Home Loan Interest Rate: ಕಟ್ಟಿಕೊಳ್ಳಿ ಸ್ವಂತ ಮನೆ; ಈ ಬ್ಯಾಂಕ್ಗಳಲ್ಲಿ ನಿಮಗೆ ಸಿಗುತ್ತೆ ಕಡಿಮೆ ಬಡ್ಡಿಯಲ್ಲಿ ಸಾಲ; ಆಫರ್ ಮಿಸ್ ಮಾಡಿದ್ರೆ ಮತ್ತೆ ಸಿಗಲ್ಲ!

Home Loan Interest Rate: ಸ್ವಂತ ಮನೆ ನಿರ್ಮಾಣ ಪ್ರತಿಯೊಬ್ಬರ ಕನಸಾಗಿರುತ್ತದೆ. ಬಡವನೆ ಇರಲಿ, ಶ್ರೀಮಂತ ವ್ಯಕ್ತಿಯೇ ಇರಲಿ. ಮೊದಲು ಸ್ವಂತ ಮನೆ ಹೊಂದುವುದನ್ನು ನೋಡುತ್ತಾರೆ. ಬಡವರು, ಮಧ್ಯಮ ವರ್ಗದವರಿಗೆ ಮನೆ ಕಟ್ಟುವ ವೇಳೆ ಮೊದಲು ಉಂಟಾಗುವುದೇ ಹಣದ ಸಮಸ್ಯೆ. ಈಗಂತೂ ಎಲ್ಲ ಸಾಮಗ್ರಿಗಳ ದರಗಳು ಏರಿದ್ದು, ಮೊದಲು ಮನೆ ನಿರ್ಮಾಣ ಮಾಡಲು ಬೇಕಾದ ಸುಮಾರು ಎರಡು ಪಟ್ಟು ಹಣ ಹೊಂದಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಸಾಲ ಮಾಡುವ ವೇಳೆ ಯಾವ  ಬ್ಯಾಂಕ್ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ (Home Loan Interest Rate) ನೀಡುತ್ತಾರೋ ಆ ಬ್ಯಾಂಕ್ನಲ್ಲಿ ಸಾಲ ಪಡೆಯುವುದು ಬುದ್ದಿವಂತಿಕೆ. ಹಾಗಾದರೆ ಯಾವ ಯಾವ ಬ್ಯಾಂಕ್ನಲ್ಲಿ ಗೃಹ ಸಾಲದ ಬಡ್ಡಿದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

These Home Loan Interest Rate are less, get it soon for make your dreams true.

ಎಚ್ಡಿಎಫ್ಸಿ ಬ್ಯಾಂಕ್: HDFC Bank Home Loan Interest Rate

ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಗೃಹ ಸಾಲ ನೀಡಲಾಗುತ್ತದೆ. ಅರ್ಹ ಸಾಲಗಾರರಿಗೆ ವಾರ್ಷಿಕ ಶೇ.8.45ರ ಬಡ್ಡಿದರದಿಂದ ಸಾಲ ನೀಡುವುದು ಆರಂಭವಾಗುತ್ತದೆ. ಸಾಲ ಮರುಪಾವತಿಗೆ 3೦ ವರ್ಷಗಳ ವರೆಗೆ ಗಡುವು ನೀಡಲಾಗುತ್ತದೆ. ಸಾಲದ ಮೇಲಿನ ಸಂಸ್ಕರಣಾ ಶುಲ್ಕ 3 ಸಾವಿರ ರೂ.ನಿಂದ  5 ಸಾವಿರ ರೂ. ವರೆಗೆ ಆಗಲಿದೆ.

ಕ್ರೆಡಿಟ್ ಸ್ಕೋರ್ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕೇ ಹೋಗ್ಬೇಡಿ, ಸ್ಕೋರ್ ಕರಾಬಾಗಿದ್ರೂ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ; ಇದು ಪಕ್ಕಾ ’ಎಕ್ಸಪ್ರೆಸ್” ಕಣ್ರೀ!

ಕೋಟಕ್ ಮಹೇಂದ್ರ ಬ್ಯಾಂಕ್: Kotak Mahindra Bank Home Loan Interest Rate

ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರವು ವಾರ್ಷಿಕವಾಗಿ ಶೇ.8.85 ರಿಂದ ಆರಂಭಗೊಳ್ಳುತ್ತದೆ. ಸ್ವ-ಉದ್ಯೋಗ ಮಾಡುತ್ತಿರುವುವವರಿಗೆ ಶೇ.8.9೦ ರಿಂದ ಆರಂಭಗೊಳ್ಳುತ್ತದೆ. ಗೃಹ ಸಾಲದ ಬ್ಯಾಲೆನ್ಸ್ ವರ್ಗಾವಣೆಯ ಸಂದರ್ಭದಲ್ಲಿ  ಆಸ್ತಿ ಮೌಲ್ಯದ ಶೇ.9೦ರಷ್ಟು ಸಾಲವಾಗಿ ಪಡೆದುಕೊಳ್ಳಬಹುದು. ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಗೃಹ ಸಾಲ ಮರುಪಾವತಿಗೆ 2೦ ವರ್ಷಗಳ ವರೆಗೆ ಕಾಲಾವಕಾಶ ನೀಡಲಾಗುತ್ತದೆ.

ಸಿಟಿ ಬ್ಯಾಂಕ್ : City Bank Home Loan Interest Rate

ಸಿಟಿ ಬ್ಯಾಂಕ್ನಲ್ಲಿ ನೀಡಲಾಗುವ ಗೃಹ ಸಾಲಕ್ಕೆ ವಾರ್ಷಿಕವಾಗಿ ಶೇ.8.45 ರಿಂದ ಪ್ರಾರಂಭವಾಗುತ್ತದೆ. ಸಿಟಿ ಬ್ಯಾಂಕ್ನಲ್ಲಿ ಗೃಹ ಸಾಲವನ್ನು 1೦ ಕೋಟಿ ರೂ.ಗಳ ವರೆಗೂ ನೀಡಲಾಗುತ್ತದೆ. ಸಾಲ ಮರುಪಾವತಿಗೆ 25 ವರ್ಷಗಳ ವರೆಗೆ ಗಡುವು ನೀಡಲಾಗುತ್ತದೆ. ಸಿಟಿ ಬ್ಯಾಂಕ್ ಹೋಂ ಫೈನಾನ್ಸ್ನಿಂದ ನೀವು ನಿಮ್ಮ ಆಸ್ತಿ ಮೊತ್ತದ ಶೇ.8೦ ರಷ್ಟು ಸಾಲವಾಗಿ ಪಡೆದುಕೊಳ್ಳಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: SBI Home Loan Interest Rate

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀಡಲಾಗುವ ಗೃಹ ಸಾಲಕ್ಕೆ ವಾರ್ಷಿಕವಾಗಿ ಶೇ. 9.15 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಸಾಲ ಮರು ಪಾವತಿ ಮಾಡಲು 3೦ ವರ್ಷಗಳ ಸಮಯ ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲದ ಸಂಸ್ಕರಣಾ ಶುಲ್ಕವು ಸಾಲದ ಮೊತ್ತದ ಶೇ.೦.35 ರಷ್ಟು ಇರುತ್ತದೆ. ಎಸ್ಬಿಐನಲ್ಲಿ ಮಹಿಳೆಯರು ಗೃಹ ಸಾಲದ ಮೇಲೆ ಶೇ.೦.೦5 ರಷ್ಟು ರಿಯಾಯತಿ ಕೂಡ ಪಡೆದುಕೊಳ್ಳಬಹುದು. ಈ ಬ್ಯಾಂಕ್ನಲ್ಲಿ ಸಾಲದ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ.

ಯೂನಿಯನ್ ಬ್ಯಾಂಕ್: Union Bank Home Loan Interest Rate

ಯೂನಿಯನ್ ಬ್ಯಾಂಕ್ನಲ್ಲಿ ನೀಡಲಾಗುವ ಹೋಂ ಲೋನ್ಗೆ ಬಡ್ಡಿದರವು ವಾರ್ಷಿಕವಾಗಿ ಶೇ. 8.7೦ ರಿಂದ ಪ್ರಾರಂಭವಾಗುತ್ತದೆ. ಈ ಬ್ಯಾಂಕ್ನ ವಿಶೇಷತೆ ಏನೆಂದರೆ ನೀವು ಸಾಲವನ್ನು ಫೋರ್ ಕ್ಲೋಸ್ ಮಾಡಲು ಮುಂದಾದಲ್ಲಿ ನೀವು ಯಾವುದೇ ಪೂರ್ವ ಪಾವತಿ ದಂಡ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಈ ಬ್ಯಾಂಕ್ನಲ್ಲಿ ನೀವು ಪಡೆಯುವ ಹೋಂ ಲೋನ್ಗೆ ಸಾಲದ ಮೊತ್ತದ ಶೇ. ೦.5 ರಷ್ಟು ಸಂಸ್ಕರಣಾ ಶುಲ್ಕ ವಿಧಿಸಲಾಗುತ್ತದೆ.

ಹೀಗೆ ಮನೆ ನಿರ್ಮಾಣ ಮಾಡುವ ಪ್ರತಿಯೊಬ್ಬರೂ ಯಾವ ಬ್ಯಾಂಕ್ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ (Home Loan Interest Rate) ನೀಡಲಾಗುತ್ತದೆ. ಯಾವ ಬ್ಯಾಂಕ್ನಲ್ಲಿ ಹೆಚ್ಚಿನ ಸಮಯಾವಕಾಶ ಸಾಲ ಮರುಪಾವತಿಗೆ ನೀಡುತ್ತಾರೆ ಎಂದು ತಿಳಿದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ.

Comments are closed.