Janhvi Kapoor: ರಶ್ಮಿಕ ಹಾಗೂ ಶೀಲೀಲಾ ಅವರನ್ನು ಇದೊಂದು ವಿಚಾರದಲ್ಲಿ ನಟಿ ಜಾಹ್ನವಿ ಮೀರಿಸುತ್ತಾರಂತೆ. ಯಾವ ವಿಚಾರದಲ್ಲಿ ಗೊತ್ತಾ?

Janhvi Kapoor ನಮಸ್ಕಾರ ಸ್ನೇಹಿತರ ನಟಿ ಜಾಹ್ನವಿ (Janhvi Kapoor) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಶ್ರೀದೇವಿಯವರ ಹಿರಿಯ ಮಗಳಾಗಿದ್ದಾರೆ. ಧಡಕ್ ಎನ್ನುವಂತಹ ರಿಮೇಕ್ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಇವರು ಇವತ್ತು ಬಾಲಿವುಡ್ (Bollywood) ಚಿತ್ರರಂಗದ ಯುವ ಉದಯೋನ್ಮುಖ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ತೆಲುಗಿನಲ್ಲಿ ಜೂನಿಯರ್ ಎನ್ಟಿಆರ್ ರವರ ಮುಂದಿನ ಬಹು ನಿರೀಕ್ಷಿತ ಸಿನಿಮಾ ಆಗಿರುವಂತಹ ದೇವರ ಸಿನಿಮಾದಲ್ಲಿ ನಾಯಕಿಯಾಗಿ ಕೂಡ ಆಯ್ಕೆಯಾಗಿದ್ದಾರೆ.

ಈ ಸಿನಿಮಾದ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವಂತಹ ಜಾಹ್ನವಿ (Janhvi Kapoor)  ಮೊದಲ ಸಿನಿಮಾದ ಮೂಲಕವೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದ್ದಾರೆ. ಜೂನಿಯರ್ ಎನ್ಟಿಆರ್ ಅವರಂತಹ ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲಿ ನಾಯಕಿಯಾಗಿ ಪಾತ್ರವನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಅನ್ನೋದು ಕೂಡ ನೀವೆಲ್ಲರೂ ತಿಳಿದಿದ್ದೀರಿ. ಈ ಸಿನಿಮಾದಲ್ಲಿ ಅವರು ಮೀನುಗಾರನ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಈ ಸಿನಿಮಾ ಈಗಾಗಲೇ ತೆಲುಗು ಚಿತ್ರರಂಗದ ಅತ್ಯಂತ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಇದರ ಜೊತೆಗೆ ಈಗ ರಾಮಚರಣ್ ಅವರ ಸಿನಿಮಾದಲ್ಲಿ ಕೂಡ ಜಾಹ್ನವಿ (Janhvi Kapoor) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಸಿನಿಮಾಗಾಗಿ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಶ್ರೀಲೀಲಾ ಹಾಗೂ ರಶ್ಮಿಕಾ ಮಂದಣ್ಣ ಅವರಿಗಿಂತ ಹೆಚ್ಚಾಗಿದೆ.

ಕನ್ನಡದಿಂದ ಬಂದಿರುವಂತಹ ನಟಿ ಶ್ರೀಲೀಲಾ ಅವರು ಈಗ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸನ್ನು ಪಡೆದುಕೊಂಡು ಟಾಪ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು ಅವರು ಒಂದು ಸಿನಿಮಾಗೆ, ಒಂದರಿಂದ ಎರಡು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ರಶ್ಮಿಕ ಮಂದಣ್ಣ (Rashmika Mandanna) ಒಂದು ಸಿನಿಮಾಗೆ ನಾಲ್ಕರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

ಜಾಹ್ನವಿ (Janhvi Kapoor) ರಾಮಚರಣ್ (Ramcharan) ಅವರ ಜೊತೆಗಿನ ಸಿನಿಮಾ ಗೆ ಆರು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದಾಗಿ ಮಾಹಿತಿ ಸಿಕ್ಕಿದೆ. ಈ ಮೂಲಕ ಆ ಇಬ್ಬರು ನಟಿಯರಿಗಿಂತ ಹೆಚ್ಚಾಗಿ ಜಾಹ್ನವಿ (Janhvi Kapoor) ಹೆಚ್ಚಿನ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದಾಗಿ ಹೇಳಬಹುದಾಗಿದೆ.

ಆರಂಭಿಕ ದಿನಗಳಲ್ಲಿ ಶ್ರೀದೇವಿ ಕೇವಲ ತಮ್ಮ ತಾಯಿ ನಟಿ ಹಾಗೂ ತಂದೆ ಪ್ರೌಢ ಎನ್ನುವ ಕಾರಣಕ್ಕಾಗಿ ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ನೆಪೋಟಿಸಿಯಂ ಕಿಡ್ ಎನ್ನುವುದಾಗಿ ಸುದ್ದಿಯಾಗಿದ್ರು. ಆದರೆ ನಂತರದ ದಿನಗಳಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅದ್ಭುತ ನಟನೆಯನ್ನು ತೋರ್ಪಡಿಸುವುದರ ಮೂಲಕ ಕೇವಲ ಶಿಫಾರಸ್ಸಿನಿಂದ ಮಾತ್ರವಲ್ಲದೆ ತಮ್ಮ ಪ್ರತಿಭೆಯ ಕಾರಣದಿಂದಾಗಿ ಕೂಡ ಅವರು ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಸದ್ಯದ ಮಟ್ಟಿಗೆ ತೆಲುಗಿನ ಟಾಪ್ ನಟರ ಜೊತೆಗೆ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ ಅಂತ ಹೇಳಬಹುದು.

Comments are closed.