Vishnuvardhan: ವಿಷ್ಣುವರ್ಧನ್‌-ಭಾರತಿ ಇಬ್ಬರೂ  ಹೆಣ್ಣು ಮಕ್ಕಳನ್ನೇ ದತ್ತು ಪಡೆದಿದ್ದು ಯಾಕೆ ಗೊತ್ತಾ?

Vishnuvardhan: ನಮಸ್ಕಾರ ಸ್ನೇಹಿತರೇ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ರವರ ಕೊಡುಗೆ ಭಾರತೀಯ ಚಿತ್ರರಂಗ ಹಾಗೂ ಕನ್ನಡ ಚಿತ್ರರಂಗದಲ್ಲಿ ಎಷ್ಟಿದೆ ಎಂಬುದನ್ನು ನಾವು ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ. ಆದರೆ ಅವರು ವೈಯಕ್ತಿಕ ಜೀವನದಲ್ಲಿ ಯಾವ ರೀತಿ ಇದ್ದರೂ ಅನ್ನೋದು ಸಾಕಷ್ಟು ಜನರಿಗೆ ತಿಳಿಯದೆ ಇರಬಹುದು. ಅದರಲ್ಲಿ ವಿಶೇಷವಾಗಿ ನಾವು ಹೇಳ್ತಾ ಇರೋದು ಅವರ ಇಬ್ಬರು ದತ್ತು ಮಕ್ಕಳಾಗಿರುವಂತಹ ಕೀರ್ತಿ ವಿಷ್ಣುವರ್ಧನ್ (Kirti Vishnuvardhan)  ಹಾಗೂ ಚಂದನ ವಿಷ್ಣುವರ್ಧನ್ (Chandana Vishnuvardhan) ಅವರ ಬಗ್ಗೆ. ಇಬ್ಬರು ಹೆಣ್ಣು ಮಕ್ಕಳನ್ನು ಕೂಡ ವಿಷ್ಣುವರ್ಧನ್(Dr Vishnuvardhan) ರವರು ದತ್ತಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಇದರ ಹಿಂದಿನ ಕಾರಣ ಏನು ಅನ್ನೋದು ಸಾಕಷ್ಟು ಜನರಿಗೆ ತಿಳಿದಿಲ್ಲ.

Do you know Dr.Vishnuvardhan and Bharti adopted 2 girl child

ಈ ಪ್ರಶ್ನೆಗಳಿಗೆ ವಿಷ್ಣುವರ್ಧನ್ (Vishnuvardhan) ರವರು ತಾವು ಬದುಕಿದ್ದಾಗಲೇ ವಿಭಿನ್ನ ರೀತಿಯಲ್ಲಿ ಉತ್ತರ ಕೊಡುವ ಮೂಲಕ ಸುದ್ದಿಯಾಗಿದ್ದರು. ಸಮಾಜದಲ್ಲಿ ಈಗಾಗಲೇ ನಡೆಯುತ್ತಿರುವಂತಹ ಹೆಣ್ಣು ಮಕ್ಕಳ ಶೋಷಣೆಯನ್ನು ಗಮನಿಸಿ, ಆದ್ರೆ ಹೆಣ್ಣು ಮಕ್ಕಳೇ ಆಗಬೇಕು ಅನ್ನೋದಾಗಿ ಭಾವಿಸಿದ್ದೆ. ನಮಗೆ ಮಕ್ಕಳಾದರೆ ಹೆಣ್ಣು ಮಕ್ಕಳೇ ಆಗುತ್ತವೆ ಅನ್ನೋದಕ್ಕೆ ಏನು ಗ್ಯಾರಂಟಿ ಇಲ್ಲ ಹೀಗಾಗಿ ಹುಟ್ಟಿರುವಂತಹ ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡು ಸಾಕಿದ್ದೇವೆ ಎನ್ನುವುದಾಗಿ ವಿಷ್ಣುವರ್ಧನ್ ರವರು ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ರು.

ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ “ದಿ ಕೇರಳ ಸ್ಟೋರಿ” ನೋಡೋದನ್ನ ಮಿಸ್ ಮಾಡಿಕೊಂಡಿದ್ರಾ? ಬಂದೇ ಬಿಡ್ತು ನೋಡಿ OTT ಗೆ; ಯಾವಾಗ ರಿಲೀಸ್ ಗೊತ್ತಾ?

ತಿಳಿದಿರುವ ಮಾಹಿತಿಯ ಪ್ರಕಾರ ವಿಷ್ಣುವರ್ಧನ್ (Vishnuvardhan)  ರವರು ಮೊದಲಿಗೆ ಒಬ್ಬಳೇ ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದರು ನಂತರ, ಇನ್ನೊಬ್ಬ ಹೆಣ್ಣು ಮಕ್ಕಳನ್ನು ಕೂಡ ದತ್ತಕ್ಕೆ ತೆಗೆದುಕೊಂಡು ಪರಸ್ಪರ ಒಬ್ಬರಿಗೊಬ್ಬರು ಸಹಕಾರದಿಂದ ಇರುವುದಕ್ಕೆ ಅನುಕೂಲವಾಗುತ್ತೆ ಅನ್ನೋದಾಗಿ ಕರೆದುಕೊಂಡು ಬಂದೆ ಅನ್ನೋದಾಗಿ ಕೂಡ ಹೇಳಿದ್ದಾರೆ. ನಮ್ಮಿಂದ ಸಮಾಜದಲ್ಲಿ ನಡೆಯುವಂತಹ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕೊಂಚಮಟ್ಟಿಗೆ ಕಡಿಮೆಯಾಗಿದೆ ಅನ್ನುವ ಭಾವನೆಯಾದ್ರು ಸಿಗುತ್ತೆ ಅನ್ನೋದಾಗಿ ವಿಷ್ಣುವರ್ಧನ್ ರವರು ಹೇಳಿಕೊಂಡಿದ್ರಂತೆ.

ಇನ್ನು ಚಂದನ ಮತ್ತು ಕೀರ್ತಿ ಇಬ್ಬರನ್ನು ಕೂಡ ಉತ್ತಮವಾದ ಶಿಕ್ಷಣವನ್ನು ನೀಡಿ ಅವರಿಗೊಂದು ಒಳ್ಳೆ ಜೀವನವನ್ನು ರೂಪಿಸಿ ಕೊಟ್ಟಂತಹ ಮಹಾನ್ ಪುಣ್ಯಾತ್ಮ ಡಾ ವಿಷ್ಣುವರ್ಧನ್ (Vishnuvardhan)  ಅಂದ್ರೆ ತಪ್ಪಾಗಲಾರದು. ಕೀರ್ತಿ ವಿಷ್ಣುವರ್ಧನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಅನಿರುದ್ಧ ಅವರ ಜೊತೆಗೆ ಮದುವೆ ಆಗಿದ್ದಾರೆ. ಇನ್ನು ಚಂದನ ಅವರು ನಾಚಿಕೆ ಸ್ವಭಾವದವನಾಗಿರುವುದರಿಂದ ಕೀರ್ತಿ ವಿಷ್ಣುವರ್ಧನ್ (Vishnuvardhan) ಅವರ ರೀತಿಯಲ್ಲಿ ಹೆಚ್ಚು ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಅದೇನೇ ಇರಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತಕ್ಕೆ ಪಡೆದು ಇಡೀ ಸಮಾಜವೇ ಗೌರವ ನೀಡುವ ರೀತಿಯಲ್ಲಿ ಬಾಳಿ ತೋರಿಸಿದ ವಿಷ್ಣುವರ್ಧನ್ ರವರಿಗೆ ನಿಜಕ್ಕೂ ಸೆಲ್ಯೂಟ್ ಹೊಡಿಯಲೇ ಬೇಕು. ವಿಷ್ಣುವರ್ಧನ್ ರವರ ಈ ಕಾರ್ಯದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Comments are closed.