PPF: ಈ ಯೋಜನೆಯಲ್ಲಿ 10 ಸಾವಿರ ಹೂಡಿಕೆ ಮಾಡಿ ಸಾಕು, ಕೆಲವೇ ವರ್ಷಗಳಲ್ಲಿ ಜ್ಬು ತುಂಬಾ ಹಣ ತುಂಬಿಸಿಕೊಂಡು ಹೋಗಬಹುದು! ವಿವರ ತಿಳಿಯಿರಿ!

PPF: ನಮಸ್ಕಾರ ಸ್ನೇಹಿತರೆ ಭಾರತ ದೇಶ ಹೂಡಿಕೆಯ ವಿಚಾರದಲ್ಲಿ ಅತ್ಯಂತ ಹೆಚ್ಚಾಗಿ ನಂಬುವಂತಹ ಸಂಸ್ಥೆ ಎಂದರೆ ಅದು ಬ್ಯಾಂಕುಗಳಿಗಿಂತ ಹೆಚ್ಚಾಗಿ ಭಾರತೀಯ ಅಂಚೆ ಇಲಾಖೆ ಎನ್ನಬಹುದಾಗಿದೆ. ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಯೋಜನೆಗಳಿದ್ದು ಅವುಗಳಲ್ಲಿ ವಿಶೇಷವಾಗಿ ಇವತ್ತಿನ್ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು (PPF) ಯೋಜನೆಯ ಬಗ್ಗೆ. ಪಿಪಿಎಫ್ ಯೋಜನೆಯನ್ನು ವಿಸ್ತಾರವಾಗಿ ಹೇಳುವುದಾದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಎನ್ನುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೀರ್ಘಕಾಲಿಕ ಹೂಡಿಕೆಯ ವಿಚಾರವನ್ನು ಉಳ್ಳವರು ಹೂಡಿಕೆ ಮಾಡುವಂತಹ ಜನಪ್ರಿಯ ಯೋಜನೆಯಾಗಿದೆ.

Invest 10,000rs in PPF and you will get good return. Here are the Details.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)  ಯೋಜನೆಯ ಮೂಲಕ ಆಕರ್ಷಿಕ ಬಡ್ಡಿ ಹಾಗೂ ರಿಟರ್ನ್ ಅನ್ನು ಜನಸಾಮಾನ್ಯರು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ. 15 ವರ್ಷಗಳ ಅವಧಿಗೆ ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ನಲ್ಲಿ ಕನಿಷ್ಠ 10 ಸಾವಿರ ರೂಪಾಯಿಗಳ ಹೂಡಿಕೆಯನ್ನು ಮಾಡಿದ್ರೆ ಅವಧಿಯ ನಂತರ ನೀವು 4.4 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಕೆ ಮಾಡಿರುತ್ತೀರಿ. ಪ್ರತಿ ಐದು ವರ್ಷಗಳಿಗೊಮ್ಮೆ ಈ ಯೋಜನೆಯ ಅವಧಿಯನ್ನು ವಿಸ್ತರಣೆ ಮಾಡುವಂತಹ ಅವಕಾಶ ಕೂಡ ನಿಮಗೆ ನೀಡಲಾಗುತ್ತದೆ.

ಹೂಡಿಕೆ ಮಾಡುವಂತಹ ವ್ಯಕ್ತಿಗಳು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಖಾತೆಯಲ್ಲಿ 1.5 ಲಕ್ಷಗಳವರೆಗೂ ಕೂಡ ವಾರ್ಷಿಕವಾಗಿ ಹಣವನ್ನು ಹಾಕಬಹುದಾಗಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಜನರು ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರವೇನೆಂದರೆ ಆದಾಯ ತೆರಿಗೆ ಸೆಕ್ಷನ್ 80 c ಪ್ರಕಾರ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಈ ಹೂಡಿಕೆ ಮೇಲೆ ಸಿಗುವಂತಹ ಬಡ್ಡಿ ಹಾಗೂ ಮೆಚುರಿಟಿ ಹಣ ಎರಡರಲ್ಲಿ ಕೂಡ ನಿಮಗೆ ಆದಾಯ ತೆರಿಗೆ ವಿನಾಯಿತಿಯ ಜೊತೆಗೆ ಸಿಗಲಿದೆ. ಈ ಯೋಜನೆಯಲ್ಲಿ ಐದು ವರ್ಷಗಳ ಅವಧಿಯನ್ನು ಲಾಕ್ ಇನ್ ಪೀರಿಯಡ್ ಎಂಬುದಾಗಿ ತೀರ್ಮಾನಿಸಲಾಗಿರುತ್ತದೆ.

ರೊಚ್ಚಿಗೆದ್ದ ಸಿದ್ದರಾಮಯ್ಯ ಸರ್ಕಾರ- ಮಹಿಳೆಯರಿಗೆ ತಿಂಗಳಿಗೆ 5000. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ. ಹೇಗೆ ಗೊತ್ತೇ?

ಇದರಲ್ಲಿ ಹಣವನ್ನು ಹಿಂಪಡೆಯುವಂತಹ ಅವಕಾಶವನ್ನು ಕೂಡ ಜನರಿಗೆ ನೀಡಲಾಗಿರುತ್ತದೆ. ಹೀಗಿದ್ರು ಕೂಡ ನೀವು ಹಣವನ್ನು ಈ ಸಂದರ್ಭದಲ್ಲಿ ವಾಪಸ್ ತೆಗೆಯಬೇಕಾದ ಅಗತ್ಯ ಇರುವುದಿಲ್ಲ ಅದನ್ನು ಮುಂದಿನ ಐದು ವರ್ಷಗಳಿಗೆ ಬೇಕಾದರೂ ಕೂಡ ಮುಂದುವರಿಸಿಕೊಂಡು ಹೋಗಬಹುದು.

ಒಂದು ವೇಳೆ ಯಾರಾದರೂ ತಮ್ಮ ಮುಂದಿನ ಭವಿಷ್ಯಕ್ಕಾಗಿ ಅಥವಾ ತಮ್ಮವರ ಆರ್ಥಿಕ ಸಬಲತೆಗಾಗಿ ಹಣವನ್ನು ಒಂದೊಳ್ಳೆ ಲಾಭದಾಯಕ ರೀತಿಯಲ್ಲಿ ಹೂಡಿಕೆ ಮಾಡಬೇಕು ಎನ್ನುವಂತಹ ಆಲೋಚನೆಯನ್ನು ಹೊಂದಿದ್ದರೆ ಅಂಥವರಿಗೆ ಖಂಡಿತವಾಗಿ ಪೋಸ್ಟ್ ಆಫೀಸ್ ನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಉತ್ತಮ ಲಾಭದ ಜೊತೆಗೆ ತೆರಿಗೆ ಮುಕ್ತ ಅವಕಾಶವನ್ನು ಕೂಡ ನೀಡುವುದಕ್ಕೆ ಸಜ್ಜಾಗಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಕೂಡ ನಿಮ್ಮ ಭವಿಷ್ಯದ ದೃಷ್ಟಿಯಲ್ಲಿ ಹೂಡಿಕೆ ಮಾಡುವಂತಹ ಅವಕಾಶವನ್ನು ಹುಡುಕುತ್ತಿದ್ದರೆ ಖಂಡಿತವಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)  ಹೇಳಿ ಮಾಡಿಸಿದ ಯೋಜನೆಯಾಗಿದೆ.

Comments are closed.