Women Secret: ಈ ಕೆಲಸ ಮಾಡೋ ಹೆಣ್ಣನ್ನು ಯಾವತ್ತೂ ಕೂಡ ಗಂಡಸರು ನೋಡಲೇಬಾರದಂತೆ ಗೊತ್ತಾ?

Women Secret: ನಮಸ್ಕಾರ ಸ್ನೇಹಿತರೆ ನಮ್ಮ ಪ್ರಾಚೀನ ಕಾಲದ ಕೆಲವೊಂದು ಗ್ರಂಥಗಳು ಇವತ್ತಿಗೂ ಕೂಡ ಯಾವ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವಂತಹ ಪ್ರಸ್ತುತ ಸತ್ಯವನ್ನು ಹೇಳಿದ್ದಾವೆ. ಅವುಗಳಲ್ಲಿ ವಾತ್ಸಾಯನ ಕಾಮಸೂತ್ರ ಕೂಡ ಒಂದು. ಇದರಲ್ಲಿ ಸಂಸಾರದ ಕೆಲವೊಂದು ಗುಟ್ಟುಗಳನ್ನು ಕೂಡ ಬಿಟ್ಟುಕೊಡಲಾಗಿದ್ದು ಯಶಸ್ವಿ ಸಂಸಾರಕ್ಕೆ ಈ ಪುಸ್ತಕ ಹಾಗೂ ವಾತ್ಸಾಯನನ ನುಡಿಗಳು ನೂರಕ್ಕೆ ನೂರರಷ್ಟು ನಿಜವಾಗಿವೆ. ಅದರಲ್ಲಿ ವಿಶೇಷವಾಗಿ ಈ ಗ್ರಂಥದಲ್ಲಿ ಮಹಿಳೆಯರು ಯಾವೆಲ್ಲ ಕೆಲಸ ಮಾಡುವಾಗ ಅವರಿಗೆ ತೊಂದರೆ ಕೊಡಬಾರದು ಎನ್ನುವಂತಹ ಮಾತುಗಳನ್ನು ಕೂಡ ಉಲ್ಲೇಖಿಸಿದ್ದು ಬನ್ನಿ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯೋಣ.

1. ವಾತ್ಸಾಯನ ಹೇಳುವ ಪ್ರಕಾರ ಒಬ್ಬ ಮಹಿಳೆ ತನ್ನ ಮಗುವಿಗೆ ಎದೆಯ ಹಾಲನ್ನು ಉಣಿಸುತ್ತಿರುವಾಗ ಆಕೆಯನ್ನು ನೋಡಬಾರದು ಎಂಬುದಾಗಿ ಹೇಳಲಾಗುತ್ತದೆ. ಇದರಿಂದ ಆಕೆ ವಿಚಲಿತಳಾಗುತ್ತಾಳೆ ಹಾಗೂ ಸ್ಥನಪಾನ ಮಾಡುವ ಪ್ರಕ್ರಿಯೆ ವಿಚಲಿತಗೊಳ್ಳುತ್ತದೆ ಎಂಬುದಾಗಿ ಹೇಳಲಾಗುತ್ತದೆ.

2. ಮಹಿಳೆಯರು ಅಲಂಕಾರ ಮಾಡಿಕೊಳ್ಳುವ ಸಂದರ್ಭದಲ್ಲಿ ಆ ಪುರುಷ ಆಕೆಯ ಗಂಡನಾಗಿದ್ದರೂ ಕೂಡ ಆಕೆಯನ್ನು ನೋಡಬಾರದು ಎಂಬುದಾಗಿ ವಾತ್ಸಾಯನ ಹೇಳುತ್ತಾನೆ. ಇದರಿಂದಾಗಿ ಆಕೆಯ ಏಕಾಗ್ರತೆ ಬೇರೆ ಕಡೆಗೆ ಹೋಗುತ್ತದೆ. ಇದೇ ಕಾರಣಕ್ಕಾಗಿ ಮಹಿಳೆ ಅಲಂಕಾರ ಮಾಡಿಕೊಳ್ಳುವಾಗ ಆಕೆಯನ್ನು ನೋಡಬಾರದು ಎಂಬುದಾಗಿ ಹೇಳಲಾಗುತ್ತದೆ.

3. ವಾತ್ಸಾಯನೇ ಹೇಳುವ ಪ್ರಕಾರ ಆ ಮನೆಯ ಪುರುಷ ನಲ್ಲದೆ ಇರುವಂತಹ ಬೇರೆ ಪುರುಷ ಮಹಿಳೆ ಊಟ ಮಾಡುವ ಸಂದರ್ಭದಲ್ಲಿ ಆಕೆಯನ್ನು ನೋಡಬಾರದು ಎಂಬುದಾಗಿ ಹೇಳುತ್ತಾನೆ. ಇದರಿಂದಾಗಿ ಆಕೆಗೆ ಸರಿಯಾದ ರೀತಿಯಲ್ಲಿ ಊಟ ಮಾಡುವುದಕ್ಕೆ ಮುಜುಗರ ಉಂಟಾಗಬಹುದು ಎನ್ನುವ ಕಾರಣಕ್ಕಾಗಿ ಪರಪುರುಷರು ಬೇರೆ ಮಹಿಳೆಯರು ಊಟ ಮಾಡುವ ಸಂದರ್ಭದಲ್ಲಿ ಅವರನ್ನು ನೋಡಬಾರದು ಎಂಬುದಾಗಿ ಹೇಳಲಾಗುತ್ತದೆ.

4. ಒಂದು ವೇಳೆ ಮಹಿಳೆ ಸೀನಿದರೆ ಆ ಸಂದರ್ಭದಲ್ಲಿ ಕೂಡ ಪುರುಷ ಮಹಿಳೆಯನ್ನು ನೋಡಬಾರದು ಎಂಬುದಾಗಿ ವಾತ್ಸಾಯನ ಹೇಳುತ್ತಾರೆ. ಯಾಕೆಂದ್ರೆ ಸೀನುವ ಸಂದರ್ಭದಲ್ಲಿ ಮಹಿಳೆಯರ ವಸ್ತ್ರ ಅಸ್ತವ್ಯಸ್ತವಾಗಿರುತ್ತದೆ ಈ ಸಂದರ್ಭದಲ್ಲಿ ಪುರುಷರ ದೃಷ್ಟಿ ಅವರ ಮೇಲೆ ಬೀಳಬಾರದಾಗಿರುತ್ತದೆ.

5. ಮಹಿಳೆಯರು ತಮ್ಮ ಬಟ್ಟೆಯನ್ನು ಸಹಿ ಪಡಿಸಿಕೊಳ್ಳುವ ಸಂದರ್ಭದಲ್ಲಿ ಕೂಡ ಆಕೆಯನ್ನು ಪುರುಷರು ನೋಡಬಾರದು ಇದರಿಂದಾಗಿ ಆಕೆ ಮುಜುಗರಕ್ಕೆ ಒಳಪಡುತ್ತಾಳೆ ಎಂಬುದಾಗಿ ಪುರುಷರು ತಿಳಿದುಕೊಳ್ಳಬೇಕು ಇದಕ್ಕೆ ಮೊದಲೇ ಅವರು ಬೇರೆ ಕಡೆ ತಮ್ಮ ದೃಷ್ಟಿಯನ್ನು ಇಡಬೇಕಾಗಿರುತ್ತದೆ. ಇದು ಮಹಿಳೆಯರಿಗೆ ಒಬ್ಬ ಪುರುಷ ಕೊಡಬಹುದಾದಂತಹ ಒಂದು ಸಾಮಾನ್ಯ ಗೌರವ ಆಗಿರುತ್ತದೆ. ಇದರ ಜೊತೆಗೆ ಮಹಿಳೆಯರು ಮಸಾಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಕೂಡ ಅವರನ್ನು ನೋಡುವುದು ಪುರುಷ ಮರ್ಯಾದೆಗೆ ತಕ್ಕದಾದ ಕೆಲಸ ಅಲ್ಲ.

Comments are closed.