Bharat rice online:  ಸಾರ್ವಜನಿಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರದ; ಖರೀದಿಸಿ ಕೇವಲ 29 ರೂ.ಗೆ ಕೆ.ಜಿ. ಅಕ್ಕಿ!

Bharat rice online: ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ (Govt of India) ಪ್ರತಿಬಾರಿಯೂ ಕೂಡ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಸಹಾಯ ಆಗುವ ರೀತಿಯಲ್ಲಿ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇನ್ನು ಈಗ ದಿನನಿತ್ಯದ ಆಹಾರ ಸೇವನೆಗಾಗಿ ಬೇಕಾಗಿರುವಂತಹ ಅಕ್ಕಿಯಲ್ಲಿ ಕೂಡ ಸಬ್ಸಿಡಿ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಅಕ್ಕಿ ಬೆಲೆಯಲ್ಲಿ ನಿರಳತೆಯನ್ನು ನೀಡಲು ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಮಾರುಕಟ್ಟೆಗೆ ಭಾರತ್ ಅಕ್ಕಿ (Bharat rice online) ಯೆನ್ನುವ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

Bharat rice online

ಮಾರುಕಟ್ಟೆಯಲ್ಲಿ ಈ ಅಕ್ಕಿಯನ್ನು ಕೇವಲ ಕೆಜಿಗೆ 29 ರೂಪಾಯಿ ಸಬ್ಸಿಡಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಲೆ ಸ್ಥಿರಿಕರಣ ಯೋಜನೆ ಅಡಿಯಲ್ಲಿ ಈ ರೀತಿಯ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ನೀಡುವಂತಹ ಯೋಜನೆಯನ್ನು ಪರಿಚಯಿಸಲಾಗಿದೆ ಎಂಬುದಾಗಿ ಆಹಾರ ಹಾಗೂ ನಾಗರಿಕ ವ್ಯವಹಾರ ಸಚಿವ ಆಗಿರುವಂತಹ ಪಿಯೂಷ್ ಗೋಯಲ್ (Piyush Goyal) ಅವರು ಹೇಳಿಕೊಂಡಿದ್ದಾರೆ.

5 ಕೆಜಿ ಮತ್ತು 10 ಕೆಜಿ ಪ್ಯಾಕುಗಳಲ್ಲಿ ಈಗಾಗಲೇ ಈ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇದೇ ರೀತಿಯ ಕೇಂದ್ರ ಸರ್ಕಾರದ ಪ್ರಯತ್ನಗಳು ಟೊಮ್ಯಾಟೊ ಹಾಗೂ ಈರುಳ್ಳಿ ಬೆಳೆಯನ್ನು ಕಡಿಮೆ ಮಾಡುವುದಕ್ಕೆ ಕೂಡ ಸಹಾಯಕವಾಗಿದ್ದು, ಭಾರತ್ ಆಟ್ಟಾ ಅಂದ್ರೆ ಹಿಟ್ಟನ್ನು ಕೂಡ ಇದೆ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಜಾರಿಗೆ ತಂದ ಮೇಲೆ ಅಲ್ಲಿಯೂ ಕೂಡ ಗಮನಾರ್ಹ ಬೆಳವಣಿಗೆ ಕಂಡು ಬಂದಿದೆ. ಮಂತ್ರಿಗಳು ಈ ವಿಚಾರದ ಬಗ್ಗೆ ಮಾತನಾಡುತ್ತಾ ಜನಸಾಮಾನ್ಯರಿಗೆ ದಿನನಿತ್ಯದ ಆಹಾರ ವಸ್ತುಗಳನ್ನು ಉತ್ತಮ ಹಾಗೂ ಕಡಿಮೆ ಬೆಲೆಯಲ್ಲಿ ನೀಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ಈಗಾಗಲೇ ಭಾರತ್ ಬ್ರಾಂಡ್  (Bharat rice online) ನಲ್ಲಿ ಗೋಧಿ ಹಿಟ್ಟು, ಈರುಳ್ಳಿ, ಟೊಮೇಟೊ, ಬೇಳೆ ಕಾಳುಗಳನ್ನು ಕೂಡ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು ಅವುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಈಗ ಲಾಂಚ್ ಆಗಿರುವಂತಹ ಅಕ್ಕಿಗು ಕೂಡ ಅದೇ ರೀತಿಯ ರೆಸ್ಪಾನ್ಸ್ ಸಿಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೂಡ ಈ ಯೋಜನೆಗೆ ಬಿಎಸ್ ವೈ ಚಾಲನೆ ನೀಡಿದ್ದು ಇದರ ಮುಖ್ಯ ಗೋಧಾಮು ಬೆಂಗಳೂರಿನಲ್ಲಿ ಯಶವಂತಪುರದಲ್ಲಿದ್ದು, ಐವತ್ತು ಮೊಬೈಲ್ ವ್ಯಾನ್ ಗಳ ಮೂಲಕ ಪ್ರಮುಖ ಏರಿಯಾ ಗಳಿಗೆ ತಲುಪಿಸುವಂತಹ ಯೋಜನೆಯನ್ನು ಕೂಡ ರೂಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಕೂಡ ಸರ್ಕಾರ ಇದನ್ನು ಮಾರಾಟ ಮಾಡುವಂತಹ ಯೋಜನೆಯನ್ನು ರೂಪಿಸಿದೆ ಎಂಬುದಾಗಿ ತಿಳಿದು ಬಂದಿದೆ.

Comments are closed.