Daughter’s Rights: ತಂದೆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಇದೆಯಾದರೂ, ತಂದೆಯೇ ಆಸ್ತಿ ಕೊಡಲು ನಿರಾಕರಿಸಿದರೆ ಹೆಣ್ಣು ಮಗಳು ಅದನ್ನ ಪಡೆದುಕೊಳ್ಳಲು ಸಾಧ್ಯವೇ? ಏನನ್ನುತ್ತೆ ಕಾನೂನು?

Daughter’s Rights: ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 1.4 ಬಿಲಿಯನ್ ಗಳಿಗಿಂತಲೂ ಅಧಿಕ ಜನಸಂಖ್ಯೆ ಇದ್ದಾರೆ. ಹೀಗಾಗಿ ಅವರನ್ನು ನಿಯಂತ್ರಣ ಮಾಡುವುದಕ್ಕೆ ಭಾರತದ ಸಂವಿಧಾನದಲ್ಲಿ ಸರಿಯಾದ ನ್ಯಾಯಪರವಾದ ನಿಯಮಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ವಿಶೇಷವಾಗಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ನಮ್ಮ ಭಾರತದ ಕುಟುಂಬಗಳ ನಡುವೆ ಆಸ್ತಿ (Property) ವಿವಾದದ ವಿಚಾರಗಳು ಆಗಾಗ ಹೊರಬರುತ್ತವೆ. ಇದರಲ್ಲಿ ಹೆಣ್ನುಮಕ್ಕಳಿಗೆ ತಂದೆ ಆಸ್ತಿ ಹಕ್ಕು (Daughter’s Rights) ಕೂಡ ಸೇರಿಕೊಂಡಿದೆ. ಬನ್ನಿ ಇವತ್ತಿನ ಲೇಖನಿಯಲ್ಲಿ ಆಸ್ತಿಯ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

You must know Daughter’s Rights in Father’s Property

ಹಿಂದೂ ಆಸ್ತಿ ಕಾನೂನು ಹಂಚಿಕೆಯ ನಿಯಮಗಳ ಪ್ರಕಾರ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕಿರುತ್ತದೆಯೋ, ಅದೇ ರೀತಿಯಲ್ಲಿ ಅಷ್ಟೇ ಪ್ರಮಾಣದ ಹಕ್ಕು ಹೆಣ್ಣು ಮಕ್ಕಳಿಗೆ (Daughter’s Rights) ಕೂಡ ಇರುತ್ತದೆ. ಈ ಕಾನೂನು ನಿಯಮಗಳ ಪ್ರಕಾರ ತಂದೆಯ ಆಸ್ತಿಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರು ಕೂಡ ಸರಿಸಮಾನ ಪಾಲುದಾರರಾಗಿರುತ್ತಾರೆ ಅನ್ನೋದನ್ನ ನಾವು ತಿಳಿದುಕೊಳ್ಳಬೇಕಾಗಿರುತ್ತದೆ.

Bigg Boss Kannada 10: ಕಡೆಗೂ “ನನ್ನ ಸಂಗೀತ ಫ್ರೆಂಡ್ ಶಿಫ್ ಹಾಳಾಗಿದ್ಯಾಕೆ” ರಿವೀಲ್ ಮಾಡಿದ ಬಿಗ್ ಬಾಸ್ ವಿನ್ನರ್; ಸಂಗೀತಾ ಸ್ನೇಹಕ್ಕಾಗಿ ಈಗಲೂ ಹಂಬಲಿಸ್ತಿದ್ದಾರಾ ಕಾರ್ತಿಕ್?  

ಸಾಕಷ್ಟು ಪ್ರಕರಣಗಳಲ್ಲಿ ನಾವು ಗಮನಿಸಿರಬಹುದು ತಂದೆಯ ಆಸ್ತಿಯನ್ನು ನೇರವಾಗಿ ಗಂಡು ಮಕ್ಕಳಿಗೆ ಬರೆದಿಟ್ಟುಬಿಡುತ್ತಾರೆ. ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇದ್ದರೂ ಕೂಡ ಒಂದು ವೇಳೆ ತಂದೆ ತಮ್ಮ ವಿಲ್ ನಲ್ಲಿ ಮಗನ ಹೆಸರಿಗೆ ಆಸ್ತಿಯನ್ನು ಬರೆದಿಟ್ಟರೆ ಕಾನೂನು ನಿಯಮಗಳ ಪ್ರಕಾರ ಮಗಳು ಕಾನೂನು ಹೋರಾಟವನ್ನು ಮಾಡಿ ಆ ಆಸ್ತಿಯಲ್ಲಿ ಪಾಲನ್ನು ಪಡೆಯಬಹುದಾ ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

ಉಳಿದಿರುವಂತಹ ಆಸ್ತಿಯನ್ನು ಆಸ್ತಿಯ ಮಾಲೀಕ ಯಾರಿಗೆ ಬೇಕಾದರೂ ಕೂಡ ಹಂಚಬಹುದಾದಂತಹ ಸ್ವಾತಂತ್ರ್ಯ ಹಾಗೂ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಆಸ್ತಿ ಕಾನೂನು ನಿಯಮಗಳು ಹೇಳುತ್ತವೆ. ಒಂದು ವೇಳೆ ತಂದೆ ಮರಣ ಹೊಂದುವುದಕ್ಕಿಂತ ಮುಂಚೆ ಉಯಿಲ (Will) ನ್ನು ಮಾಡದೆ ಹೋದಲ್ಲಿ ಅದು ಪ್ರತಿಯೊಬ್ಬರಿಗೂ ಕೂಡ ಸರಿಯಾದ ರೀತಿಯಲ್ಲಿ ಪಾಲು ಆಗುತ್ತದೆ. ಆದ್ರೂ ಒಂದು ವೇಳೆ ಅವರು ವಿಲ್ ಬರೆದಿಟ್ಟು ಹೋದಲಿ, ಆ ಸಂದರ್ಭದಲ್ಲಿ ಮಾತ್ರ ಅದು ಯಾರ ಹೆಸರಿಗೆ ಬರೆದಿಟ್ಟಿದ್ದಾರೋ ಅವರಿಗೆ ಆಸ್ತಿ ಸೇರುತ್ತದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಉಯಿಲಿನಲ್ಲಿ ಕೂಡ ತಂದೆ ಯಾರಿಗೆ ಆಸ್ತಿಯನ್ನು ನೀಡಬೇಕೆಂದು ಬರೆದಿದ್ದರು ಯಾಕೆ ಅವರಿಗೆ ಆಸ್ತಿಯನ್ನು ನೀಡುತ್ತಾರೆ ಎನ್ನುವುದರ ಬಗ್ಗೆ ಕೂಡ ಸರಿಯಾದ ಕಾರಣವನ್ನು ಕೂಡ ಅದರಲ್ಲಿ ಬರೆದಿರಬೇಕು. ಹೀಗಿದ್ದಲ್ಲಿ ಮಾತ್ರ ಅದು ಕಾನೂನು ಪ್ರಕಾರ ಒಪ್ಪಿಗೆ ಆಗುತ್ತದೆ. ಒಂದು ವೇಳೆ ತಂದೆ ಉಯಿಲಿನಲ್ಲಿ ಗಂಡು ಮಕ್ಕಳಿಗೆ ತನ್ನ ಎಲ್ಲಾ ಆಸ್ತಿಯನ್ನು ಬರೆದಿಟ್ಟಿದ್ದೇನೆ ಎಂಬುದಾಗಿ ಕಾನೂನು ಪ್ರಕಾರ ಬರೆದಿಟ್ಟಿದ್ರೆ ಅದರಲ್ಲಿ ಹೆಣ್ಣು ಮಕ್ಕಳು (Daughter’s Rights)  ಯಾವುದೇ ಕಾರಣಕ್ಕೂ ಪಾಲನ್ನು ಪಡೆಯಲು ಸಾಧ್ಯವಿಲ್ಲ. ವಿಶೇಷವಾಗಿ ತಂದೆಯವರ ಸ್ವಯಾರ್ಜಿತ ಆಸ್ತಿಯಲ್ಲಿ ಅವರು ಅದನ್ನು ಯಾರಿಗೆ ನೀಡಬೇಕು ಎನ್ನುವಂತಹ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.

Comments are closed.