5 Minute Loan: ಕೇವಲ 5 ನಿಮಿಷಗಳಲ್ಲಿ ಸಾಲ ಕೊಡುವ ಗ್ಯಾರಂಟಿ ಅಪ್ಲಿಕೇಶನ್ ಗಳು ಇವು; ಒಂದೇ ಒಂದು ಕ್ಲಿಕ್ ನಲ್ಲಿ ಅಗತ್ಯ ಇರುವಷ್ಟು ಹಣ ಪಡೆಯಬಹುದು!

5 Minute Loan:  ಒಂದಲ್ಲ ಒಂದು ಕಾರಣಕ್ಕೆ ಹಣದ ಅವಶ್ಯಕತೆ ಎಲ್ಲರಿಗೂ ಇದ್ದೇ ಇರುತ್ತದೆ ಆದರೆ ನಾವು ಇಷ್ಟೊಂದು ಹಣದ ಅಗತ್ಯ ಇರುವಾಗ ಯಾರನ್ನು ಕೇಳುವುದು ಎನ್ನುವ ಪ್ರಶ್ನೆ ಮೂಡುತ್ತದೆ ಯಾಕೆಂದರೆ ಸುಲಭವಾಗಿ ಯಾರ ಬಳಿಯು ಹೋಗಿ ನಾವು ಹಣವನ್ನು ಎರವಲು ಪಡೆಯಲು ಸಾಧ್ಯವಿಲ್ಲ ಇಂದು ಐದು ನಿಮಿಷಗಳಲ್ಲಿ ಹಣ ಸಾಲ (5 Minute Loan) ಕೊಡುವುದು ಹಾಗಿರಲಿ, ಒಂದು ಲೋಟ ಸಕ್ಕರೆ ಬೇಳೆ ಕೇಳಿದರೆ ಸಿಗುವುದು ಕಷ್ಟ ಹಾಗಿದ್ದಾಗ ಇಷ್ಟು ಸುಲಭವಾಗಿ ಸಾಲ ಪಡೆದುಕೊಳ್ಳಲು ಸಾಧ್ಯ ಇದೆಯಾ? ತುರ್ತು ಪರಿಸ್ಥಿತಿಯಲ್ಲಿ ಕೇವಲ ಐದು ನಿಮಿಷಗಳಲ್ಲಿ ಒಂದೇ ಒಂದು ಕ್ಲಿಕ್ ಮೂಲಕ ಸಾಲ ಪಡೆಯಬಹುದಾ?

Do you know you can get 5 Minute Loan in mobile applications? Its easy, here are the Details.

ನಿಮ್ಮ ಈ ಎಲ್ಲಾ ಗೊಂದಲಗಳಿಗೆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇಂದು ಮೊದಲಿನಂತೆ ಬ್ಯಾಂಕ್ಗಳಿಗೆ ಹೋಗಿ ಸಾಕಷ್ಟು ಸಮಯ ವ್ಯರ್ಥ ಮಾಡಿ ದಾಖಲೆಗಳ ಮೇಲೆ ದಾಖಲೆಗಳನ್ನು ಕೊಟ್ಟು ಆಸ್ತಿ ಪತ್ರ ಅಡವಿಟ್ಟು ಸಾಲ ಪಡೆದುಕೊಳ್ಳುವ ಅಗತ್ಯವಿಲ್ಲ ಸುಲಭವಾಗಿ ಒಂದೇ ಒಂದು ಕ್ಲಿಕ್ ಮೂಲಕ ಮೊಬೈಲ್ ನಿಂದಲೇ ಸಾಲ (5 Minute Loan in mobile application) ಪಡೆಯಬಹುದು ಅದಕ್ಕಾಗಿ ಅತ್ಯುತ್ತಮವಾಗಿರುವ ಮೊಬೈಲ್ ಅಪ್ಲಿಕೇಶನ್ ಗಳು ಎಂದು ಲಭ್ಯ.

ಟಾಪ್ ಲೋನ್ ಅಪ್ಲಿಕೇಶನ್ ಗಳು ನೀಡುತ್ತವೆ 5 ನಿಮಿಷಗಳಲ್ಲಿ ಸಾಲ! (Top Loan applications will provide 5 Minute Loan)

ಇಂದು ನಾವು ಈ ಲೇಖನದಲ್ಲಿ ಟಾಪ್ ಲೋನ್ ಅಪ್ಲಿಕೇಶನ್ ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಈ ಎಲ್ಲಾ ಅಪ್ಲಿಕೇಶನ್ ಗಳು ಕೂಡ ಬಹುತೇಕ ಗ್ಯಾರಂಟಿ ಹೊಂದಿರುವ ಅಪ್ಲಿಕೇಶನ್ ಆಗಿದ್ದು, ನೀವು ಸ್ವಲ್ಪ ಮುತುವರ್ಜಿಯಿಂದ ಇಲ್ಲಿ ವ್ಯವಹಾರ ನಡೆಸಬೇಕಾಗುತ್ತದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಸಾಲ (Quick Loan) ಬೇಕಾದಾಗ ನೀವು ಅವರಿವರ ಬಳಿ ಕೈ ಚಾಚ ಬೇಕಿಲ್ಲ ಕೇವಲ ಐದು ನಿಮಿಷಗಳಲ್ಲಿ (5 Minute Loan) ಈ ಅಪ್ಲಿಕೇಶನ್ ಗಳು ನಿಮಗೆ ಬೇಕಿರುವ ಸಾಲವನ್ನು ನೀಡುತ್ತವೆ ಅದು ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೆ!

ಹೌದು, ಅಚ್ಚರಿಯಾದರೂ ಇದು ನಿಜ ನೀವು ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅಪ್ಲೋಡ್ ಮಾಡುವುದರ ಮೂಲಕ ಟಾಪ್ ಲೋನ್ ಅಪ್ಲಿಕೇಶನ್ ಗಳಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಕೇವಲ ಐದು ನಿಮಿಷಗಳಲ್ಲಿ ಸಾಲ ಒದಗಿಸುವ ಹಲವಾರು ಅಪ್ಲಿಕೇಶನ್ಗಳು ಇವೆ. ನೀವು ಒಂದು ಸಾವಿರ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳ ವರೆಗೂ ಕೂಡ ಸುಲಭವಾಗಿ ಸಾಲ ಪಡೆಯಬಹುದು.

ಐದು ನಿಮಿಷಗಳಲ್ಲಿ ಸಾಲ ಕೊಡಬಹುದಾದ ಅಪ್ಲಿಕೇಶನ್ಗಳು!

ನವಿ ಆಪ್

ಮನಿ ವ್ಯೂ

ಕ್ರೆಡಿಟ್ ಬಿ

ಕ್ಯಾಶ್ ಎ ಐ

ಜಸ್ಟ್ ಮನಿ

ಬಜಾಜ್ ಫಿನ್ ಲೋನ್

ಲೀಜಿ ಪೇ

ಈ ರೀತಿ 10 ಹಲವಾರು ಅಪ್ಲಿಕೇಶನ್ಗಳು ನಿಮಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುತ್ತವೆ.

ಐದು ನಿಮಿಷಗಳಲ್ಲಿ ಸಾಲ ನೀಡುವ ಅಪ್ಲಿಕೇಶನ್ಗಳ ಬಗ್ಗೆ ಇಲ್ಲಿದೆ ಮಾಹಿತಿ

ಕ್ರೆಡಿಟ್ ಬಿ ಅಪ್ಲಿಕೇಶನ್ –  CreditBee Application

ಇತ್ತೀಚಿಗೆ ಕ್ರೆಡಿಟ್ ಬಿ ಅಪ್ಲಿಕೇಶನ್ ಮೂಲಕ ಸಾಕಷ್ಟು ಜನ ಸಾಲ ಸೌಲಭ್ಯ ಪಡೆದುಕೊಳ್ಳುತ್ತಾರೆ. ಇಲ್ಲಿ ಜೀರೋ ಪರ್ಸೆಂಟ್ ನಿಂದ 29.95% ವರೆಗೆ ಬಡ್ಡಿ ವಿಧಿಸಲಾಗುತ್ತದೆ.

ಡಿಜಿಟಲ್ ರೂಪದಲ್ಲಿ ಅರ್ಜಿ ಸಲ್ಲಿಸಿ ಕೇವಲ ಐದು ನಿಮಿಷಗಳಲ್ಲಿ ಕ್ರೆಡಿಟ್ ಬಿ ಮೂಲಕ ಸಾಲಕ್ಕೆ ಅನುಮೋದನೆ ಸಿಗುತ್ತದೆ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕ್ರೆಡಿಟ್ ಬಿ ಅಪ್ಲಿಕೇಶನ್ ನಲ್ಲಿ ಇರುವ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ.

ಜಸ್ಟ್ ಮನಿ Zest money –

ಈ ಅಪ್ಲಿಕೇಶನ್ ಗಳಲ್ಲಿ ಕೂಡ ಕೇವಲ ಐದು ನಿಮಿಷಗಳಲ್ಲಿ 20,000ಗಳವರೆಗೂ ಸಾಲ ಪಡೆಯಬಹುದು. ಅಷ್ಟೇ ಅಲ್ಲ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಕೇವಲ ಐದು ನಿಮಿಷಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಅಪ್ಲಿಕೇಶನ್ ಮೊಬೈಲ್, ಫ್ಯಾಷನ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಾಟ ಮಾಡುವ ಈ ಕಾಮರ್ಸ್ ವೆಬ್ಸೈಟ್ (E-Commerce Website)  ನೊಂದಿಗೆ ಸಂಯೋಜಿಸಲಾಗಿದ್ದು ನೀವು ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿ ಮಾಡಲು ಈ ಅಪ್ಲಿಕೇಶನ್ ಬಳಸಿಕೊಳ್ಳಬಹುದು.

ಲೋನ್ ಟ್ಯಾಪ್ ಅಪ್ಲಿಕೇಶನ್ LoanTap –

ಸಾಲ ಪಡೆದುಕೊಳ್ಳಲು ಈ ಅಪ್ಲಿಕೇಶನ್ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿದೆ 2024ರಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಲೋನ್ ಅಪ್ಲಿಕೇಶನ್ 50 ಸಾವಿರದಿಂದ ಹತ್ತು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. ಇಲ್ಲಿ ಸಾಲ ತೆಗೆದುಕೊಂಡರೆ ವಾರ್ಷಿಕ ಬಡ್ಡಿದರ ಕೇವಲ 15%.

ಫ್ಲೆಕ್ಸ್ ಸ್ಯಾಲರಿ ಅಪ್ಲಿಕೇಶನ್ -Flexsalary application –

ಇದರಲ್ಲಿ ನೀವು ಐದು ನಿಮಿಷಗಳಲ್ಲಿ ಸಾಲ ಪಡೆದುಕೊಳ್ಳಬಹುದು ಹಾಗೂ ಅತ್ಯುತ್ತಮ ಸಾಲ ನೀಡುವ ಕಂಪನಿ ಎನಿಸಿಕೊಂಡಿದೆ. ಹೆಚ್ಚು ವಿಶ್ವಾಸಾರ್ಹ ಅಪ್ಲಿಕೇಶನ್ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಈ ಅಪ್ಲಿಕೇಶನ್ ಬಳಕೆ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ಕೂಡ ಹೇಳಿಕೊಂಡಿದ್ದಾರೆ. ಇಲ್ಲಿ ವೈಯಕ್ತಿಕ ಸಾಲ ವ್ಯಾಪಾರಕ್ಕಾಗಿ ಸಾಲ ಪ್ರಯಾಣ ಸಾಲ ಕಾರ್ಯನಿರ್ವಾಹಕ ಶಿಕ್ಷಣ ಸಾಲ ಹೀಗೆ ಬೇರೆ ಬೇರೆ ರೀತಿಯ ಸಾಲ ಸೌಲಭ್ಯ ಪಡೆಯಬಹುದು.

ಇಷ್ಟು ಕಡಿಮೆ ಸಂಬಳ ಇದ್ರೂ ಸಾಕು ಸಿಗುತ್ತೆ ಕೇವಲ 15 ನಿಮಿಷಗಳಲ್ಲಿ ತುರ್ತು ಸಾಲ; ಯಾವ ಆಧಾರವನ್ನೂ ಕೇಳೋಲ್ಲ ಈ ಬ್ಯಾಂಕ್!

ಕ್ಯಾಶ್ ಅಪ್ಲಿಕೇಶನ್ – CASHe application

ದೇಶದ ಅತಿ ದೊಡ್ಡ ಸಾಲ ನೀಡುವ ಅಪ್ಲಿಕೇಶನ್ಗಳಲ್ಲಿ ಕ್ಯಾಶ್ ಈ ಕೂಡ ಒಂದಾಗಿದ್ದು ಇದು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ಅಪ್ಲಿಕೇಶನ್ ಆಗಿದೆ. ಇಲ್ಲಿ ನೀವು ತ್ವರಿತ ಸಾಲ ಅಥವಾ ವೈಯಕ್ತಿಕ ಸಾಲ ಹಾಗೂ ವ್ಯಾಪಾರ ಸಾಲವನ್ನು ಪಡೆದುಕೊಳ್ಳಬಹುದು. ಕ್ಯಾಶ್ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಂಡು ಮದುವೆ ಗ್ಯಾಜೆಟ್ ಖರೀದಿ ವೈದ್ಯಕೀಯ ತುರ್ತು ಪರಿಸ್ಥಿತಿ ಮೊದಲಾದವುಗಳಿಗೆ ಬಳಕೆ ಮಾಡಿಕೊಳ್ಳಬಹುದು. 18 ರಿಂದ 58 ವರ್ಷ ವಯಸ್ಸಿನವರೆಗೆ ಸಾಲ ಪಡೆದುಕೊಳ್ಳಲು ಸಾಧ್ಯವಿದೆ ಇದಕ್ಕೆ ಬೇಕಾಗಿರುವ ಒಂದೇ ಒಂದು ಅರ್ಹತೆ ಅಂದ್ರೆ ನಿಮ್ಮ ಮಾಸಿಕ ವೇತನ 12,000 ಗಳಿಗಿಂತ ಹೆಚ್ಚಿರಬೇಕು.

ಐದು ನಿಮಿಷಗಳಲ್ಲಿ ಸಾಲ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! Eligibility’s to get 5 Minute Loan

  • ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
  • 18 ರಿಂದ 59 ವರ್ಷದ ನಡುವಿನವರು ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
  • ಸಿಬಿಲ್ ಸ್ಕೋರ್ ಉತ್ತಮ ವಾಗಿರಬೇಕು
  • ಉದ್ಯೋಗ ಮಾಡುವವರು ಹಾಗೂ ಸ್ವಂತ ಉದ್ಯಮ ಮಾಡುತ್ತಿರುವವರು ಸಾಲ ಪಡೆಯಬಹುದು

ಐದು ನಿಮಿಷಗಳಲ್ಲಿ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು! Needed Documents to get 5 Minute Loan

  • ವಿಳಾಸ ಪುರಾವೆ
  • ಪಾಸ್ಪೋರ್ಟ್
  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಸ್ಯಾಲರಿ ಸ್ಲಿಪ್

ಇಂಥ 5 ನಿಮಿಷಗಳಲ್ಲಿ ಸಾಲ 5 Minute Loan ಕೊಡುವ ಅಪ್ಲಿಕೇಶನ್ಗಳನ್ನು ಬಳಕೆ ಮಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು ಯಾಕೆಂದರೆ ಸಾಕಷ್ಟು ನಕಲಿ ಅಪ್ಲಿಕೇಶನ್ ಗಳು ಕೂಡ ಇದ್ದು ಅವುಗಳಲ್ಲಿ ನೀವು ಸಾಲ ತೆಗೆದುಕೊಂಡರೆ ಮುಂದೆ ಸಾಕಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತದೆ.

Comments are closed.