Investment: ಈ ವಯಸ್ಸಿನಿಂದಲೇ ಶುರು ಮಾಡಿ ಹೂಡಿಕೆ; ಆಗ ನೀವೂ ಆಗಬಹುದು ಕೋಟ್ಯಾಧಿಪತಿ. ಲೇಟ್ ಆದರೆ ಏನು ಮಾಡಬೇಕು ಗೊತ್ತೇ?

Investment; ನಮಸ್ಕಾರ ಸ್ನೇಹಿತರೇ ಮೊದಲೆಲ್ಲಾ ಕೆಲವೊಂದು ನಿರ್ದಿಷ್ಟ ವಯಸ್ಸಿಗೆ ಹೋದ ನಂತರ ದುಡಿಯುವುದು ಹಾಗೂ ಹಣವನ್ನು ಉಳಿತಾಯ ಮಾಡುವುದನ್ನು ಪ್ರಾರಂಭಿಸಲಾಗುತ್ತಿತ್ತು. ಆದರೆ ಈಗ ವೇಗವಾಗಿ ಓಡುತ್ತಿರುವ ದುನಿಯಾದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಇವುಗಳನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇನ್ನು ಹೊಸದಾಗಿ ಕೆಲಸ ಮಾಡಿರುವ ಯುವಕರಿಗೆ ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳನ್ನು ಕೂಡ ಈಗಾಗಲೇ ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟಿದೆ. ಮ್ಯೂಚುವಲ್ ಫಂಡ್(Mutual Fund), ಇಕ್ವಿಟಿ ಹಾಗೂ ಶೇರು ಮಾರುಕಟ್ಟೆಯಂತಹ ಸ್ಥಳಗಳಲ್ಲಿ ನಿಮಗೆ ಹೂಡಿಕೆ ಮಾಡಲು ಸುಲಭವಾದ ಅವಕಾಶವಿದ್ದು ಈ ಮೂಲಕ ನೀವು ನಿಮ್ಮ ಆರ್ಥಿಕ ಗುರಿಗಳನ್ನು ಸಾಧಿಸಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ಹೂಡಿಕೆಯನ್ನು 20ನೇ ವಯಸ್ಸಿನಿಂದ ಪ್ರಾರಂಭಿಸಿದರೆ ನೀವು ಅಂದುಕೊಂಡಂತಹ ಗುರಿಯನ್ನು ಯಾವುದೇ ಅನುಮಾನವಿಲ್ಲದೆ ಸಾಧಿಸಬಹುದಾಗಿದೆ.

ಇದನ್ನು ಕೂಡ ಓದಿ: ನಿಮ್ಮ ಹತ್ರ ಆಧಾರ್ ಕಾರ್ಡ್ ಇದ್ಯಾ? ಇದನ್ನ ಹಿಡ್ಕೊಂಡು ಬ್ಯಾಂಕ್ ಗೆ ಹೋಗಿ ಅಥವಾ ಮೊಬೈಲ್ ನಲ್ಲಿ ಅಪ್ಲೋಡ್ ಮಾಡಿ, ಮತ್ತೆನೂ ಪ್ರಶ್ನಿಸದೇ ಕೊಡ್ತಾರೆ 2 ಲಕ್ಷದ ವರೆಗೆ ಸಾಲ!

ಯಾಕೆ 20ನೇ ವಯಸ್ಸಿನಲ್ಲಿ ಹೂಡಿಕೆ ಸ್ಟಾರ್ಟ್ ಮಾಡಬೇಕು ಗೊತ್ತಾ?: Do you know why should start investment in 20’s.

20ನೇ ವಯಸ್ಸಿನಲ್ಲಿ ನೀವು ಹೂಡಿಕೆ ಮಾಡುವುದನ್ನು ಪ್ರಾರಂಭಿಸಿದರೆ ನೀವು ಹೂಡಿಕೆ ಮಾಡಿರುವಂತಹ ಹಣದ ಮೇಲೆ ಸಿಗುವಂತಹ ಬಡ್ಡಿಯೇ ನಿಮಗೆ ಹೂಡಿಕೆ ಮೇಲೆ ಮತ್ತೆ ಹೂಡಿಕೆ ರೂಪದಲ್ಲಿ ಪುನರಾವರ್ತನೆ ಆಗುತ್ತದೆ. ಹಾಗೂ ಇಷ್ಟೊಂದು ಕಡಿಮೆ ಸಮಯದಲ್ಲಿ ಹೂಡಿಕೆ ಪ್ರಾರಂಭ ಮಾಡಿರುವುದರಿಂದಾಗಿ ಸಾಕಷ್ಟು ಸಮಯಗಳ ಹೂಡಿಕೆಯ ಅವಧಿಕೂಡ ಸಿಗುತ್ತದೆ.

ಇದೇ ನಿಮಗೆ ನಾಳೆ ಆಸ್ತಿಯಾಗಿ ಪರಿಣಮಿಸಬಹುದು. ಒಂದು ವೇಳೆ ನೀವು 20ನೇ ವಯಸ್ಸಿಗೆ ಹೂಡಿಕೆಯನ್ನು ಪ್ರತಿ ತಿಂಗಳಿಗೆ 10,000 ಗಳಿಗಿಂತ ಪ್ರಾರಂಭಿಸಿದರೆ ಕನಿಷ್ಠಪಕ್ಷ 12% ಬಡ್ಡಿ ದರದ ರೂಪದಲ್ಲಿ ಲೆಕ್ಕಾಚಾರ ಹಾಕಿದರೂ ಕೂಡ 40 ವರ್ಷದ ವಯಸ್ಸಿನ ಸಂದರ್ಭದಲ್ಲಿ ನಿಮಗೆ ಒಂದು ಕೋಟಿ ರೂಪಾಯಿಯ ಆದಾಯ ಸಿಕ್ಕಿರುತ್ತದೆ.

investment tricks and tips kannada guide
investment tricks and tips kannada guide

ಇನ್ನು ನಿಮಗೆ ಹಣವನ್ನು ಹೂಡಿಕೆ ಮಾಡಿ ಉತ್ತಮ ರಿಟರ್ನ್ ನೀಡುವುದಕ್ಕೆ ಭಾರತದಲ್ಲಿ ಸಾಕಷ್ಟು ಉತ್ತಮ ಕಂಪನಿಗಳನ್ನು ನೀವು ಕಾಣಬಹುದಾಗಿದೆ. ಇದೇ ಕಾರಣಕ್ಕಾಗಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ನೀವು ಹೂಡಿಕೆ ಪ್ರಾರಂಭ ಮಾಡಿದರೆ ನಿಮಗೆ ಸಾಕಷ್ಟು ಅಡ್ವಾಂಟೇಜ್ ಸಿಗುತ್ತದೆ. ಸಣ್ಣದಾಗಿ ಪ್ರಾರಂಭ ಆಗಿರುವಂತಹ ಕಂಪನಿಗಳು ಕೂಡ ಈಗ ಬಿಲಿಯನ್ ಡಾಲರ್ ಕಂಪನಿಗಳ ಆಗಿರುವುದನ್ನು ನೀವು ಕಾಣಬಹುದಾಗಿದೆ ಹೀಗಾಗಿ 20ನೇ ವಯಸ್ಸಿನಲ್ಲಿ ಹೂಡಿಕೆ ಮಾಡುವುದು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡುವಂತಹ ಸಾಧ್ಯತೆ ದಟ್ಟವಾಗಿದೆ.

ದೇಶದಲ್ಲಿ ಸಾಕಷ್ಟು ಹೊಸ ಉದ್ಯಮಗಳು ಕೂಡ ಪ್ರಾರಂಭವಾದ ಕೂಡಲೇ ಉತ್ತಮವಾದ ರಿಟರ್ನ್ ಅಥವಾ ಆದಾಯವನ್ನು ನೀಡುವಂತಹ ಸಾಮರ್ಥ್ಯವನ್ನು ಹೊಂದಿರುವುದರಿಂದಾಗಿ ಯುವ ಉದ್ಯೋಗಿಗಳು ಕೂಡ ಇಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ದೀರ್ಘಕಾಲಿಕವಾಗಿ ದೊಡ್ಡಮಟ್ಟದಲ್ಲಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

20ನೇ ವಯಸ್ಸಿನಲ್ಲಿ ಶೇರು ಮಾರುಕಟ್ಟೆ ಮ್ಯೂಚುವಲ್ ಫಂಡ್ ಅಥವಾ ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಗಳಿಸುವಂತಹ ಅವಕಾಶ ಇಂದಿನ ದಿನಗಳಲ್ಲಿ ಯುವ ಜನತೆಗೆ ನಮ್ಮ ಭಾರತ ದೇಶದಲ್ಲಿದೆ. ಈ ಮೂಲಕ ಕೋಟ್ಯಾಂತರ ರೂಪ ಹಣವನ್ನು ಕೂಡ ಸಂಪಾದನೆ ಮಾಡಬಹುದಾಗಿದೆ. ಹೀಗಾಗಿ ನಿಮ್ಮ ಆರ್ಥಿಕ ಭವಿಷ್ಯವನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಲು ನೀವು ಇಂದಿನಿಂದಲೇ ಹೂಡಿಕೆ ಮಾಡುವುದನ್ನು ಪ್ರಾರಂಭಿಸಿ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಅಂದರೆ 40 ರಿಂದ 45 ವರ್ಷಗಳ ಆಸುಪಾಸಿನಲ್ಲಿ ನೀವು ಆರ್ಥಿಕ ಸಬಲತೆಯನ್ನು ಕಂಡುಕೊಳ್ಳುತ್ತೀರಿ.

Comments are closed.