Tata Sky Instant 3 days Loan: ಟಾಟಾ ಸ್ಕೈ ರೀಚಾರ್ಜ್ ಮಾಡೋದಕ್ಕೆ ಹಣ ಇಲ್ವಾ? ಚಿಂತೆನೇ ಬೇಡ, ಟಾಟಾ ಸ್ಕೈ ನಿಂದಲೇ ಪಡೆಯಿರಿ ರಿಚಾರ್ಜ್ ಲೋನ್!

Tata Sky Instant 3 days Loan: ಇತ್ತೀಚಿನ ದಿನಗಳಲ್ಲಿ ಟಾಟಾ ಸ್ಕೈ, ಸನ್ ಡೈರೆಕ್ಟ್, ಎರ್ಟೆಲ್, ಜಿಯೋ ಮೊದಲಾದ ಕಂಪನಿಗಳು ಅತಿ ಕಡಿಮೆ ಬೆಲೆಗೆ ಆಫರ್ ಮೂಲಕ ಟಿವಿ ಚಾನಲ್ (TV Channel) ಗಳನ್ನು ಒದಗಿಸ್ತ್ತಿರುವ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಸುಮಾರು 50% ನಷ್ಟಾದರೂ ಕಡಿಮೆ ಆಗಿದೆ ಎಂದೇ ಹೇಳಬಹುದು. ನಮ್ಮ ಬಳಿ ಹಣಾವೇ ಇಲ್ಲದಿದ್ದರೂ ಟಾಟಾ ಸ್ಕೈ (Tata Sky) ನಂತ ಕಂಪನಿಗಳು ಸಾಲವನ್ನೂ (Tata Sky Instant 3 days Loan) ನೀಡಿ ರಿಚಾರ್ಜ್ ಸೌಲಭ್ಯ ಒದಗಿಸುತ್ತವೆ.  

ಅಂದಹಾಗೆ ನಿಮ್ಮ ಮನೆಯ ಟಿವಿ ಕನೆಕ್ಟ್ (TV Connect) ಆಗ್ತಾ ಇಲ್ವಾ? ಅವಧಿ ಮುಗಿದ ಕೂಡಲೇ ರಿಚಾರ್ಜ್ ಮಾಡಿಸಿಕೊಳ್ಳಲು ನಿಮ್ಮಲ್ಲಿ ಹಣವಿಲ್ಲವೇ? ಹಾಗಾದರೆ ಯೋಚಿಸಬೇಡಿ ನೋಡಿ ಇಲ್ಲಿದೆ ಪರಿಹಾರ. ನೀವು ಟಾಟಾ ಸ್ಕೈ ಗ್ರಾಹಕರಾಗಿದ್ರೆ, ಟಾಟಾ ಸ್ಕೈ ನೀಡಲಿದೆ ರಿಚಾರ್ಜ್ ಲೋನ್ (Tata Sky Instant 3 days Loan).

How to get Tata Sky Instant 3 days Loan, Tata Sky providing loan for recharge, and you can pay it back in week. How to get it here are the details.  

ನೀವು ಟಾಟಾ ಸ್ಕೈ ಬಳಕೆದಾರರಾಗಿದ್ದರೆ ಯಾವುದಾದರೂ ಒಂದು ಕಾರ್ಯಕ್ರಮವನ್ನು ಟಿವಿಯಲ್ಲಿ ಕಾಯಂ ಆಗಿ ವೀಕ್ಷಿಸುತ್ತಿದ್ದೀರಿ ಎಂದು ಭಾವಿಸಿ. ಆಗ ಅಕಸ್ಮಾತ್ ನೆನಪಿಲ್ಲದೆಯೋ ಅಥವಾ ಹಣವಿಲ್ಲದೆಯೋ ರಿಚಾರ್ಜ್ ನ ದಿನಾಂಕ ಮರೆತು ಹೋಗಿ ರಿಚಾರ್ಜ್ (Recharge) ಮಾಡದೇ ಇರಬಹುದು. ನೀವು ನೋಡುತ್ತಿರುವ ಆ ಉತ್ತಮ ಕಾರ್ಯಕ್ರಮ ನೋಡಲಾಗದೆ ಪರಿತಪಿಸಬೇಕಾಗುತ್ತದೆ ಅಲ್ಲವೇ? ಆದರೆ ಇನ್ನು ಮುಂದೆ ಚಿಂತೆಯೇ ಬೇಡ. ಯಾಕಂದರೆ ಇದೋ ನಿಮಗೆ ಟಾಟಾ ಸ್ಕೈ ಯವರು ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ವಿವರಣೆಗಳನ್ನು ನೋಡುವ ಬನ್ನಿ.

ಪಡೆಯಿರಿ ಟಾಟ್ ಸ್ಕೈ ಇನ್ಸ್ಟೆಂಟ್ ಲೋನ್ Tata Sky Instant 3 days Loan

ಟಾಟಾ ಸ್ಕೈ ಲೋನ್ ಯೋಜನೆ ಎಂಬ ಯೋಜನೆಯನ್ನು ಹೊಸದಾಗಿ ಪರಿಚಯಿಸಿದ್ದಾರೆ. ಏನಿದು ಟಾಟಾ ಸ್ಕೈ ಲೋನ್ ಯೋಜನೆ ಅಂದರೆ? ಹೇಳುತ್ತೇವೆ ಮುಂದೆ ಓದಿ. ನಿಮಗೆ ರಿಚಾರ್ಜ್ ಮಾಡಲು ಕೂಡಲೇ ಹಣವಿಲ್ಲ ಅಂತಾದರೆ ನಿಮ್ಮ ಟಾಟಾ ಸ್ಕೈ ರಿಚಾರ್ಜ್ ಮಾಡಲು ಸಾಧ್ಯವಿದೆ. ಇದರ ಹಣವನ್ನು ಮುಂದೆ ನೀವು ಮೂರು ಅಥವಾ ಐದು ಅಥವಾ ಏಳು ದಿನಗಳ ಒಳಗೆ ಟಾಟಾ ಸ್ಕೈಗೆ ಕೊಟ್ಟರೆ ಸಾಕು. ಒಮ್ಮೆಗೆ ನಿಮಗೆ ಹಣ ತೆಗೆದುಕೊಳ್ಳದೆ ರಿಚಾರ್ಜ್ ಮಾಡುತ್ತಾರೆ. ಅಂದರೆ ಸಾಲದ ಮಾದರಿಯಲ್ಲಿ (ಕ್ರೆಡಿಟ್ ಲೋನ್ ಮಾದರಿ) ನೀವು ರಿಚಾರ್ಜ್ ಮಾಡಿಸಿಕೊಂಡು ನಂತರ ನಿಗದಿತ ದಿನದ ಒಳಗೆ ಆ ಹಣವನ್ನ ಟಾಟಾ ಸ್ಕೈ ಗೆ ಹಿಂತಿರುಗಿಸಬೇಕು.

ನಿಮಗಿದು ಗೊತ್ತಾ? ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ Loan, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!

ಹಾಗಾದರೆ ಹೇಗೆ ಟಾಟಾ ಸ್ಕೈ ರಿಚಾರ್ಜ್ ಮಾಡೋದು ತಿಳಿದುಕೊಳ್ಳೋಣ How to get Tata Sky Instant 3 days Loan

 • ಟಾಟಾ ಸ್ಕೈಯೊಡನೆ ನೀವು ರೆಜಿಸ್ಟರ್ ಮಾಡಿದ ಮೊಬೈಲ್ ನಂಬರ್ನಿಂದ 080 68686868 ಇಲ್ಲಿಗೆ ಡಯಲ್ ಮಾಡಿ (Call this no – 080 68686868)
 • ಅಲ್ಲಿ ಲೋನ್  ವಿಭಾಗವನ್ನು ಕ್ಲಿಕ್ ಮಾಡಿ
 • ಆವಾಗ ಒಂದು ಹೊಸ ಪೇಜ್ ಬರುತ್ತದೆ ಅಲ್ಲಿ ನಿಮಗೆ ಎಷ್ಟು ರೂಪಾಯಿಯ ರಿಚಾರ್ಜ್ ಬೇಕು ಎಂಬುದನ್ನು ನಮೂದಿಸಿ
 • ರೂ.50 ಇಂದ ರೂ.1,000ಗಳವರೆಗೆ ಬೇರೆ ಬೇರೆ ಯೋಜನೆಗಳು ಇವೆ
 • ನಿಮಗೆ ಬೇಕಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ
 • ಅದರ ನಂತರ ಪ್ರೋಸೀಡ್ (Proceed) ಬಟನ್ ಅನ್ನು ಒತ್ತಿರಿ
 • ಆಗ ಕೂಡಲೇ ಟಾಟಾ ಸ್ಕೈ ಮೂಲಕ ನೀವು ನಮೂದಿಸಿದ ಮೊತ್ತದ ಸಾಲ (Loan) ಮಂಜೂರಾಗಿ ಕೂಡಲೇ ನೀವು ನೋಡುತ್ತಿರುವ ಪ್ರೋಗ್ರಾಮನ್ನು ಆನಂದಿಸಬಹುದು

ಟಾಟಾ ಸ್ಕೈ ರಿಚಾರ್ಜ್ ಪಡೆದುಕೊಳ್ಳಲು ಯಾರು ಅರ್ಹರು? Who can get Tata Sky Instant 3 days Loan

 • ಟಾಟಾ ಸ್ಕೈಯ ಗ್ರಾಹಕರಾಗಿರಬೇಕು (You must be Tata Sky costumers)
 • ಅಲ್ಲಿ ಬ್ಯಾಲೆನ್ಸ್ 50 ರೂಪಾಯಿಗಿಂತ ಕಡಿಮೆ ಇರಬೇಕು
 • ಈ ಹಿಂದೆ ನೀವು ಸಾಲ ಪಡೆದು ರಿಚಾರ್ಜ್ ಹಾಕಿಸಿದ್ದರೆ ಅದನ್ನು ಪೂರ್ಣ ಪಾವತಿ ಮಾಡಿರಬೇಕು
 • ನೀವು ಕೊಡುವ ಎಲ್ಲ ಮಾಹಿತಿಗಳನ್ನು ಆದರಿಸಿ ನೀವು ಹೇಳಿದ ದಿನಾಂಕಕ್ಕೆ ನೀವು ಹೇಳಿದಷ್ಟು ಮೊತ್ತ ಕಡಿತವಾಗುತ್ತದೆ.
 • ಆ ದಿನಕ್ಕೆ ಅಲ್ಲಿ ಬೇಕಾದಷ್ಟು ಮೊತ್ತವಿಲ್ಲದಿದ್ದರೆ ಮತ್ತೆ ಅದಕ್ಕೆ ಇಪ್ಪತ್ತು ರೂಪಾಯಿ ದಂಡ (Penalty) ವಿಧಿಸಲಾಗುವುದು

ನೀವು ಈಗಾಗಲೇ ಟಾಟಾ ಸ್ಕೈ ಇದರ ಗ್ರಾಹಕರಾಗಿದ್ದು, ನೀವು ಇರುವ ಜಾಗದಿಂದ ರಿಚಾರ್ಜ್ ಹಾಕಿಕೊಳ್ಳಲು ನೆಟ್ವರ್ಕ್ (Network) ಇಲ್ಲದ ಪಕ್ಷದಲ್ಲಿ ಅಥವಾ ರಿಚಾರ್ಜ್ ಹಾಕುವ ಮನೆಯ ಮಾಲೀಕರು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಏನಾದರೂ ಒಂದು ಅಡಚಣೆಯಿಂದ (If any Issues)  ಆ ದಿನಕ್ಕೆ ಹಣವಿಲ್ಲದಿದ್ದರೆ ಹಣವಿಲ್ಲ ಎಂಬ ಕಾರಣಕ್ಕೆ ನಿಮ್ಮ ಬೇಕಾದ ಕಾರ್ಯಕ್ರಮಗಳ ವೀಕ್ಷಣೆ,  ಮುಂದುವರಿಯಬೇಕು ಎಂಬ ಒಂದೇ ಒಂದು ಧೋರಣೆಯಿಂದ ಈ ಯೋಜನೆಯನ್ನು Tata Sky ಕಲ್ಪಿಸಿಕೊಟ್ಟಿದೆ.

ಲೋನ್ ಬೇಕಾ? 10 ನಿಮಿಷದಲ್ಲಿ ಐಡಿಬಿಐ ಬ್ಯಾಂಕಿನಿಂದ ಸಿಗುತ್ತೆ 5 ಲಕ್ಷಗಳ ವರೆಗೆ ಲೋನ್.

ಟಾಟಾ ಎಂಬುದು ಭಾರತದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಯಾಗಿದ್ದು ಯಾವುದಾದರೂ ಸಣ್ಣ ಪುಟ್ಟ ಕಾರಣಗಳಿಗಾಗಿ ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಹಾಗಾದರೆ ನೀವು ಕೂಡ ಟಾಟಾ ಸ್ಕೈ ಗ್ರಾಹಕರಾಗಿದ್ದು, ರೀಚಾರ್ಕ್ ಮಾಡಲು ಮರೆತರೆ, ಹಣ ಇಲ್ಲದೇ ಇದ್ದರೆ, ಮನೆಯವರಿಗೆ ಧಾರಾವಾಹಿ, ಬಿಗ್ ಬಾಸ್ ಕಾರ್ಯಕ್ರಮ ನೋಡಲು ಆಗುತ್ತಿಲ್ಲ ಅಂತ ಬೈಸಿಕೊಳ್ಳಬೇಡಿ. ತಕ್ಷಣ ಟಾಟಾ ಸ್ಕೈ ಅವರಿಂದಲೇ ಇನ್ಸ್ಟೆಂಟ್ ಲೋನ್ (Tata Sky Instant 3 days Loan) ಪಡೆದು ರಿಚಾರ್ಜ್ ಮಾಡಿ. ನಿಮ್ಮ ಮನೆಯವರ ಹಾಗೂ ನಿಮ್ಮ ನೆಚ್ಚಿನ ಕಾರ್ಯಕ್ರಮವನ್ನು ಎಂಜಾಯ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಟಾಟಾ ಸ್ಕೈ ವೆಬ್ ಸೈಟ್ ಗೆ ಭೇಟಿ ನೀಡಿ. ಅಥವಾ ಟಾಟಾ ಸ್ಕೈ ಮೊಬೈಲ್ ಅಪ್ಲಿಕೇಶನ್ (Tata Sky) ಮೂಲಕವೂ ಇನ್ಸ್ಟೆಂಟ್ ರಿಚಾರ್ಜ್ ಸೌಲಭ್ಯ ಪಡೆದುಕೊಳ್ಳಬಹುದು!

ಹಾಗಾದರೆ ಇನ್ಯಾಕೆ ತಡ ಟಾಟಾ ಸ್ಕೈ ಗ್ರಾಹಕರು ನೀವಾಗಿದ್ದರೆ ಕೂಡಲೇ ಟಾಟಾ ಸ್ಕೈ ನ ಈ ಪ್ರಯೋಜನವನ್ನು ಪಡೆದುಕೊಳ್ಳಿ, ಸಾವಿರಾರು ಚಾನೆಲ್ ಗಳನ್ನು ಆನಂದಿಸಿ. ಈ ಲೇಖನದ ಮೂಲಕ ನಿಮಗೆ ಟಾಟಾ ಸ್ಕೈ ರಿಚಾರ್ಜ್ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಭಾವಿಸುತ್ತೇವೆ.

Comments are closed.