IDBI Bank Personal Loan: ಲೋನ್ ಬೇಕಾ? 10 ನಿಮಿಷದಲ್ಲಿ ಐಡಿಬಿಐ ಬ್ಯಾಂಕಿನಿಂದ ಸಿಗುತ್ತೆ 5 ಲಕ್ಷಗಳ ವರೆಗೆ ಲೋನ್.

IDBI Bank Personal Loan: ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ಕೆಲವೊಂದು ಕಾರಣಗಳಿಗಾಗಿ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಅಂತಹ ಹಣದ ಅವಶ್ಯಕತೆ ಇರುವಂತಹ ಗ್ರಾಹಕರಿಗೆ IDBI ಬ್ಯಾಂಕ್ ಮೂಲಕ ಯಾವ ರೀತಿಯಲ್ಲಿ ಸುಲಭವಾಗಿ ಪರ್ಸನಲ್ ಲೋನ್ (IDBI Bank Personal Loan) ಸಿಗುತ್ತದೆ ಅನ್ನೋದರ ಬಗ್ಗೆ ಇವತ್ತಿನ ಈ ಲೇಖನಿಯ ಮೂಲಕ ನಿಮಗೆ ತಿಳಿಸಲು ಹೊರಟಿದ್ದೇವೆ. ನಿಮ್ಮ ಬಳಿ ಉತ್ತಮವಾದ ಸಿಬಿಲ್ ಸ್ಕೋರ್ ಇದ್ರೆ ಐಡಿಬಿಐ ಬ್ಯಾಂಕಿನ ಮೂಲಕ ನೀವು ಸುಲಭವಾಗಿ 5 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನಿಯ ಮೂಲಕ ಯಾವ ರೀತಿಯಲ್ಲಿ ಐಡಿಬಿಐ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿಗಳವರೆಗೆ ಲೋನ್ ಹಣವನ್ನು ಪಡೆದುಕೊಳ್ಳಬಹುದು ಹಾಗೂ ಅದಕ್ಕಾಗಿ ಯಾವೆಲ್ಲ ಅರ್ಹತೆಗಳು ಹಾಗೂ ದಾಖಲೆಗಳ ಅಗತ್ಯವಿರುತ್ತದೆ ಎಂಬುದನ್ನು ತಿಳಿಯೋಣ.

How to Get IDBI Bank Personal Loan with low interest. And with in 5 min, here are the details.

 IDBI ಪರ್ಸನಲ್ ಲೋನ್ IDBI Bank Personal Loan

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರಬಹುದು ಪರ್ಸನಲ್ ಲೋನ್ (Personal Loan) ಎನ್ನುವುದು ಅತ್ಯಂತ ಸುರಕ್ಷಿತ ಲೋನ್ ಆಗಿರುತ್ತದೆ. ಇದೇ ಕಾರಣಕ್ಕಾಗಿ ಬ್ಯಾಂಕುಗಳು ಪರ್ಸನಲ್ ಲೋನ್ ಅನ್ನು ಎಲ್ಲರಿಗೂ ಕೂಡ ನೀಡಲು ಹೋಗುವುದಿಲ್ಲ. ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದರೆ ಮಾತ್ರ ನೀವು ಐಡಿಬಿಐ ಬ್ಯಾಂಕಿನ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.

ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ Personal Loan ಎಷ್ಟು ಬಡ್ಡಿದರ ಇದೆ ಗೊತ್ತಾ? ಈ ಬ್ಯಾಂಕ್ ನಲ್ಲಿ ಸಿಗತ್ತೆ ನೋಡಿ ಅತೀ ಕಡಿಮೆ ಬಡ್ದಿದರಕ್ಕೆ ಸಾಲ, ಪ್ರೊಸೆಸ್ಸಿಂಗ್ ಫೀ ಕೂಡ ಇಲ್ಲ ಕಣ್ರೀ!

ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ರೆ ಐಡಿಬಿಐ ಬ್ಯಾಂಕಿನ ಮೂಲಕ ನೀವು 25,000 ಗಳಿಂದ ಪ್ರಾರಂಭಿಸಿ ಐದು ಲಕ್ಷ ರೂಪಾಯಿಗಳ ವರೆಗೂ ಕೂಡ ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾಲದ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಪ್ರೊಸೆಸಿಂಗ್ ಫೀಸ್ (Processing Fee) ಒಂದು ಪ್ರತಿಶತ ಅಥವಾ 2500 ವರೆಗೆ ಹೆಚ್ಚೆಂದರೆ ವಿಧಿಸಲಾಗುತ್ತದೆ. ಬಡ್ಡಿದರ (Interest Rate) ವನ್ನು ಕೂಡ ಬ್ಯಾಂಕಿನ ನಿಯಮಗಳ ಅನುಸಾರವಾಗಿ ವಿಧಿಸಲಾಗುತ್ತದೆ.

 IDBI ಬ್ಯಾಂಕಿನಲ್ಲಿ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು Eligibilities to Get IDBI Bank Personal Loan

1. ಲೋನ್ಗಾಗಿ ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು ಹಾಗೂ ಕನಿಷ್ಠಪಕ್ಷ ತಿಂಗಳಿಗೆ 15000 ಸಂಬಳವನ್ನು ಹೊಂದಿರುವವರಾಗಿರಬೇಕು.

2. ಅರ್ಜಿ ಸಲ್ಲಿಸುವ ಉದ್ಯೋಗಿಗಳು ಉದ್ಯೋಗದಲ್ಲಿ ಒಂದರಿಂದ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು. ಸ್ವಂತ ಉದ್ಯಮವನ್ನು ಹೊಂದಿರುವವರು ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕಾಗಿರುತ್ತದೆ.

3. ಇನ್ನು ಸಿಬಿಲ್ ಸ್ಕೋರ್ ವಿಚಾರಕ್ಕೆ ಬಂದ್ರೆ 750 ಅಂಕಗಳಿಗಿಂತ ಹೆಚ್ಚಾಗಿರಬೇಕೆಂಬುದನ್ನು ಕೂಡ ಇಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.

 IDBI ಬ್ಯಾಂಕ್ ವಯಕ್ತಿಕ ಸಾಲ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆಗಳು Documents to Get IDBI Bank Personal Loan

1. ಅರ್ಜಿ ಸಲ್ಲಿಸುವ ವ್ಯಕ್ತಿಯ ಆಧಾರ್ ಕಾರ್ಡ್ (Aadhaar Card) ಹಾಗೂ ಅವರ ಗುರುತು ಪತ್ರವಾಗಿರುವಂತಹ ಪಾನ್ ಕಾರ್ಡ್ (PAN Card) ಡ್ರೈವಿಂಗ್ ಲೈಸೆನ್ಸ್ (Driving Licence) ಅಥವಾ ವೋಟರ್ ಐಡಿ (Voter Id) ಯನ್ನು ನೀಡಬೇಕಾಗಿರುತ್ತದೆ.

2. ಹಿಂದಿನ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (6 month Bank statement) .

3. ಎರಡು ವರ್ಷಗಳ ಐಟಿಆರ್ ರಿಟರ್ನ್ (ITR Return) ಸಲ್ಲಿಸಿರುವಂತಹ ದಾಖಲೆಗಳು.

4. ಫಾರ್ಮ್ 16ರ ಜೊತೆಗೆ ಉದ್ಯೋಗಿಯ ಗುರುತು ಪತ್ರ ನೀಡಬೇಕಾಗಿರುತ್ತದೆ.

5. ಕೊನೆಯದಾಗಿ ಪ್ರಮುಖವಾಗಿ ಪಾಸ್ಪೋರ್ಟ್ ಸೈಜ್ ಫೋಟೋ ನೀಡಬೇಕಾಗಿರುತ್ತದೆ.

 IDBI ಬ್ಯಾಂಕಿನಲ್ಲಿ ಲೋನ್ ಅಪ್ಲೈ ಮಾಡುವಂತಹ ವಿಧಾನ How to apply to Get IDBI Bank Personal Loan

1. ಮೊದಲನೆಯದಾಗಿ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ (IDBI Bank) ಹೋಗಿ ಅಲ್ಲಿ ಪರ್ಸನಲ್ ಲೋನ್ ನೀಡುವಂತಹ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.

2. ಇದಾದ ನಂತರ ನಿಮ್ಮ ಪರದೆಯ ಮೇಲೆ ಲೋನ್ ಗೆ ಸಂಬಂಧ ಪಟ್ಟಂತಹ ಪ್ರತಿಯೊಂದು ಮಾಹಿತಿಗಳು ಕೂಡ ಓಪನ್ ಆಗುತ್ತವೆ.

3. ಒಂದು ವೇಳೆ ನೀವು ಬ್ಯಾಂಕಿನ ಗ್ರಾಹಕರಾಗಿದ್ದರೆ ಹೌದು ಎಂಬುದಾಗಿ ಕ್ಲಿಕ್ ಮಾಡಿ ನಂತರ ನಿಮ್ಮ ಖಾತೆಯ ಅಥವಾ ಕಸ್ಟಮರ್ ಐಡಿಯನ್ನು ಸಬ್ಮಿಟ್ ಮಾಡಿದ ನಂತರ ನಿಮ್ಮ ಮೊಬೈಲ್ ಗೆ ಬರುವಂತಹ ಓಟಿಪಿಯನ್ನು ಅಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ.

4. ಒಂದು ವೇಳೆ ನೀವು ಗ್ರಾಹಕರು ಅಲ್ಲದೆ ಹೋದಲ್ಲಿ ಅಲ್ಲ ಎನ್ನುವಂತಹ ಆಪ್ಷನ್ ಅನ್ನು ಕ್ಲಿಕ್ ಮಾಡಿ ನಂತರ ಫಾರ್ಮ್ ನಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾಗಿ ತುಂಬಿಸಬೇಕಾಗುತ್ತದೆ.

5. ಫಾರ್ಮ್ ಅನ್ನು ಸಬ್ಮಿಟ್ ಮಾಡಿದ ಕೆಲವೇ ದಿನಗಳಲ್ಲಿ ಬ್ಯಾಂಕಿನಿಂದ ನಿಮ್ಮನ್ನು ಸಂಪರ್ಕಿಸಲಾಗುತ್ತದೆ ಹಾಗೂ ನೀವು ಫಾರಂ ತೆಗೆದುಕೊಂಡು ಹತ್ತಿರದ ಬ್ರಾಂಚಿಗೆ ಹೋಗಬೇಕಾಗಿರುತ್ತದೆ.

6. ಇದಾದ ನಂತರ ನಿಮ್ಮ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ದಾಖಲೆಗಳ ಜೊತೆಗೆ ಪರಿಶೀಲಿಸಲಾಗುತ್ತದೆ. ಇದಾದ 24 ಗಂಟೆಗಳ ಒಳಗಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಬ್ಯಾಂಕಿನಿಂದ ಮಾಡಲಾಗುತ್ತದೆ.

Comments are closed.