Bigg Boss Kannada 10: ಬಿಗ್ ಬಾಸ್ 10 ಎಲ್ಲಾ ಸ್ಪರ್ಧಿಗಳೂ ಒಟ್ಟಾದ್ರೂ  ಸ್ನೇಹಿತ್ ಮಾತ್ರ ಕಾಣಿಸಿಲ್ಲ, ಸ್ನೇಹಿತ್ ವಿಷಯ ಮಾತ್ರ ಈ ಹೊತ್ತಿನಲ್ಲಿ ನೆನಪಿಸಿಕೊಳ್ಳೋದೇ ಬೇಡ ಅಂತ ನಮೃತಾ ಹೇಳಿದ್ಯಾಕೆ?

Bigg Boss Kannada 10: ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ಮುಗಿದು ಎರಡು ವಾರಗಳು ಕಳೆದಿವೆ. ವಿನ್ನರ್ ಆಗಿ ಕಾರ್ತಿಕ್ ಮಹೇಶ್ ರವರು ಹೊರಹೊಮ್ಮಿದ್ರೆ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ರವರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಿಗ್ ಬಾಸ್ (Bigg boss) ಸ್ಪರ್ಧಿಗಳಾಗಿರುವಂತಹ ರಕ್ಷಕ್, ವಿನಯ್ ಗೌಡ, ಇಶಾನಿ, ನಮೃತಾ ಗೌಡ, ಮೈಕಲ್ ಅಜಯ್ ಸೇರಿದಂತೆ ಸ್ಪರ್ಧಿಗಳ ಕುಟುಂಬಸ್ಥರು ಕೂಡ ಒಂದು ಕಡೆ ಸೇರಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದರು.

Bigg Boss Kannada 10 All Contestants met, but snehith was missing

ಬಿಗ್ ಬಾಸ್ (Bigg Boss Kannada 10) ಮನೆಯಲ್ಲಿ ಈಗಾಗಲೇ ಮೂರು ಗುಂಪುಗಳು ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಇತ್ತೀಚಿಗೆ ಬಿಗ್ ಬಾಸ್ ಮುಗಿದ ನಂತರ ವಿನಯ್ ರವರ ಗುಂಪು ಒಟ್ಟಿಗೆ ಸೇರಿರುವಂತಹ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಸ್ನೇಹಿತ್ ಯಾಕಿಲ್ಲ ಅನ್ನೋದಾಗಿ ಕೂಡ ಎಲ್ಲರೂ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.

ಕ್ರೆಡಿಟ್ ಸ್ಕೋರ್ ಕರಾಬಾಗಿದ್ರೂ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ; ಇದು ಪಕ್ಕಾ ’ಎಕ್ಸಪ್ರೆಸ್” ಕಣ್ರೀ!

ಎಲ್ಲರೂ ಕೂಡ ನಮೃತಾ ಗೌಡ ವಿನಯ್ ತಂಡದಲ್ಲಿದ್ದು ಇನ್ನೂ ಸ್ನೇಹಿತ್ ನಮೃತ ಅವರ ಜೊತೆಗೆ ಫ್ರೆಂಡ್ಶಿಪ್ ಬ್ರೇಕ್ಅಪ್ ಮಾಡಿಕೊಂಡಿದ್ದೆ ಅವರು ಈ ಗುಂಪಿನ ಪಾರ್ಟಿಯ ಸಂದರ್ಭದಲ್ಲಿ ಕಾಣಿಸಿಕೊಂಡಿಲ್ಲ ಎನ್ನುವಂತಹ ಗಾಳಿ ಸುದ್ದಿ ಹರಿದಾಡಲು ಪ್ರಾರಂಭ ಮಾಡಿತ್ತು. ಇದಕ್ಕೆ ಪವಿ ಪೂವಪ್ಪ ಅವರು ನೀಡಿರುವಂತಹ ಉತ್ತರ ಕೂಡ ಈಗ ಎಲ್ಲ ಕಡೆ ಸದ್ದು ಮಾಡುತ್ತಿದೆ. ಸ್ನೇಹಿತ್ ಪಾರ್ಟಿ ಮಾಡುವುದಿಲ್ಲ ಹಾಗೂ ಅವತ್ತು ಅವರು ಬ್ಯುಸಿಯಾಗಿದ್ರು ಅನ್ನೋ ಕಾರಣಕ್ಕಾಗಿ ಬಂದಿರ್ಲಿಲ್ಲ ಅನ್ನೋದಾಗಿ ಪವಿ ಪೂವಪ್ಪ ಕಾಮೆಂಟ್ ಮಾಡಿದ್ದಾರೆ.

ಇನ್ನು ಬಿಗ್ ಬಾಸ್ (Bigg Boss Kannada 10)  ನಲ್ಲಿ ಇರಬೇಕಾದರೆ ಸ್ನೇಹಿತ್ ಅವರು ನಮೃತ ಗೌಡ ಅವರ ಮೇಲೆ ಪ್ರೀತಿಯನ್ನು ಹೊಂದಿದ್ರು ಅನ್ನೋದನ್ನ ಸಾಕಷ್ಟು ಬಾರಿ ನಿವೇದನೆ ಮಾಡಿಕೊಂಡಿರುವುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಫಿನಾಲೆ ವಾರದಲ್ಲಿ ಬಿಗ್ ಬಾಸ್ (Bigg Boss Kannada 10)  ಮನೆಯ ಒಳಗೆ ಬಂದಾಗ ಸ್ನೇಹಿತ್ ಕಾರ್ತಿಕ್ ಜೊತೆಗೆ ಸೇರಿ ಮಾಡಿದ್ದ ಟ್ರೊಲ್ ನಿಂದಾಗಿ ಬೇಸರಗೊಂಡಿದ್ದ ಅಮೃತ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಿಮ್ಮನ್ನು ಯಾವತ್ತೂ ಕೂಡ ನೋಡೋದಿಲ್ಲ ಅನ್ನುವುದಾಗಿ ಹೇಳಿದರು. ಹೀಗಾಗಿ ಈ ಪರಿಸ್ಥಿತಿಯನ್ನು ಈ ಹಿಂದೆ ಬಿಗ್ ಬಾಸ್ ನಲ್ಲಿ ನಡೆದಿರುವಂತಹ ಈ ಘಟನೆಯ ಜೊತೆಗೆ ನೆಟ್ಟಿಗರು ತಳುಕು ಹಾಕುತ್ತಿದ್ದಾರೆ.

Comments are closed.