Get 10 lakh Loan: ಸ್ವಂತ ಉದ್ಯಮ ಮಾಡುವ ಯೋಚನೆ ನೀವು ಮಾಡಿ ಸಾಕು, ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ!  ಇಷ್ಟೇ ದಾಖಲೆ ಕೊಟ್ರೆ ಸಾಕು!

Get 10 lakh Loan: ಪ್ರತಿಯೊಬ್ಬರು ಸ್ವಂತ ಉದ್ಯೋಗ ಆರಂಭಿಸುವ ಆಸೆಯಲ್ಲಿರುತ್ತಾರೆ. ಕೆಲವೊಬ್ಬರಿಗೆ ಆರ್ಥಿಕವಾಗಿ ಸಬಲರಾಗಿದ್ದವರು ಅದನ್ನು ಕೂಡಲೇ ಕಾರ್ಯಗತ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಸಮಸ್ಯೆಯಲ್ಲಿದ್ದವರು ಮಾತ್ರ ಚಿಂತಿತರಾಗುತ್ತಾರೆ. ಆದರೆ ಅವರು ಚಿಂತೆ ಮಾಡುವ ಅಗತ್ಯವಿಲ್ಲ. ನೀವು ಯಾವುದಾದರೂ ಸ್ವಂತ ಉದ್ಯೋಗ ಇಲ್ಲವೆ ಯಾವುದಾದರೂ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 1೦ ಲಕ್ಷ ರೂ.ಗಳ ವರೆಗೆ ಸಾಲ (Get 10 lakh Loan) ನೀಡುತ್ತದೆ. ಅದು ಅತ್ಯಂತ ಕಡಿಮೆ ಬಡ್ಡಿದರದಲ್ಲಿ. ಹಾಗಾದರೆ ನೀವು ಸಹ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಯಾವ ಯಾವ ದಾಖಲಾತಿಗಳನ್ನು ಒದಗಿಸಬೇಕು? ಎಷ್ಟು ಹಂತಗಳಿವೆ ಈ ಎಲ್ಲ ವಿಚಾರಗಳ ಮಾಹಿತಿ ಇಲ್ಲಿದೆ.

Get 10 lakh Loan from Pradhanamantri Mudra Scheme, How to get it, here are the details.

ಸ್ವಂತ ಉದ್ಯೋಗ ಆರಂಭಿಸುವವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಸಲುವಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆ (PM Mudra Scheme) ಜಾರಿಗೆ ತರಲಾಗಿದೆ. ಈ ಯೋಜನೆ 2015 ರಲ್ಲಿ ಜಾರಿಗೆ ಬಂದಿದೆ. ಈ ಯೋಜನೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೂ ಸಹ ಸಾಲ ನೀಡಲಾಗುತ್ತದೆ.

ಕ್ರೆಡಿಟ್ ಸ್ಕೋರ್ ಕರಾಬಾಗಿದ್ರೂ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ; ಇದು ಪಕ್ಕಾ ’ಎಕ್ಸಪ್ರೆಸ್” ಕಣ್ರೀ!

ಮೊದಲನೆಯದಾಗಿ ಶಿಶು ಮುದ್ರಾ ಸಾಲ ಯೋಜನೆ: (ShiShu Mudra Loan for 50k)

ಶಿಶು ಮುದ್ರಾ ಸಾಲ ಯೋಜನೆ ಅಡಿಯಲ್ಲಿ 5೦ ಸಾವಿರ ರೂ. ಗಳ ವರೆಗೆ ನಿಮಗೆ ಸಾಲ ನೀಡಲಾಗುತ್ತದೆ. ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರ ಆರಂಭಿಸುವವರಿಗೆ ಇದು ಬಹಳ ಅನುಕೂಲಕರವಾಗಿದೆ.

ಕಿಶೋರ ಮುದ್ರಾ ಸಾಲ ಯೋಜನೆ: (Kishora Mudra Loan for 5 lakhs)

ಕಿಶೋರ ಮುದ್ರಾ ಸಾಲ ಯೋಜನೆ ಅಡಿಯಲ್ಲಿ  5 ಲಕ್ಷ ರೂ.ಗಳ ವರೆಗೆ ಸಾಲ ನೀಡಲಾಗುತ್ತದೆ. ನೀವೇನಾದರೂ ಗ್ರಾಮೀಣ ಹಾಗು ಸಣ್ಣ ಸಣ್ಣ ಪಟ್ಟಣದಲ್ಲಿ ಕಿರಾಣಿ ಅಂಗಡಿ, ಐಸ್ ಕ್ರೀಂ ಪಾರ್ಲರ್, ಮೇಕಪ್ ಪಾರ್ಲರ್ ಸೇರಿದಂತೆ ಮಧ್ಯಮ ಪ್ರಮಾಣದ ವ್ಯಾಪಾರ ವ್ಯವಹಾರ ಆರಂಭಿಸಲು ಇದು ಸಹಕಾರಿಯಾಗಿದೆ.

ಮೂರನೇಯದಾಗಿ ತರುಣ್ ಮುದ್ರಾ ಸಾಲ ಯೋಜನೆ: (Tarun Loan for  10 lakh )

ತರುಣ್ ಮುದ್ರಾ ಸಾಲ ಯೋಜನೆ ಅಡಿಯಲ್ಲಿ 1೦ ಲಕ್ಷ ರೂ.ಗಳ (Get 10 lakh Loan) ವರೆಗೆ ನಿಮಗೆ ಸಾಲ ನೀಡಲಾಗುತ್ತದೆ.

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: (Documents needed to Get 10 lakh Loan)

  • ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಬಯಸುವ ವ್ಯಕ್ತಿಯು 24 ರಿಂದ 7೦ ವರ್ಷದ ಒಳಗಿನವರಾಗಿರಬೇಕು.
  • ಭಾರತೀಯ ಪ್ರಜೆ ಆಗಿರಬೇಕು.
  • ಅರ್ಜಿಯ ಜೊತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ದೃಢೀಕರಣ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.

ಸಾಲ ಪಡೆದುಕೊಳ್ಳುವ ವಿಧಾನ: (How to Get 10 lakh Loan)

  • ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಬಯಸಿದರೆ ಮೊದಲು ನೀವು ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಬೇಕು.
  • ಬ್ಯಾಂಕ್ ಮ್ಯಾನೇಜರ್ಗೆ ನೀವು ಯಾವ ಉದ್ಯೋಗ ಮಾಡುತ್ತೀರಿ ಎನ್ನುವ ವಿವರ ನೀಡಬೇಕು. ಜೊತೆಗೆ ಅದರ ಮಾದರಿಯನ್ನು ನೀಡಬೇಕಾಗುತ್ತದೆ.
  • ನೀವು ಯಾವ ವ್ಯವಹಾರ ಅಥವಾ ಉದ್ಯೋಗ ಮಾಡಲು ಬಯಸುತ್ತೀರಿ ಎನ್ನುವ ಮೂಲ ಆಧಾರದ ಮೇಲೆ 1೦ ಲಕ್ಷ ರೂ.ಗಳ ವರೆಗೆ ಸಾಲ ನೀಡಲಾಗುತ್ತದೆ.
  • ನೀವು ಆರಂಭಿಸುವ ಉದ್ಯೋಗ ಇಲ್ಲವೇ ವ್ಯವಹಾರಕ್ಕೆ ಶೇ.25 ರಷ್ಟನ್ನು ಕರ್ಚು ಮಾಡಿದರೆ ಇನ್ನುಳಿದ ಶೇ.75 ರಷ್ಟನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ.
  • ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಹಳ ಸಹಕಾರಿಯಾಗಿದೆ.

ಈ ರೀತಿ ಸುಲಭವಾಗಿ ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ 10 ಲಕ್ಷ (Get 10 lakh Loan)  ರೂ. ಗಳವರೆಗೆ ಸ್ವಂತ ಉದ್ಯಮಕ್ಕೆ ಸಾಲ ಪಡೆಯಬಹುದು.

Comments are closed.