Quick Money: ಕ್ರೆಡಿಟ್ ಸ್ಕೋರ್ ಕರಾಬಾಗಿದ್ರೂ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ; ಇದು ಪಕ್ಕಾ ’ಎಕ್ಸಪ್ರೆಸ್” ಕಣ್ರೀ!

Quick Money: ಇಂದಿನ ವೇಗದ ಯುಗದಲ್ಲಿ ಎಷ್ಟೇ ದುಡಿದರೂ ಸಾಕಾಗುತ್ತಿಲ್ಲ. ಬರುವ ಹಣವೆಲ್ಲ ಕುಟುಂಬ ನಿರ್ವಹಣೆಗೆ ಸಾಕಾಗಿ ಬಿಡುತ್ತದೆ. ಏನಾದರೂ ಹಣದ ತುರ್ತು (Quick Money) ಉಂಟಾದಲ್ಲಿ ಸ್ನೇಹಿತರು ಸಹಾಯ ಮಾಡಿದರೆ ಸರಿ. ಇಲ್ಲದಿದ್ದರೆ ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲಿ ಸಾಲ ಮಂಜೂರಿಯಾಗಲು ಕನಿಷ್ಟ ಎಂದರೂ ಒಂದು ವಾರವಾದರೂ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಸಹಾಯಕ್ಕೆ ಬರುವುದು ಎಕ್ಸಪ್ರೆಸ್ ಲೋನ್. ಹಾಗಾದರೆ ಎಕ್ಸಪ್ರೆಸ್ ಲೋನ್ ಪಡೆದುಕೊಳ್ಳಲು ಯಾರ್ಯಾರು ಅರ್ಹರು?? ಯಾವೆಲ್ಲ ದಾಖಲಾತಿ ಒದಗಿಸಬೇಕು, ಎಷ್ಟು ಬಡ್ಡಿಯಲ್ಲಿ ನೀಡುತ್ತಾರೆ ಈ ಎಲ್ಲ ವಿಚಾರಗಳ ಕುರಿತು ಈಗ ತಿಳಿದುಕೊಳ್ಳೋಣ.

Quick Money by Express company, get easy loan within Minutes. Here are the Details.

ಎಕ್ಸಪ್ರೆಸ್ ಲೋನ್: (Quick Money by Express)

ಎಕ್ಸಪ್ರೆಸ್ ಲೋನ್ (Express Loan) ಒಂದು ಆನ್ಲೈನ್ ಮೂಲಕ ಸಾಲ (Online Quick Money)  ನೀಡುವ ಸಂಸ್ಥೆಯಾಗಿದೆ. ನೀವು ಯಾವುದೇ ಸಂದರ್ಭದಲ್ಲಿ ಕೂಡ ಎಕ್ಸಪ್ರೆಸ್ ಲೋನ್ ಸಂಸ್ಥೆಯ ಮೂಲಕ ಸಾಲ ಪಡೆದುಕೊಳ್ಳಬಹುದಾಗಿದೆ. ಅದು ತಿಂಗಳ ಆರಂಭವೇ ಇರಲಿ, ಮಧ್ಯಂತರವೇ ಇರಲಿ, ಕೊನೆಯ ದಿನಗಳೇ ಇರಲಿ. ಹೀಗೆ ಯಾವಾಗ ನಿಮಗೆ ಹಣದ ಅವಶ್ಯಕತೆ ಇರುತ್ತದೋ ಆಗ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು. ಎಕ್ಸಪ್ರೆಸ್ ಲೋನ್ ಸಂಸ್ಥೆಯು ಕೇವಲ ವೈಯಕ್ತಿಕ ಸಾಲಗಳನ್ನು ಮಾತ್ರ ನೀಡುತ್ತದೆ. ವೈಯಕ್ತಿಕ ಸಾಲವು ಅಸುರಕ್ಷಿತ ಸಾಲವಾಗಿರುವುದರಿಂದ ಹೆಚ್ಚಿನ ದಾಖಲಾತಿ ಒದಗಿಸುವ ಅವಶ್ಯಕತೆ ಇರುವುದಿಲ್ಲ.

ಇದು ಗೊತ್ತಾ ನಿಮಗೆ? ಕಡಿಮೆ ಸಂಬಳ ಇದ್ರೂ ಸಾಕು ಸಿಗುತ್ತೆ ಕೇವಲ 15 ನಿಮಿಷಗಳಲ್ಲಿ ತುರ್ತು ಸಾಲ; ಯಾವ ಆಧಾರವನ್ನೂ ಕೇಳೋಲ್ಲ ಈ ಬ್ಯಾಂಕ್!

ಎಕ್ಸಪ್ರೆಸ್ ಲೋನ್ನಲ್ಲಿ ನೋಂದಣಿ ಪ್ರಕ್ರಿಯೆಯಿಂದ ಹಿಡಿದು ಸಾಲ ಪಡೆದ ಹಣ ನಿಮ್ಮ ಖಾತೆಗೆ ಜಮಾ ಆಗುವ ತನಕ ಎಲ್ಲ ಕೆಲಸಗಳ ಬಹಳ ಸರಳವಾಗಿದೆ. ಅಲ್ಲದೆ ನೀವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದಲ್ಲಿ ನಿಮಗೆ ಹೆಚ್ಚಿನ ಪ್ರಮಾಣದ ಸಾಲವನ್ನೂ ಸಹ ನೀಡಲಾಗುತ್ತದೆ.

ಎಕ್ಸಪ್ರೆಸ್ ತುರ್ತು ಸಾಲದ ವೈಶಿಷ್ಟ್ಯಗಳು: (express Quick Money Informations)

ಸುಲಭವಾಗಿ ನೀಡಲಾಗುತ್ತದೆ ಸಾಲ: (Quick Money)

ನಿಮಗೆ ಹಣದ ತುರ್ತು ಉಂಟಾದಾಗ ಎಕ್ಸಪ್ರೆಸ್ ಲೋನ್ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬೇಕು. ಈ ವೇಳೆ ಏನಾದರೂ ನಿಮಗೆ ಗೊಂದಲ ಉಂಟಾದಲ್ಲಿ ಅಥವಾ ತೊಂದರೆ ಆದಲ್ಲಿ ಅಲ್ಲಿ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಎಕ್ಸಪ್ರೆಸ್ ಲೋನ್ ಸಂಸ್ಥೆಯ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ನಿಮ್ಮ ಅರ್ಜಿ ಭರ್ತಿ ಮಾಡಿಸಿ ಸಾಲ ಮಂಜೂರಿ ಮಾಡಿಸಿಕೊಡುತ್ತಾರೆ.

ತ್ವರಿತ ಅನುಮೋದನೆ: (Quick approval)

ನೀವು ಸಾಲ ಪಡೆಯುವ ವೇಳೆ ಸಾಲ ಪಡೆಯಲು ಬೇಕಾದ ಎಲ್ಲ ದಾಖಲೆಗಳನ್ನು ಒದಗಿಸಬೇಕು. ಹಾಗೂ ಸಾಲ ಪಡೆಯುವ ಎಲ್ಲ ಅರ್ಹತೆಗಳು ನಿಮಗೆ ಇದ್ದಲ್ಲಿ ನಿಮಗೆ ಕೂಡಲೇ ಸಾಲವನ್ನು ಮಂಜೂರಿ ಮಾಡಲಾಗುತ್ತದೆ.

ತ್ವರಿತ ಟಾಪ್ಅಪ್: (Quick Topup)

ನೀವು ಮೊದಲು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತೊಮ್ಮೆ ಸಾಲ ಪಡೆಯುವ ವೇಳೆ ಅದಕ್ಕೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಮತ್ತು ಕಡಿಮೆ ಪ್ರಮಾಣದ ಸಂಸ್ಕರಣಾ ಶುಲ್ಕ ವಿಧಿಸಲಾಗುತ್ತದೆ.

ಸಾಲ ಪಡೆಯಲು ಬೇಕಾದ ಅರ್ಹತೆಗಳು: (Eligibilities to get Quick Money)

 • ಭಾರತೀಯ ಪ್ರಜೆ ಆಗಿರಬೇಕು
 • ಸರ್ಕಾರಿ ಕಚೇರಿ, ವ್ಯಾಪಾರ, ಸ್ವ-ಉದ್ಯೋಗ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುವವರಿಗೆ ಸಾಲ ನೀಡಲಾಗುತ್ತದೆ.
 • 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಾಲ ನೀಡಲಾಗುತ್ತದೆ.
 • ಉಳಿತಾಯ ಬ್ಯಾಂಕ್ ಖಾತೆದಾರರಾಗಿರಬೇಕು
 • ಎಲ್ಲಕ್ಕಿಂತ ಮುಖ್ಯವಾಗಿ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು.

ಸಾಲ ಪಡೆಯಲು ಬೇಕಾದ ದಾಖಲಾತಿಗಳು: (Documents to get Quick Money)

 • ಸಂಪೂರ್ಣವಾಗಿ ತುಂಬಿದ ಸಾಲದ ಅರ್ಜಿ
 • ಭಾರತೀಯ ಪ್ರಜೆ ಆಗಿರಬೇಕು
 • ಪಾನ್ ಕಾರ್ಡ್ ಕಾಪಿ ನೀಡಬೇಕು.
 • ವಿಳಾಸದ ಪುರಾವೆಗಳಾದ ಡ್ರೈವಿಂಗ್ ಲೈಸೆನ್ಸ್, ಓಟರ್ ಐಡಿ, ಯುಟಿಲಿಟಿ ಬಿಲ್ಗಳನ್ನು ಒದಗಿಸಬೇಕು
 • ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಒದಗಿಸಬೇಕು
 • ಕಳೆದ ಆರು ತಿಂಗಳ ಸಂಬಳದ ಚೀಟಿ ನೀಡಬೇಕು.

ಯಾವ ಯಾವ ಕೆಲಸಗಳಿಗೆ ನೀಡಲಾಗುತ್ತದೆ ಸಾಲ:

ಕ್ರೆಡಿಟ್ ಬಿಲ್ ಪಾವತಿ ಮಾಡಲು ನೀವು ಎಕ್ಸಪ್ರೆಸ್ ಲೋನ್ ಸಂಸ್ಥೆಯ ಮೂಲಕ ಸಾಲ ಪಡೆದುಕೊಳ್ಳಬಹುದು.

ಮನೆ ನವೀಕರಣ ಮಾಡುವ ಸಲುವಾಗಿ ನೀವು ಸಾಲ ಪಡೆದುಕೊಳ್ಳಬಹುದು.

ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾದ ವೇಳೆ ನಿಮಗೆ ತುರ್ತು ಹಣದ ಅವಶ್ಯಕತೆ ಇರುತ್ತದೆ. ಈ ವೇಳೆ ಎಕ್ಸಪ್ರೆಸ್ ಲೋನ್ ನಿಮ್ಮ ಸಹಾಯಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ನಿಮಗೆ ಕೆಲವೇ ಗಂಟೆಗಳಲ್ಲಿ ಸಾಲ ಮಂಜೂರಿ ಮಾಡಲಾಗುತ್ತದೆ.

ಎಕ್ಸಪ್ರೆಸ್ ಲೋನ್ (Express Loan) ಸಂಸ್ಥೆಯಲ್ಲಿ ನಿಮಗೆ 5,000 ರೂ.ನಿಂದ 2 ಲಕ್ಷ ರೂ.ಗಳ ವರೆಗೆ ವೈಯಕ್ತಿಕ ಸಾಲ ನೀಡಲಾಗುತ್ತದೆ. ಸಾಲ (Quick Money)  ಪಡೆಯುವ ವೇಳೆ ಸಾಲದ ಮೊತ್ತದ ಶೇ.2 ರಷ್ಟನ್ನು ಸಂಸ್ಕರಣಾ ಶುಲ್ಕವಾಗಿ ಪಡೆದುಕೊಳ್ಳಲಾಗುತ್ತದೆ. ಸಾಲ ಮರುಪಾವತಿ ಮಾಡಲು ಮೂರು ತಿಂಗಳಿನಿಂದ ಒಂದು ವರ್ಷದ ವರೆಗೆ ಸಮಯಾವಕಾಶ ನೀಡಲಾಗುತ್ತದೆ.

Comments are closed.