Sandalwood: ಡಿ ಬಾಸ್ ಹುಟ್ಟುಹಬ್ಬಕ್ಕೆ ವಿಚಿತ್ರ ಉಡುಗೊರೆ ನೀಡಲಿದ್ದಾನೆ ಈ ಅಭಿಮಾನಿ; ಏನಂತೆ ಗೊತ್ತಾ?

Sandalwood: ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ (Sandalwood) ವಿಚಾರಕ್ಕೆ ಬಂದ್ರೆ ಸದ್ಯದ ಮಟ್ಟಿಗೆ ಇಡೀ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ನಟ ಎನ್ನುವಂತಹ ಪ್ರಶ್ನೆಗೆ ಸಿಗುವಂತಹ ಏಕೈಕ ಉತ್ತರ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ತೂಗುದೀಪ್ ಶ್ರೀನಿವಾಸ್. ಬೇರೆಲ್ಲ ನಟರಿಗೆ ಅಭಿಮಾನಿಗಳಿದ್ರೆ, ದರ್ಶನ್ ರವರಿಗೆ ಭಕ್ತಾಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಅವರ ಅಭಿಮಾನಿಗಳು ಪೂಜಿಸುತ್ತಾರೆ.

Sandalwood actor darshan birthday his fan who coming by walk to Bengaluru from his  hometown lingasur

ಇನ್ನು ಇದೇ ಫೆಬ್ರವರಿ 16 ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನ್ಮದಿನಾಚರಣೆ. ಈ ಬಾರಿ ಡಿ ಬಾಸ್ ರವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಬೇಕು ಎನ್ನುವುದಾಗಿ ಅಭಿಮಾನಿಗಳು ಕೂಡ ತೀರ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿ ಒಬ್ಬರು ವಿಚಿತ್ರವಾದ ಹರಕೆಯನ್ನು ಪೂರೈಸಲು ಹೊರಟಿದ್ದಾರೆ. ಹೌದು ತಮ್ಮ ಊರಿನಿಂದ ನಡೆದುಕೊಂಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬಕ್ಕೆ ಅವರ ಮನೆಗೆ ಬರುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ.

ಸ್ವಂತ ಉದ್ಯಮ ಮಾಡುವ ಯೋಚನೆ ನೀವು ಮಾಡಿ ಸಾಕು, ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ!  ಇಷ್ಟೇ ದಾಖಲೆ ಕೊಟ್ರೆ ಸಾಕು!

ಹೌದು ನಾವ್ ಮಾತನಾಡುತ್ತಿರುವುದು ರಾಯಚೂರು ಜಿಲ್ಲೆಯ ವೀರಭದ್ರಪ್ಪ ಅವರ ಬಗ್ಗೆ. ಈಗಾಗಲೇ ಅವರು ತಮ್ಮ ಊರಿನ ದೇವಸ್ಥಾನದಲ್ಲಿ ಪೂಜೆಯನ್ನು ಪೂರೈಸಿ. ಪಾದಯಾತ್ರೆಯನ್ನು ಪ್ರಾರಂಭಿಸಿಯಾಗಿದೆ. ದರ್ಶನ್ ರವರ ಈ ಅಭಿಮಾನಿಯ ಅಭಿಮಾನವನ್ನು ನೋಡಿರುವಂತಹ ಪ್ರತಿಯೊಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಅಭಿಮಾನಿಗಳನ್ನು ಪಡೆದುಕೊಳ್ಳುವುದಕ್ಕೆ ನಿಜಕ್ಕೂ ಕೂಡ ಡಿ ಬಾಸ್ ಧನ್ಯರು ಅನ್ನೋದಾಗಿಕೂಡ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ವೀರಭದ್ರಪ್ಪ ಅವರು ಒಬ್ಬ ಡ್ಯಾನ್ಸ್ ಮಾಸ್ಟರ್ ಆಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಪಂಚಪ್ರಾಣ. ಇನ್ನು ಈ ಬಾರಿ ಫೆಬ್ರವರಿ 16 ರಂದು ನಡೆಯಲಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನ್ಮದಿನೋತ್ಸವಕ್ಕೆ ಪಾದಯಾತ್ರೆಯ ಮೂಲಕವೇ ಸೇರುವ ತವಕದಲ್ಲಿ ವೀರಭದ್ರಪ್ಪನವರು ಇದ್ದಾರೆ. ಅವರ ಈ ಸುಧೀರ್ಘ ಪ್ರಯಾಣಕ್ಕೆ ಶುಭವಾಗಲಿ ಎಂಬುದಾಗಿ ಹಾರೈಸೋಣ.

Comments are closed.