The Kerala Story: ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ “ದಿ ಕೇರಳ ಸ್ಟೋರಿ” ನೋಡೋದನ್ನ ಮಿಸ್ ಮಾಡಿಕೊಂಡಿದ್ರಾ? ಬಂದೇ ಬಿಡ್ತು ನೋಡಿ OTT ಗೆ; ಯಾವಾಗ ರಿಲೀಸ್ ಗೊತ್ತಾ?

The Kerala Story: ನಮಸ್ಕಾರ ಸ್ನೇಹಿತರೆ ಕಳೆದ ವರ್ಷ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ ಅವುಗಳಲ್ಲಿ ದಿ ಕೇರಳ ಸ್ಟೋರಿ (The Kerala Story) ಕೂಡ ಒಂದಾಗಿದೆ. ಈ ಸಿನಿಮಾ ಸಾಕಷ್ಟು ವಿವಾದಾತ್ಮಕ ರೂಪದಲ್ಲಿ ಭಾರತ ದೇಶದ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಸದ್ದು ಮಾಡಿತ್ತು. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿದ್ದರೂ ಕೂಡ ಕಲೆಕ್ಷನ್ ಮಾತ್ರ ನೂರಾರು ಕೋಟಿ ರೂಪಾಯಿಗಳ ಲೆಕ್ಕಾಚಾರದಲ್ಲಿ ಮಾಡಿತ್ತು.

The Kerala Story Movie release on Zee 5 OTT on February 17th. Here are the Details.

ಬಿಡುಗಡೆಯ ಸಂದರ್ಭದಲ್ಲಿ ವಿವಾದಗಳ ಕಾರಣಕ್ಕಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಕೊನೆಗೂ ಈಗ ಓ ಟಿ ಟಿ ಪ್ಲಾಟ್ಫಾರ್ಮ್ (OTT PlatForm) ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ ಎಂಬಂತಹ ಮಾಹಿತಿ ತಿಳಿದು ಬಂದಿದೆ.

 ಕೇವಲ 5 ನಿಮಿಷಗಳಲ್ಲಿ ಸಾಲ ಕೊಡುವ ಗ್ಯಾರಂಟಿ ಅಪ್ಲಿಕೇಶನ್ ಗಳು ಇವು; ಒಂದೇ ಒಂದು ಕ್ಲಿಕ್ ನಲ್ಲಿ ಅಗತ್ಯ ಇರುವಷ್ಟು ಹಣ ಪಡೆಯಬಹುದು!

Zee 5 ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಇದೇ ಫೆಬ್ರವರಿ 16 ಕ್ಕೆ ಆದಾ ಶರ್ಮ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಪ್ರಸಾರ ಕಾಣಲಿದೆ. ಆಶ್ಚರ್ಯ ಎನ್ನುವ ರೀತಿಯಲ್ಲಿ ಬಿಡುಗಡೆಯಾದ ಒಂಬತ್ತು ತಿಂಗಳ ನಂತರ ಈಗ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಇನ್ನು ಇದಕ್ಕೆ ಒಂದು ಕಾರಣ ಕೂಡ ಇದ್ದು ಸಿನಿಮಾ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಪ್ರಸಾರ ಆಗಬಾರದು ಎನ್ನುವುದಾಗಿ ತಡೆಹಿಡಿಯಲಾಗಿತ್ತು ಇದೇ ಕಾರಣಕ್ಕಾಗಿಯೇ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗುವುದಕ್ಕೆ ಇಷ್ಟೊಂದು ತಡವಾಗಿತ್ತು.

ಕೇರಳದಲ್ಲಿ ನಡೆದಿರುವಂತಹ ನಿಜವಾದ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಯ ಮೇಲೆ ತರಲಾಗಿತ್ತು. 300 ಕೋಟಿಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡಿರುವಂತಹ ಈ ಸಿನಿಮಾ ಕೇರಳದಲ್ಲಿ ನಡೆಯುವಂತಹ ಮತಾಂತರದ ಸತ್ಯ ಕಹಾನಿಯನ್ನು ಪ್ರೇಕ್ಷಕರ ಮುಂದೆ ತಂದಿತ್ತು. ಈ ಸಿನಿಮಾವನ್ನ ಮೊದಲಿಗೆ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಖರೀದಿಸಲು ಯಾವುದೇ ಕಂಪನಿಗಳು ಕೂಡ ಮುಂದೆ ಬಂದಿರಲಿಲ್ಲ ಅನ್ನೋದು ಕೂಡ ಎಲ್ಲರೂ ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ.

ಸಾಕಷ್ಟು ರಾಜ್ಯಗಳಲ್ಲಿ (The Kerala Story)  ಸಿನಿಮಾದ ಪ್ರದರ್ಶನ ಕೂಡ ಬ್ಯಾನ್ ಆಗಿತ್ತು ಆದರೆ ಪ್ರೇಕ್ಷಕರು ಮಾತ್ರ ಈ ಸಿನಿಮಾದಲ್ಲಿ ಇರುವಂತಹ ಕಂಟೆಂಟ್ ಅನ್ನು ಒಪ್ಪಿ ಮೆಚ್ಚಿ ಸಿನಿಮಾವನ್ನು ಗೆಲ್ಲಿಸುತ್ತಾರೆ. ಈಗ ಈ ಸಿನಿಮಾ ಓ ಟಿ ಟಿ ಪ್ಲಾಟ್ಫಾರ್ಮ್ ನಲ್ಲಿ ಕೂಡ ಬರಲಿದ್ದು ಇಲ್ಲಿ ಕೂಡ ಅದೇ ರೀತಿಯ ರೆಸ್ಪಾನ್ಸ್ ವ್ಯಕ್ತವಾಗುವ ಸಾಧ್ಯತೆ ಹೆಚ್ಚಾಗಿದೆ.

Comments are closed.