ಅತಿ ಸುಲಭವಾಅಗಿ PMEGP ಲೋನ್ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಮಸ್ಕಾರ ಸ್ನೇಹಿತರೆ ನಿಮಗೆ ಸಾಲ ಬೇಕಾಗಿದ್ದು ಯಾವುದೇ ಮಾಧ್ಯಮದ ಮೂಲಕವೂ ಕೂಡ ಸಾಲ ಸಿಗದೆ ಹೋದಲ್ಲಿ ನಿಮಗೆ ಸಾಲು ಸಿಗುವಂತಹ ಒಂದು ಮಾಧ್ಯಮವನ್ನು ಇವತ್ತಿನ ಈ ಲೇಖನಿಯ ಮೂಲಕ ವಿವರಿಸಲು ಹೊರಟಿದ್ದೇವೆ. PMEGP ಎನ್ನುವಂತಹ ಸರ್ಕಾರಿ ಯೋಜನೆಯ ಮೂಲಕ ಅವು ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಕೇವಲ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗೋದು ಮಾತ್ರವಲ್ಲದೆ 35 ಪ್ರತಿಶತ ಸಬ್ಸಿಡಿ ಕೂಡ ನಿಮಗೆ ದೊರಕುತ್ತದೆ. ಹಾಗಿದ್ರೆ ಬನ್ನಿ ಯೋಜನೆಯ ಮೂಲಕ ಎಷ್ಟು ಲೋನ್ ಸಿಗುತ್ತದೆ ಹಾಗೂ ಲೋನ್ ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇನ್ನು ಪ್ರತಿ ಬಾರಿ ನೀವು ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಲೋನ್ ಪಡೆದುಕೊಳ್ಳುತ್ತಿರುವಂತಹ ಸಂಸ್ಥೆ RBI ಹಾಗೂ NBFC ಸರ್ಟಿಫೈಡ್ ಆಗಿದೆಯೋ ಇಲ್ಲವೋ ಭರವಸೆಗೆ ಯೋಗ್ಯವೂ ಇಲ್ಲವೋ ಎನ್ನುವುದನ್ನು ಪ್ರಮುಖವಾಗಿ ಪರೀಕ್ಷಿಸಿಕೊಳ್ಳಬೇಕಾಗಿರುತ್ತದೆ. PMEGP ಲೋನ್ ಯೋಜನೆಯ ಬಗ್ಗೆ ಮಾತನಾಡುವುದಾದರೆ ಇದು ಸರ್ಕಾರವೇ ಜಾರಿಗೆ ತಂದಿರುವಂತಹ ಲೋನ್ ಯೋಜನೆ ಆಗಿರುವುದರಿಂದ ಈ ಕುರಿತಂತೆ ತಲೆ ಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ.

PMEGP ಲೋನ್ ಅಂದರೆ ಏನು?

PMEGP ಅಂದ್ರೆ ಏನು ಅನ್ನೋದನ್ನ ಪ್ರಮುಖವಾಗಿ ಮೊದಲಿಗೆ ತಿಳಿದುಕೊಳ್ಳ ಬೇಕು. Prime Minister Employment Generation Program ಅನ್ನೇ PMEGP ಎಂಬುದಾಗಿ ಕರೆಯಲಾಗುತ್ತದೆ. ಇದನ್ನು ಗ್ರಾಮೀಣ ಹಾಗೂ ನಗರ ವಿಭಾಗದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಲು ಜಾರಿಗೆ ತಂದಿರುವ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ. ಈ ಮೂಲಕ ನೀವು ಕಡಿಮೆ ಬಡ್ಡಿ ದರದಲ್ಲಿ 50 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆದರೆ ನಿಮಗೆ ಎಷ್ಟು ಸಾಲ ಸಿಗುತ್ತದೆ ಎನ್ನುವುದು ನೀವು ಯಾವ ಉದ್ಯಮವನ್ನು ಪ್ರಾರಂಭಿಸುತ್ತಿದ್ದೀರಿ ಅನ್ನುವುದರ ಮೇಲೆ ನಿರ್ಧಾರಿತವಾಗಿರುತ್ತದೆ.

PMEGP ಲೋನಿನ ಮೇಲಿನ ಬಡ್ಡಿದರ

PMEGP ಲೋನಿನ ಮೇಲೆ ವಿಧಿಸಲಾಗುವಂತಹ ಬಡಿದರೆ ಬೇರೆ ಸಾಮಾನ್ಯ ಪರ್ಸನಲ್ ಲೋನ್ ಗಿಂತ ಕಡಿಮೆಯಾಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ವಾರ್ಷಿಕವಾಗಿ 11 ರಿಂದ 12 ಪ್ರತಿಶತ ಬಡ್ಡಿದರವನ್ನು ಈ ಸಾಲದ ಮೇಲೆ ವಿಧಿಸಲಾಗುತ್ತದೆ. ಇನ್ನು ನೀವು ಪ್ರಾರಂಭ ಮಾಡುವಂತಹ ಉದ್ಯಮದ ಮೇಲೆ ಕೂಡ ನೀವು ಪಡೆದುಕೊಳ್ಳುವಂತಹ ಸಾಲ ಹಾಗೂ ಅದರ ಬಡ್ಡಿದರ ನಿರ್ಧಾರವಾಗುತ್ತದೆ. ಇದು ಮಾತ್ರವಲ್ಲದೆ 15ರಿಂದ 35 ಪ್ರತಿಶತ ಸಬ್ಸಿಡಿ ಕೂಡ ನೀವು ಪಡೆಯುವಂತಹ ಸಾಲದ ಮೇಲೆ ನೀವು ಪಡೆದುಕೊಳ್ಳಬಹುದು.

ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು

  1. 18 ವರ್ಷದ ಮೇಲಿನ ಯಾವುದೇ ವ್ಯಕ್ತಿ ಕೂಡ PMEGP ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  2. ಸರ್ಕಾರದ ಈ ಸಾಲ ಯೋಜನೆಯ ಮೂಲಕ ನಿಮ್ಮ ಉದ್ಯಮಕ್ಕೆ ಸಾಲವನ್ನು ಹಾಗೂ ಅದರ ಮೂಲಕ ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
  3. ಒಂದು ವೇಳೆ ನೀವು 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತಹ ಉದ್ಯಮಕ್ಕೆ ಸಾಲವನ್ನು ಪಡೆದುಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದರೆ ಎಂಟನೇ ತರಗತಿ ಪಾಸ್ ಆಗಿರುವಂತಹ ಮಾರ್ಕ್ ಶೀಟನ್ನು ನೀಡಬೇಕಾಗಿರುತ್ತದೆ.
  4. ಇದಕ್ಕಿಂತಲೂ ಮುಂಚೆ ನೀವು ಒಂದು ವೇಳೆ ಯಾವುದೇ ರೀತಿಯ ಸರ್ಕಾರಿ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಂಡಿದ್ದರೆ ನಿಮಗೆ ಸಾಲ ದೊರಕುವುದಿಲ್ಲ. ಸಬ್ಸಿಡಿ ಎಷ್ಟು ಸಿಗುತ್ತೆ?

PMEGP ಯೋಜನೆ ಅಡಿಯಲ್ಲಿ ಪಡೆಯುವಂತಹ ಸಾಲದ ಮೇಲೆ ಸಬ್ಸಿಡಿ ಎಷ್ಟು ಸಿಗುತ್ತೆ ಅನ್ನೋದನ್ನ ಉದಾಹರಣೆ ರೂಪದಲ್ಲಿ ಹೇಳುತ್ತೇವೆ ಬನ್ನಿ. ಒಂದು ವೇಳೆ ನೀವು ಯಾವುದೇ ರೀತಿಯ ವ್ಯಾಪಾರವನ್ನು ಪ್ರಾರಂಭ ಮಾಡುವುದಕ್ಕೆ ನಿಮಗೆ 10 ಲಕ್ಷ ರೂಪಾಯಿಗಳ ಅಗತ್ಯತೆ ಇರುತ್ತದೆ ಎಂಬುದಾಗಿ ಭಾವಿಸಿ. ಆ ಸಂದರ್ಭದಲ್ಲಿ ಆ ಸಾಲದ 80 ಪ್ರತಿಶತ ಅಂದ್ರೆ 8 ಲಕ್ಷ ರೂಪಾಯಿಗಳ ಸಾಲವನ್ನು ಸರ್ಕಾರ ನೀಡುತ್ತದೆ. ಅದರ ಮೇಲೆ ಸಬ್ಸಿಡಿ ರೂಪದಲ್ಲಿ 35% ಹಣವನ್ನು ನೀಡುತ್ತದೆ ಅಂದ್ರೆ 8 ಲಕ್ಷದಲ್ಲಿ 35 ಪ್ರತಿಶತ ಅಂದ್ರೆ 2.80 ಲಕ್ಷ ರೂಪಾಯಿ ಆಗುತ್ತದೆ. ಅಂದರೆ ನಿಮಗೆ ಸಾಲ ಹಾಗೂ ಸಬ್ಸಿಡಿ ಒಟ್ಟಾರೆ ಸೇರಿಸಿ 10.8 ಲಕ್ಷ ರೂಪಾಯಿ ಹಣ ಸಿಗುತ್ತದೆ.

PMEGP ಲೋನ್ ಪಡೆದುಕೊಳ್ಳುವ ವಿಧಾನ

  1. ಎಲ್ಲಕ್ಕಿಂತ ಮುಂಚೆ ನೀವು ಅಧಿಕೃತ ವೆಬ್ಸೈಟ್ ಆಗಿರುವಂತಹ kviconline.gov.in ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಮುಖಪುಟಕ್ಕೆ ಹೋಗಬೇಕಾಗಿರುತ್ತದೆ.
  2. PMEGP ಮುಖಪುಟ ನಿಮಗೆ ತೆರೆದುಕೊಳ್ಳುತ್ತದೆ ಹಾಗೂ ಅಲ್ಲಿ ಕಾಣುವಂತಹ ಲೋನ್ ಗೆ ಅಪ್ಲೈ ಮಾಡುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
  3. ಅಲ್ಲಿ ಅರ್ಜಿ ಫಾರ್ಮ್ ಅನ್ನು ಭರಿಸಿದ ನಂತರ ಸೇವ್ ಡಾಟಾ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  4. ಇದಾದ ನಂತರ ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಪ್ರತಿಯೊಂದು ಅಗತ್ಯ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಬೇಕಾಗಿರುತ್ತದೆ.
  5. ಫೈನಲ್ ಸಬ್ಮಿಶನ್ ನಂತರ ನೀವು ನಿಮ್ಮ ಪ್ರತಿಯೊಂದು ವಿವರಗಳನ್ನು ಹೊಂದಿರುವಂತಹ ಈ ಫಾರ್ಮ್ ಅನ್ನು ಪಿಡಿಎಫ್ ಫೈಲ್ ನಲ್ಲಿ ಸೇವ್ ಮಾಡಿಕೊಳ್ಳಬೇಕು. ಹಾಗೂ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  6. ಕೊನೆಯಲ್ಲಿ FINAL SUBMISSION OF APPLICATION TO SPONSORING AGENCY ಆಪ್ಷನ್ ಅನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಪ್ರತಿಯೊಂದು ಮಾಹಿತಿ ಹಾಗೂ ಫಾರ್ಮ್ ಅನ್ನು ಜಮಾ ಮಾಡಬೇಕು. ಇದಾದ ನಂತರ ನಿಮ್ಮ ಲೋನ್ ಹಣ ಜಾರಿಯಾಗುತ್ತದೆ.

Comments are closed.