Tirupati darshan: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮಾತ್ರವಲ್ಲ, ಶ್ರಿವಾರಿ ಸೇವೆಗೂ ಸಿಗಲಿದ್ಯಾ ಮುಸ್ಲಿಮ್ ಭಕ್ತರಿಗೆ ಅವಕಾಶ; ಟಿಟಿಡಿ ಮಹತ್ವದ ನಿರ್ಧಾರ!

Tirupati darshan: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಮುಸ್ಲಿಂ ಭಕ್ತರು (Muslim devotees)ಕೂಡ ಶ್ರೀವಾರಿ ಸೇವೆಯಲ್ಲಿ (Tirupati darshan) ತೊಡಗಿಕೊಳ್ಳುವ ವಿಷಯದ ಬಗ್ಗೆ ತಿರುಪತಿ ತಿರುಮಲ ದೇಗುಲ ಮಂಡಳಿ ಚಿಂತನೆ ನಡೆಸುತ್ತಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

Tirupati darshan and Srivari seva opportunity to Muslim devotees in Tirupati.

ತಿಮ್ಮಪ್ಪ ಸನ್ನಿಧಾನದಲ್ಲಿ ಶ್ರೀವಾರಿ ಸೇವೆ! (Srivari Seve in Tirupati)

ಶ್ರೀವಾರಿ ಸೇವೆ ತಿಮ್ಮಪ್ಪನ ಸನ್ನಿಧಾನದಲ್ಲಿ ಭಕ್ತರು ಬಹಳ ಭಕ್ತಿಯಿಂದ ನಡೆಸುವಂತಹ ಒಂದು ಸೇವೆ ಆಗಿದೆ. ಅಂದರೆ ಭಕ್ತರು ಭಕ್ತಿಯಿಂದ ಸ್ವಯಂ ಸೇವೆ ಮಾಡುವುದನ್ನು ಶ್ರೀವಾರಿ ಸೇವೆ ಎನ್ನಲಾಗುತ್ತದೆ ತಿಮ್ಮಪ್ಪನ ಭಕ್ತರು ದೇಗುಲದ 60 ವಿಭಾಗಗಳಲ್ಲಿ ಆಯುಧ ವಿಭಾಗಕ್ಕೆ ಸ್ವಯಂಸೇವಕರಾಗಿ (Tirupati darshan) ಸೇವೆ ಸಲ್ಲಿಸಬಹುದಾಗಿದೆ. ಅದು ಅನ್ನ ಶಾಲೆ, ಆರೋಗ್ಯ,, ಲಾಡು ಸಮರ್ಪಣೆ, ದೆಗುಲ, ಸಾರಿಗೆ, ಪುಸ್ತಕ ಮಳಿಗೆ, ಕಲ್ಯಾಣ ಮಂದಿರ, ಈ ಯಾವುದೇ ವಿಭಾಗದಲ್ಲಿಯೇ ಆಗಿರಬಹುದು ಸ್ವಯಂಸೇವಕರಾಗಿ ಭಕ್ತಾದಿಗಳು ಸೇವೆ ಸಲ್ಲಿಸಬಹುದು.

ಮಿಸ್ ಮಾಡದೇ ಓದಿ: ಕೇವಲ 15 ನಿಮಿಷಗಳಲ್ಲಿ ವಯಕ್ತಿಕ ಸಾಲ, ಅರ್ಧ ಗಂಟೆಯಲ್ಲಿ ಗೃಹ ಸಾಲ, ಯಾರಿಗುಂಟು ಯಾರಿಗಿಲ್ಲ ಈ ಆಫರ್; ಇಂದೇ ಈ ಬ್ಯಾಂಕ್ ಲೋನ್ ಗೆ ಅಪ್ಲೈ ಮಾಡಿ!

ಮುಸ್ಲಿಮರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ! (Tirupati darshan to muslim devotees)

ಸದ್ಯ ಶ್ರೀವಾರಿ ಸೇವೆಗೆ ಹಿಂದುಗಳಿಗೆ ಮಾತ್ರ ಅವಕಾಶ ಇದೆ. ಇತ್ತೀಚೆಗೆ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ನಾಯ್ಡು ಪೇಟದ ಮುಸ್ಲಿಂ ಭಕ್ತ ಹುಸೇನ್ ಭಾಷಾ ಅವರು ತಮಗೆ ಶ್ರೀವಾರಿ (Tirupati darshan) ಸೇವೆಗೆ ಅವಕಾಶ ಕೊಡಬೇಕು ಎಂದು ಟಿಟಿಡಿ ಅಧಿಕಾರಿಗಳೊಂದಿಗೆ ಮನವಿ ಮಾಡಿಕೊಂಡಿದ್ದಾರೆ.

ಟಿಟಿಡಿ ನಿರ್ಧಾರ ಏನು? TTD Decision about Tirupati darshan and Srivari Seve)

ದೇವರು ಎಲ್ಲರಿಗೂ ಸಂಬಂಧ ಪಟ್ಟವನು ಅದರಲ್ಲೂ ಇತರ ಧಾರ್ಮಿಕ ಹಂತಕ್ಕೆ ಸೇರಿದವರು ತಿಮ್ಮಪ್ಪನ ಸೇವೆ ಮಾಡಲು ಸ್ವತಹ ತಾವಾಗಿಯೇ ಆಸಕ್ತಿ ತೋರಿಸುತಿರುವುದು ಸಂತೋಷದ ವಿಷಯ. ಹಾಗಾಗಿ ಮುಸ್ಲಿಂ ಭಕ್ತರಿಗೆ ಶ್ರೀವಾರಿ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಟಿಟಿಡಿ ಕಾರ್ಯ ನಿರ್ವಹಣಾ ಅಧಿಕಾರಿ ಧರ್ಮಾ ರೆಡ್ಡಿ ಅವರು ತಿಳಿಸಿದ್ದಾರೆ. ಸದ್ಯದಲ್ಲಿಯೇ ಹಿಂದುಗಳಿಗೆ ಮಾತ್ರ ಸೀಮಿತವಾಗಿರುವ ಶ್ರೀವಾರಿ ಸೇವೆ ಮುಸ್ಲಿಂ ಭಕ್ತರಿಗೂ (Tirupati darshan) ಸಿಗಲಿದೆ ಎನ್ನುವುದನ್ನು ಟಿಟಿಡಿ ಘೋಷಣೆ ಮಾಡಲಿದೆ.

Comments are closed.