Muthoot Finance Loan:  ಹಣದ ಅಗತ್ಯ ಇರುವಾಗ ಜಾಗ ಮಾರಬೇಡಿ, ಬದಲಿಗೆ ಅದೇ ಜಾಗಕ್ಕೆ ಕೋಟ್ಯಾಂತರ ರೂ. ಸಾಲ ಪಡೆಯಿರಿ, ಕೆಲವೇ ಕ್ಷಣಗಳಲ್ಲಿ ಹಣ ನಿಮ್ಮ ಖಾತೆಗೆ! ಮಾಹಿತಿ ಇಲ್ಲಿದೆ!

Muthoot Finance Loan ಮುತ್ತುಟ್ ಫೈನಾನ್ಸ್ (ಇವರ ಆಕರ್ಷಕ ಸಾಲ. ನಿಮ್ಮಲ್ಲಿರುವ ಜಮೀನಿನ ಮೇಲೆ ಜಮೀನು ಅಡವ ಆಧಾರದ ಮೇಲೆ ಮುತ್ತೂಟ್ ಫೈನಾನ್ಸ್ (Muthoot Finance Loan) ಇವರು ಸಾಲವನ್ನು ನೀಡುತ್ತಾರೆ ಬನ್ನಿ ಹೇಗೆ ತೆಗೆದುಕೊಳ್ಳಬಹುದು ಯಾಕಾಗಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ನಿಮ್ಮಲ್ಲಿ ಸ್ವಲ್ಪ ಸ್ಥಳ ಅಥವಾ ಜಾಗ ಇದೆ ಎಂದು ತಿಳಿದುಕೊಳ್ಳಿ. ಈ ಸ್ಥಳದ ಮೂಲಕ ಸಾಕಷ್ಟು ಆದಾಯ ಇಲ್ಲದಿದ್ದರೆ ಆದಾಯವನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದಾರೆ ಇಲ್ಲಿದೆ ಪರಿಹಾರ.

You can get Muthoot Finance Loan Up to 10 lakh Rs. How to get it, here are the details.  

ಇವತ್ತಿನ ದುಬಾರಿ ಜಾಗದ (land Price increases)  ಬೆಲೆಯ ಕಾರಣ. ಜಾಗ ಮಾರಿ ಹಣ ಮಾಡಿ ಯಾವುದಾದರು ಒಂದು ಉದ್ಯೋಗಕ್ಕೆ ಕೈ ಹಾಕುವ ಯೋಚನೆ ಮಾಡಬಹುದು ಆದರೆ ನೀವು ಎಣಿಸಿದಂತೆ ವ್ಯಾಪಾರ ವ್ಯವಹಾರ ಮುಂದುವರಿಯದಿದ್ದರೆ ಆಗ ನಿಮ್ಮಲ್ಲಿ ಜಾಗ ಸಹ ಕೈಬಿಟ್ಟು ಹೋಗಿರುತ್ತದೆ ಅಂತೆಯೇ ಹೊಸ ವ್ಯವಹಾರ ಚೆನ್ನಾಗಿ ನಡೆಯದಿರುವುದರಿಂದ ಒಟ್ಟು ಸಂಕಷ್ಟಕ್ಕೆ ಸಿಲುಕಿಕೊಂಡಂತೆ ಆಗುತ್ತದೆ. ಮತ್ತು ಎಷ್ಟೆಂದರೂ ಆಸ್ತಿ ಎಂದರೆ ಅದು ಜಾಗ. ಹಾಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಜಾಗವನ್ನು ಮಾರದೆ ಬೇರೆ ರೀತಿಯಲ್ಲಿ ಅಭಿವೃದ್ಧಿ ಹೊಂದಿ ಜಾಗವನ್ನು ಅಭಿವೃದ್ಧಿಗೊಳಿಸುವಷ್ಟು ಉತ್ತಮ ದಾರಿ ಯಾವುದು ಅಲ್ಲ.

 ನಿಜ ಕಣ್ರೀ.. ಕೇವಲ 15 ಸಂಬಳ ಸಂಬಳ ಬಂದ್ರೂ ಸಾಕು; ಐದೇ ಐದು ನಿಮಿಷಗಳಲ್ಲಿ ಸಿಗತ್ತೆ Personal Loan; ಈ ಸಾಲಕ್ಕೆ ನಿಮ್ಮ ನಂಬಿಕೆಯೇ ದಾಖಲೆ, ಮತ್ತೇನೂ ಬೇಡ!  

ಹಾಗಾದರೆ ಇರುವ ಜಾಗದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಮಾರಾಟ ಮಾಡಿದರೆ ಕೈ ಬಿಟ್ಟು ಹೋಯಿತು, ಹೊಸದಾಗಿ ಕೈಹಿಡಿದ ಉದ್ಯೋಗ ಮುಂದೆ ಏನಾಗುತ್ತೆ ಗೊತ್ತಿಲ್ಲ ಹೀಗಿರುವಾಗ ತನ್ನಲ್ಲಿರುವ ಜಾಗದ ಮೇಲೆ ಸಾಲ ತೆಗೆದುಕೊಂಡು ಯಾವುದಾದರೂ ವ್ಯವಹಾರದಲ್ಲಿ ಆ ಹಣವನ್ನು ತೊಡಗಿಸಿ ವ್ಯವಹಾರವನ್ನು ಪ್ರಾರಂಭಿಸಿದಾಗ ನಮ್ಮ ಜಾಗ ನಮ್ಮ ಕೈಯಲ್ಲಿ ಇರುವುದರಿಂದ ಒಂತರ ಸೆಕ್ಯೂರಿಟಿ (Security)  ಅಥವಾ ಭದ್ರತೆ ನಮ್ಮ ಮನಸ್ಸಲ್ಲಿ ಇರುತ್ತದೆ. ಈ ಭದ್ರತೆಯೇ ಮುಂದೆ ಧೈರ್ಯವನ್ನು ಕೊಡುತ್ತದೆ. ನಾವು ಮಾಡುವ ವ್ಯವಹಾರದಲ್ಲಿ ಧೈರ್ಯ ಇದ್ದರೆ ಅರ್ಧದಷ್ಟು ಯಶಸ್ವಿಯಾದಂತೆ. ಹಾಗಾಗಿ ಇದ್ದ ಜಾಗವನ್ನು ಮಾರಲಿಕ್ಕೆ ಹೋಗಬೇಡಿ. ಆ ಜಾಗವನ್ನು ಹಾಗೆ ಇಟ್ಟುಕೊಂಡು ಅದರ ಮೇಲೆ ಸಾಲ ಸಿಗುತ್ತದೆ ಮತ್ತು ನಿಮ್ಮ ಕಲ್ಪಿಸಿದ ಉದ್ಯೋಗಕ್ಕೆ ಸಾಲ ಬೇಕಾಗುತ್ತದೆ ಅಂತ ಯೋಚಿಸಿ ನಂತರ ಸಾಲ ಮಾಡಿ.

ಮುತ್ತೂಟು ಫೈನಾನ್ಸ್ (Muthoot Finance Loan) ಎಂಬುದು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿ (Non-banking financial Compney)  ಅಂದರೆ ಎನ್ ಬಿ ಎಫ್ ಸಿ (NBFC) ಆಗಿರುತ್ತದೆ. ಅಂದರೆ ಇದು ಬ್ಯಾಂಕ್ ಅಲ್ಲ. ಇವರ ಎಲ್ ಎ ಪಿ ಎಂದರೆ ಲೋನ್ ಅಗೈನ್ಸ್ಟ್ ಪ್ರಾಪರ್ಟಿ (Lan Agreement Property)  ಎಂಬ ಒಂದು ಯೋಜನೆಯಲ್ಲಿ ಆಸ್ತಿಯ ಮೇಲೆ ಸಾಲ ಸಿಗುತ್ತದೆ. ಜಾಗದ ಅಡಮಾನದ ಮೇಲೆ ಅಂದರೆ ಆಧಾರದ ಮೇಲೆ ಇಲ್ಲಿ ಸಾಲ ಸೌಲಭ್ಯ ಸಿಗುತ್ತದೆ.

ಮುತ್ತೂಟ್ ಫೈನಾನ್ಸ್ ನಲ್ಲಿ ಎಷ್ಟು ಸಿಗಲಿದೆ ಲೋನ್ (How much amount you can get in Muthoot Finance Loan)

ಒಂದು ಲಕ್ಷದಿಂದ 10 ಕೋಟಿ ರೂಪಾಯಿವರೆಗೆ ನಿಮ್ಮ ಆಸ್ತಿಯ ಮೌಲ್ಯದ ಆಧಾರದ ಮೇಲೆ ಸಾಲ ಸಿಗುತ್ತದೆ. ಹೆಚ್ಚು ಎಂದರೆ 15 ವರ್ಷಗಳಷ್ಟು ದೀರ್ಘಾವಧಿ ಸಾಲ ಸಿಗುತ್ತದೆ . ಸಾಲದ ಮರುಪಾವತಿ ಅವಧಿ ನಿರ್ಣಯಿಸುವಾಗ ಅಂದರೆ ದೀರ್ಘಾವಧಿ ಆಯ್ಕೆ ಮಾಡಿಕೊಂಡರೆ ಕಂತು ಕಡಿಮೆ ಇರುತ್ತದೆ. ಆದರೆ ಒಟ್ಟು ನೀವು ಪಾವತಿಸಿದ ಬಡ್ಡಿ ಜಾಸ್ತಿಯಾಗಿರುತ್ತದೆ. ಇನ್ನು ಬಡ್ಡಿ (Rate of Interest) ಜಾಸ್ತಿಯಾಗುತ್ತದೆ ಎನ್ನುವ ಕಾರಣಕ್ಕೆ ತುಂಬಾ ಕಡಿಮೆ ಅವಧಿ ಆಯ್ಕೆ ಮಾಡಿಕೊಂಡರೆ ತಿಂಗಳ ಕಂತು ತುಂಬಾ ಜಾಸ್ತಿಯಾಗುತ್ತಿದೆ. ಹಾಗಾಗಿ ಒಟ್ಟು ನಿಮ್ಮ ಆದಾಯ ಮತ್ತು ಸಾಲ ಮರುಪಾವಧಿಯ (Loan Repayment)  ನಿಮ್ಮ ಶಕ್ತಿಯನ್ನು ಗ್ರಹಿಸಿಕೊಂಡು ಒಂದು ಸೂಕ್ತವಾದ ನಿರ್ಣಯಕ್ಕೆ ಬನ್ನಿ.

ಸಾಲದ ಮೇಲಿನ ಬಡ್ಡಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಆಧಾರದ ಮೇಲೆ ನಿರ್ಣಯವಾಗುತ್ತದೆ. ಒಳ್ಳೆಯ ಕ್ರೆಡಿಟ್ ಸ್ಕೋರಿದ್ದರೆ ಕಡಿಮೆ ಬಡ್ಡಿ, ಚಾರ್ಜ್ ಮಾಡಲಾಗುತ್ತದೆ. ಅಂತೂ 11 ರಿಂದ 16% ಬಡ್ಡಿ ದರ ಚಾರ್ಜ್ ಮಾಡಲಾಗುತ್ತದೆ.

ಸಾಲ ಪಡೆಯಲು ಬೇಕಾಗುವ ಅರ್ಹತೆಗಳು (Eligibilities to get Muthoot Finance Loan)

  • ಜಾಗದ ರೆಕಾರ್ಡ್ಸ್ ಸರಿಯಾಗಿರಬೇಕು
  • ಭಾರತೀಯ ಪ್ರಜೆಯಾಗಿರಬೇಕು
  • ಪ್ರತಿ ತಿಂಗಳು ವೇತನ ಪಡೆಯುವವರು ಅಥವಾ ಸ್ವಂತ ಉದ್ಯೋಗ ಮಾಡುತ್ತಿರುವವರು ಆಗಿರಬೇಕು
  • 21 ವರ್ಷ ಮೀರಿರಬೇಕು ಮತ್ತು ಸಾಲದ ಅವಧಿ ಮುಗಿಯುವಾಗ ನಿಮ್ಮ ವಯಸ್ಸು 65 ಮೀರಿರಬಾರದು. ಅಂದರೆ 50 ವರ್ಷಕ್ಕೆ ನೀವು  15 ವರ್ಷಗಳ ಮರುಪಾವತಿ ಆಯ್ಕೆ ಮಾಡಿಕೊಂಡರೆ ಆಗ ನಿಮ್ಮ ವಯಸ್ಸು 65 ಆಗುತ್ತದೆ.
  • ಒಳ್ಳೆಯ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಇರಬೇಕು
  • ಆಸ್ತಿಯ ರಿಕಾರ್ಡ್ ಎಲ್ಲ ಸರಿಯಾಗಿರಬೇಕು ಟೈಟಲ್ ಡೀಡ್ ಅಥವಾ ಸೇಲ್ ಡಿಡ್ ಇದರ ಜೊತೆಗೆ ಎಲ್ಲಾ ಟ್ಯಾಕ್ಸುಗಳನ್ನು ಕಟ್ಟಿದ ರಶೀದಿಗಳು ಜಾಗದ ನಕ್ಷೆ ಇತ್ಯಾದಿಗಳು ಆರ್ ಟಿ ಸಿ ಎಲ್ಲಾ ಸರಿಯಾಗಿ ಇರಬೇಕು
  • ಸದ್ರಿ ಆಸ್ತಿಯ ಮೇಲೆ ಈಗ ಮಾಡಿದಂತಹ ಯಾವುದೇ ಸಾಲ ಮೂಲ ಅಥವಾ ಈ ಆಸ್ತಿಯನ್ನು ಯಾವುದಾದರು ಕಾರಣಕ್ಕೆ ಭದ್ರತೆಗಾಗಿ ಅಡಮಾನ ಮಾಡಿದ್ದು ಇರಬಾರದು
  • ಆಧಾರ್ ಕಾರ್ಡ್ ಪಾನ್ ಕಾರ್ಡ್ ರೇಷನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಹೊಂದಿರಬೇಕು.
  • ನೀವು ಹೇಳಿದಂತಹ ವಿಳಾಸದಲ್ಲಿ ನೀವು ವಾಸಿಸುತ್ತಿರಿ ಎನ್ನುವ ಬಗ್ಗೆ ಯಾವುದಾದರೂ ಒಂದು ದಾಖಲೆಯನ್ನು ನೀಡಬೇಕಾಗುತ್ತದೆ ಅದು ಟೆಲಿಫೋನ್ ಬಿಲ್ ಆಗಿರಬಹುದು ಅಥವಾ ಎಲೆಕ್ಟ್ರಿಸಿಟಿ ಬಿಲ್ ಆಗಿರಬಹುದು ಇಲ್ಲವೆಂದಲ್ಲಿ ಪಾಸ್ ಪೋರ್ಟ್ ಸಹ ಆಗುತ್ತದೆ.
  • ನಿಮ್ಮ ಆದಾಯದ ಬಗ್ಗೆ ದಾಖಲೆ ನೀವು ಉದ್ಯೋಗಿಯಾಗಿದ್ದರೆ ಸೆಲ್ಲರಿ ಸ್ಲಿಪ್ ಇಲ್ಲ ನೀವು ಸ್ವಂತ ಉದ್ಯೋಗವನ್ನು ಮಾಡುತ್ತಿದ್ದರೆ ಕಳೆದ ವರ್ಷದ ಬ್ಯಾಲೆನ್ಸ್ ಶೀಟ್ ಆರು ತಿಂಗಳ ಬ್ಯಾಂಕ್ ವ್ಯವಹಾರದ ಸ್ಟೇಟ್ಮೆಂಟ್ ಮತ್ತು ಇದರ ಮೊದಲಿನ ಮೂರು ವರ್ಷಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿದ ದಾಖಲೆ ಒದಗಿಸಬೇಕಾಗುತ್ತದೆ
  • ಪ್ರೊಸೆಸಿಂಗ್ ಫೀಸ್ (Processing Fee) ಅಂತ ಶೇಕಡ ಒಂದರಿಂದ ಶೇಕಡ ಎರಡು ಚಾರ್ಜ್ ಮಾಡುತ್ತಾರೆ
  • ಅವಧಿಗಿಂತ ಮೊದಲು ಅಂದರೆ ನೀವೇ ನಿಗದಿಪಡಿಸಿದ ಮರುಪಾವತಿ ಅವಧಿಯ ಮೊದಲು ಸಾಲವನ್ನು ಮರುಪಾವತಿಸಿದರೆ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗುತ್ತದೆ.

ಒಟ್ಟು ಸಾರಾಂಶ: ನಿಮಗೆ ಸಾಲ ಸಿಗಬೇಕಾದರೆ ಒಳ್ಳೆಯ ಕ್ರೆಡಿಟ್ ಹಿಸ್ಟರಿ ಅಂದರೆ ಸಿಬಿಲ್ ಸ್ಕೋರ್ ಇರಬೇಕಾಗುತ್ತದೆ. ಎಲ್ಲಿಗೂ ಅಡಮಾನ ಮಾಡದೆ ಇರುವ ಮತ್ತು ಎಲ್ಲ ದಾಖಲೆಗಳು ಸರಿಯಾಗಿ ವ್ಯವಸ್ಥಿತವಾಗಿ ಇರುವ ಸ್ಥಳಕ್ಕೆ ಸಾಲ ಸಿಗುತ್ತದೆ. ಸಾಲ ಪಡೆದುಕೊಳ್ಳುವವನು ತುಂಬಾ ಜಾಗೃತೆಯಿಂದ ತಮಗೆ ಅಗತ್ಯ ಇರುವಷ್ಟೇ ಸಾಲವನ್ನು ತೆಗೆದು ಎಷ್ಟು ತಿಂಗಳಲ್ಲಿ ಕಟ್ಟಬಹುದು ಎಂಬುದನ್ನು ಸರಿಯಾಗಿ ವಿವೇಚಿಸಿ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ. ಕ್ರೆಡಿಟ್ ಹಿಸ್ಟರಿ ಚೆನ್ನಾಗಿಲ್ಲದಿದ್ದರೆ ಮುತ್ತೂಟ್ ಫೈನಾನ್ಸ್ (Muthoot Finance Loan) ಇವರಿಂದ ಸಾಲ ಸಿಗುವುದು ಕಷ್ಟ ಸಾಧ್ಯ. ಸರಿಯಾಗಿ ಕ್ರೆಡಿಟ್ ಹಿಸ್ಟರಿ ಮತ್ತು ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಆಸ್ತಿಯ ಮಾರ್ಕೆಟ್ ರೇಟ್ ಪರಿಗಣಿಸಿ 1 ಲಕ್ಷದಿಂದ 10 ಕೋಟಿಯವರೆಗೆ ಸಾಲ ಸಿಗುವುದರಲ್ಲಿ ಅನುಮಾನ ಇಲ್ಲ.

Comments are closed.