿದು ಯೋನೋ ಆಪ್? ಎಸ್ ಬಿ ಐ ನ ವ್ಯವಹಾರ ಮಾಡಲು ಮೊಬೈಲ್ ನಲ್ಲಿ ಒಂದು ಆ್ಯಪ್ ಅಳವಡಿಸಿದ್ದಾರೆ. ಇದರ ಹೆಸರೇ ಯೊನೋ. ನೀವು ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗೆ ಈ ಯೋನೋ ಆಪ್ ಅನ್ನು ಡೌನ್ಲೋಡ್ (Download YONO App) ಮಾಡಿಕೊಳ್ಳಲು ಆಗುತ್ತದೆ. ಆಪ್ ನ ಮೂಲಕ ಪರ್ಸನಲ್ ಲೋನ್ ಹ್ಯಾಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಈಗ ಮಾಹಿತಿಯನ್ನು ನೀಡುತ್ತೇವೆ. ಎಸ್ ಬಿ ಐ ನ ಯೂನೊ ಆಪ್ ಉಪಯೋಗಿಸಿ 8 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಅದು ಹೇಗೆ ಸಾಧ್ಯ ಎಂಬುದನ್ನು ನಾವು ಹಂತ ಹಂತವಾಗಿ ಹೇಳುತ್ತಾ ಹೋಗುತ್ತೇವೆ ಹಾಗಾಗಿ ಗಮನವಿಟ್ಟು ಓದಿ.
ಎಸ್ ಬಿ ಐ ಬ್ಯಾಂಕ್ ನ ಯೋನೋ ಆಪ್ ಲೋನ್ ಪಡೆಯುವುದು ಹೇಗೆ? How to get Personal Loan by SBI YONO App:
- ಕೈಯಲ್ಲಿ ಮೊಬೈಲ್, ಅಂದರೆ ಸ್ಮಾರ್ಟ್ ಫೋನ್ ತೆಗೆದುಕೊಂಡು ಬ್ಯಾಂಕ್ ಆಫ್ ಇಂಡಿಯಾದ ಯೋನೋ (YONO Application) ಕ್ಲಿಕ್ ಮಾಡಿ
- ಎಸ್ ಬಿ ಐ ಯೋನೋ ಆಪ್ ಪರ್ಸನಲ್ ಲೋನ್ ಇದನ್ನು ಆಯ್ಕೆ ಮಾಡಿ
- ಎಸ್ ಬಿ ಐ ನ ಖಾತೆದಾರರಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ.
- ಈ ಪ್ರಾಸೆಸ್ ಎಲ್ಲವೂ ಆನ್ಲೈನ್ ಮೂಲಕ ಮಾಡುವಂತ ಪ್ರಕ್ರಿಯೆ ಆಗಿರುತ್ತದೆ
ಎಸ್ ಬಿ ಐ ಬ್ಯಾಂಕ್ ನ ಯೋನೋ ಆಪ್ ಲೋನ್ ಪಡೆಯಲು ಬೇಕಾಗಿರುವ ದಾಖಲೆಗಳು Documents to get Personal Loan by SBI YONO App:
ಎಸ್ ಬಿ ಐ ನ ಯು ನೋ ಆಪ್ ಮೂಲಕ ನೀವು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುವುದಾದರೆ ನಿಮಗೆ ಅಗತ್ಯ ಇರುವ ದಾಖಲೆಗಳ ಕುರಿತು ಈ ಕೆಳಗೆ ಮಾಹಿತಿ ಕೊಡಲಾಗಿದೆ.
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ ಕಾರ್ಡ್
- ಅಡ್ರೆಸ್ ಪ್ರೂಫ್
- ರೇಷನ್ ಕಾರ್ಡ್
- ಎಲೆಕ್ಟ್ರಿಕಲ್ ಬಿಲ್
- ಬ್ಯಾಂಕ್ ಅಕೌಂಟ್ ಪಾಸ್ ಬುಕ್
- ಪಾಸ್ ಪೋರ್ಟ್ ಸೈಜ್ ಫೋಟೋ
- ಮೇಲ್ ಐಡಿ
- ಫೋನ್ ನಂಬರ್
- ಜಿ ಎಸ್ ಟಿ ನಂಬರ್
- ವಿನಾನ್ಶಿಯಲ್ ಡಾಕ್ಯೂಮೆಂಟ್ಸ್
- ಡೇಟ್ ಆಫ್ ಬರ್ತ್ ಸರ್ಟಿಫಿಕೇಟ್
ಇದನ್ನೂ ಓದಿ: ಆಧಾರ್ ಕಾರ್ಡ್ ಒಂದಿದ್ರೆ ಸಾಕು ಕೇವಲ 10 ನಿಮಿಷಗಳಲ್ಲಿ Loan ಪಡೆಯಿರಿ 10,000 ರೂ. ಸಾಲ!
ಎಸ್ ಬಿ ಐ ಬ್ಯಾಂಕ್ ನ ಯೋನೋ ಆಪ್ ಲೋನ್ ಪಡೆಯುವುದು ಹೇಗೆ? How to apply to get Personal Loan by SBI YONO App:
ಎಸ್ ಬಿ ಐ ಯೋನೋ ಆಪ್ ಲೋನ್ ಗಾಗಿ ನೀವು ಆನ್ಲೈನ್ (Online) ಅಥವಾ ಆಫ್ಲೈನ್ (Offline) ಎರಡು ವಿಧದಲ್ಲೂ ಅರ್ಜಿಯನ್ನು ಸಲ್ಲಿಸಬಹುದು ಆದರೆ ಆಫ್ಲೈನ್ ಅರ್ಜಿಯನ್ನು ಹಾಕುವುದಿದ್ದರೆ ನೀವು ಬ್ಯಾಂಕ್ ನ ಶಾಖೆಗೆ ಭೇಟಿ ಕೊಡಬೇಕಾಗುತ್ತದೆ ಮತ್ತು ಇದೊಂದು ದೀರ್ಘವಾದ ಸಮಯವನ್ನು ಬಳಸುವ ಪ್ರಕ್ರಿಯೆ ಆಗಿರುತ್ತದೆ ಹಾಗಾಗಿ ನೀವು ಆನ್ಲೈನ್ ಅರ್ಜಿಯನ್ನು ಸಲ್ಲಿಸುವುದೇ ಉತ್ತಮ. ಆದರೆ ಆನ್ಲೈನ್ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂದು ಯೋಚಿಸುತ್ತೀದ್ದೀರಿ ಅಲ್ವೇ? ಹಾಗಾದರೆ ಚಿಂತಿಸಬೇಡಿ ಬನ್ನಿ ನಾವು ಆನ್ಲೈನ್ ಅರ್ಜಿಯನ್ನು ಹೇಗೆ ಸಲ್ಲಿಸಬಹುದು ಎಂಬುದಾಗಿ ಹಂತ ಹಂತವಾಗಿ ಹೇಳುತ್ತಾ ಹೋಗುತ್ತೇವೆ.
ಎಸ್ ಬಿ ಐ ಬ್ಯಾಂಕ್ ನ ಯೋನೋ ಆಪ್ ಲೋನ್ ಆನ್ ಲೈನ್ ಮೂಲಕ ಪಡೆಯುವುದು ಹೇಗೆ? How to get Personal Loan by SBI YONO App – Online:
- ನಿಮ್ಮಲ್ಲಿ ಸ್ಮಾರ್ಟ್ ಫೋನ್ (SmartPhone) ಇದ್ದರೆ ಮಾತ್ರ ಆನ್ಲೈನ್ ಆಪ್ ಯೋನೋ YONO ಮೂಲಕ ಅಪ್ಲಿಕೇಶನ್ ಹಾಕಬಹುದಾಗಿದೆ.
- ನೀವು ಸ್ಬಿಐ ಗ್ರಾಹಕರಾಗಿದ್ದಲ್ಲಿ ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಸ್ಬಿಐನ ಯೋನೋ ಡೌನ್ಲೋಡ್ ಮಾಡಿಕೊಳ್ಳಿ. ಮತ್ತು ಇನ್ಸ್ಟಾಲ್ ಮಾಡಿ.
- ಆಪ್ ಇನ್ಸ್ಟಾಲ್ ಆದ ಕೂಡಲೇ ಓಪನ್ ಎಂಬ ಆಪ್ಷನ್ ಬರುತ್ತದೆ ಅದಕ್ಕೆ ಕ್ಲಿಕ್ ಕೊಡಿ
- ಆಪ್ ಓಪನ್ ಆದ ಕೂಡಲೇ ಕಾಣುವ ಡ್ಯಾಶ್ ಬೋರ್ಡ್ ಮೆನು ಮೇಲೆ ಕ್ಲಿಕ್ ಮಾಡಿ
- ಆಗ ನಿಮಗೆ ಬೇರೆ ಬೇರೆ ಆಪ್ಷನ್ ಗಳು ನೋಡಲು ಸಿಗುತ್ತವೆ
- ಕಾಣುವಂತಹ ಬೇರೆ ಬೇರೆ ಆಪ್ಷನ್ಗಳಲ್ಲಿ ಲೋನ್ ಎಂಬ ಆಪ್ಷನ್ ಕೂಡ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ಒಂದು ಪೇಜ್ ಓಪನ್ ಆಗಿ ಕ್ರೆಡಿಟ್ ಲೋನ್ ಎನ್ನುವ ಆಪ್ಷನ್ ಕಾಣುತ್ತದೆ ಅಲ್ಲೇ ಕೆಳಗೆ ಎಪ್ಲಾಯಿ ನೌ ಅದನ್ನು ಕ್ಲಿಕ್ ಮಾಡಿ
- ಇಲ್ಲಿ ಬ್ಯಾಂಕು ಏನಿಲ್ಲಾ ದಾಖಲೆಗಳನ್ನು ಅಪೇಕ್ಷಿಸುತ್ತದೆ ಅದನ್ನು ನೀಡಿ
- ಬೇಕಾದ ಮಾಹಿತಿಯನ್ನು ಭರ್ತಿ ಮಾಡಿ ಆದ ನಂತರ ಪ್ರೋಸೀಡ್ ಎಂಬ ಆಪ್ಷನ್ ನ ಮೇಲೆ ಕ್ಲಿಕ್ ಮಾಡಿ
- ನೀವು ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಪೇಜ್ ನಿಮಗೆ ಓಪನ್ ಆಗಿರುತ್ತದೆ ಅಲ್ಲಿ ಎಷ್ಟು ಸಮಯದ ಮರುಪಾವತಿ ಅವಧಿ ಬೇಕು ಅಂತ ನಿರ್ಣಯಿಸಿ ಕ್ಲಿಕ್ ಮಾಡಿ ಮತ್ತು ಆಗ ಮತ್ತೆ ಪ್ರೋಸೀಡ್ ಒಪ್ಶನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ಮುಂದೆ ಸಾಲದ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಬರುತ್ತದೆ ಪೂರ್ಣವಾಗಿ ಓದಿಕೊಳ್ಳಿ ನಂತರ ಪ್ರೊಸೀಡ್ ಗೆ ಕ್ಲಿಕ್ ಮಾಡಿ.
- ಅದರ ನಂತರ ಸ್ಕ್ರೀನ್ ಮೇಲೆ ಒಂದು ಲೋನ್ ಅಪ್ಲಿಕೇಶನ್ ಫಾರಂ ಕಾಣುತ್ತದೆ ಜಾಗರೂಕತೆಯಿಂದ ಅದನ್ನು ತುಂಬಿ ಮತ್ತು ಪುನಹ ಪ್ರೋಸೀಡ್ನ ಮೇಲೆ ಕ್ಲಿಕ್ ಕೊಡಿ
- ಈಗ ಓಪನ್ ಆದ ಅಪ್ಲಿಕೇಶನ್ ನಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೊಡಬೇಕು ಆಗ ಒಂದು ಓಟಿಪಿ ಬರುತ್ತದೆ ಓಟಿಪಿಯನ್ನು ಬಳಸಿದ ಕೂಡಲೇ ಅರ್ಜಿ ಸಲ್ಲಿಸುವವರು ನೀವು ಹೌದು ಎಂದು ಬ್ಯಾಂಕು ಖಾತರಿಗೊಳಿಸಿಕೊಳ್ಳುತ್ತದೆ
- ನಂತರ ಕಂಗ್ರಾಜುಲೇಷನ್ಸ್ ಅಥವಾ ಅಭಿನಂದನೆಗಳು ಎಂಬ ಸಂದೇಶ ಬರುತ್ತದೆ ಈಗ ನೀವು ಸಾಲ ಪಡೆದಿರುತ್ತೀರಿ ಹಾಗೆಯೇ ನೀವು ಬಯಸಿದ ಸಾಲದ ಮೊತ್ತ ಬ್ಯಾಂಕ್ ಖಾತೆಯಲ್ಲಿ ಜಮೆ ಆಗಿರುತ್ತದೆ.
Comments are closed.