Property Rules: ಹೆಣ್ಣುಮಕ್ಕಳಿಗೆ ಬೇಸರದ ಸಂಗತಿ, ತವರಿನ ಈ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಕೇಳುವ ಹಕ್ಕನ್ನು ಹೊಂದಿಲ್ಲ, ಯಾವುದರಲ್ಲಿ ಗೊತ್ತೇ?

Property Rules: ನಮಸ್ಕಾರ ಸ್ನೇಹಿತರೆ ಭಾರತದ ಕಾನೂನಿನ ಪ್ರಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಕೂಡ ತಮ್ಮ ತವರಿನ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳುವಂತಹ ಹಕ್ಕು ಇರುತ್ತದೆ. ಆದರೆ ಕೆಲವೊಂದು ಆಸ್ತಿಗಳಲ್ಲಿ ಹೆಣ್ಣು ಮಕ್ಕಳು ಹಕ್ಕನ್ನ ಹೊಂದಿರುವುದಿಲ್ಲ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ಯಾವೆಲ್ಲ ಆಸ್ತಿಗಳನ್ನ ತವರಿನಿಂದ ಹೆಣ್ಣು ಮಕ್ಕಳು ಪಡೆದುಕೊಳ್ಳಬಹುದು ಹಾಗೂ ಪಡೆದುಕೊಳ್ಳಲು ಸಾಧ್ಯವಿಲ್ಲದ ಆಸ್ತಿಗಳು ಯಾವುವು ಎಂಬುದನ್ನು ತಿಳಿಯೋಣ.

Women should and shouldn’t ask proper from Parents. Know the Property Rules

 ಹೆಣ್ಣು ಮಕ್ಕಳಿಗೆ ಸಿಗಬಹುದಾದ ಆಸ್ತಿಗಳು

1. ಮುತ್ತಾತ ತಂದೆಯಿಂದ ಬಂದಂತಹ ತಲೆಮಾರಿನ ಆಸ್ತಿ (Property Rules)ಅಂದರೆ ವಂಶ ಪಾರಂಪರಿಕ ಪಿತ್ರಾರ್ಜಿತ ಆಸ್ತಿಯನ್ನು ಗಂಡು ಮಕ್ಕಳ ರೀತಿಯಲ್ಲಿ ಹೆಣ್ಣು ಮಕ್ಕಳು ಕೂಡ ಸಮಾನವಾದ ಪಾಲನ್ನು ಹೊಂದುವಂತಹ ಅವಕಾಶವನ್ನು ಭಾರತದ ಕಾನೂನಿನ ಅಡಿಯಲ್ಲಿ ಹೊಂದಿದ್ದಾರೆ.

2. ಎರಡನೇದಾಗಿ ನೋಡುವುದಾದರೆ ಜಂಟಿ ಕುಟುಂಬ ಅಂದ್ರೆ ಅಣ್ಣ ಮತ್ತು ತಮ್ಮಂದಿರ ಕುಟುಂಬ ಜೊತೆಗೆ ಇದ್ದು ಆ ಸಂದರ್ಭದಲ್ಲಿ ನಡೆಯುವಂತಹ ಜಂಟಿ ಕುಟುಂಬದ ಆಸ್ತಿಯ ಪಾಲಿನ ಸಂದರ್ಭದಲ್ಲಿ ಆ ಕುಟುಂಬದ ಹೆಣ್ಣು ಮಕ್ಕಳು ಕೂಡ ಆಸ್ತಿ (Property Rules)ಯ ಪಾಲನ್ನು ಪಡೆದುಕೊಳ್ಳಲು ಕಾನೂನು ಪ್ರಕಾರವಾಗಿ ಅರ್ಹರಾಗಿರುತ್ತಾರೆ. ಈ ಮೂಲಕ ಕೂಡ ಹೆಣ್ಣು ಮಕ್ಕಳು ಕುಟುಂಬದಲ್ಲಿ ಆಸ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

3. ಆಸ್ತಿಯ ಮಾರಾಟದಿಂದ ಬರುವಂತಹ ನಗದು ಹಣವನ್ನು ಅಥವಾ ಆ ನಗದು ಹಣದಿಂದ ಖರೀದಿಸಲಾಗಿರುವಂತಹ ಬೇರೆ ಆಸ್ತಿಯಲ್ಲಿ ಕೂಡ ಆ ಮನೆಯ ಹೆಣ್ಣು ಮಕ್ಕಳು ಗಂಡು ಮಕ್ಕಳ ರೀತಿಯಲ್ಲಿ ಪಾಲನ್ನು ಕೇಳಬಹುದಾಗಿದೆ.

4. ಎರಡು ಸಾವಿರದ ಐದನೇ ಇಸವಿಯ ನಂತರ ಯಾವುದೇ ರೀತಿಯ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಪಾಲನ್ನು ಪಡೆದುಕೊಳ್ಳಬಹುದು. ಇನ್ನು ಪಿತ್ರಾರ್ಜಿತ ಆಸ್ತಿ (Property Rules)ಯನ್ನು ಮಾರಾಟ ಮಾಡಿ ಆ ಹಣದಿಂದ ಬೇರೆ ಅಸ್ತಿ ಕೊಂಡುಕೊಂಡಿದ್ದಾರೆ ಅದನ್ನು ಕೂಡ ಹೆಣ್ಣು ಮಕ್ಕಳಿಗೆ ಪಾಲು ಸಿಗಬೇಕಾಗಿರುವ ಆಸ್ತಿಯಲ್ಲಿ ಜೋಡಿಸಬಹುದಾಗಿದೆ.

 ಆಸ್ತಿಗಳಲ್ಲಿ ಪಾಲು ಸಿಗೊದಿಲ್ಲ

1. ಒಂದು ವೇಳೆ ಯಾವುದೇ ಆಸ್ತಿಯನ್ನು ತಂದೆ ಸ್ವಂತವಾಗಿ ಸಂಪಾದನೆ ಮಾಡಿದರೆ, ಅದನ್ನು ಆತು ತನ್ನ ಗಂಡು ಮಕ್ಕಳಿಗೆ ಮಾತ್ರ ನೀಡುವ ಅಥವಾ ಯಾರಿಗೆ ಬೇಕಾದರೂ ಕೂಡ ನೀಡುವಂತಹ ಸ್ವಂತವಾದ ಅಧಿಕಾರವನ್ನು ಹೊಂದಿರುತ್ತಾರೆ. ಇದರಲ್ಲಿ ಹೆಣ್ಣು ಮಕ್ಕಳು ಆಸ್ತಿ (Property Rules) ಬೇಕು ಎನ್ನುವುದಾಗಿ ಹೇಳಲು ಬರುವುದಿಲ್ಲ.

2. ಒಂದು ವೇಳೆ ಮುಂಚೇನೆ ಹೆಣ್ಣು ಮಕ್ಕಳು ಹಕ್ಕುಪತ್ರ ಬಿಡುಗಡೆಯನ್ನು ಮಾಡಿದರೆ ನಂತರ ಆಸ್ತಿ (Property Rules) ಬೇಕು ಎನ್ನುವುದಾಗಿ ತಮ್ಮ ಹಕ್ಕನ್ನು ಚಲಾಯಿಸುವ ಹಾಗಿರುವುದಿಲ್ಲ. ಈ ಸಂದರ್ಭದಲ್ಲಿ ಕೂಡ ಹೆಣ್ಣು ಮಕ್ಕಳು ಆಸ್ತಿಯನ್ನು ಕೇಳುವ ಹಾಗಿರುವುದಿಲ್ಲ.

3. ತಾಯಿಗೆ ಅವರ ತವರಿನಿಂದ ಬಂದಿರುವಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳುವ ಹಾಗಿರುವುದಿಲ್ಲ ತಾಯಿ ಆ ಆಸ್ತಿ (Property Rules)ಯನ್ನು ಯಾರಿಗೆ ಬೇಕಾದರೂ ನೀಡಬಹುದು. ತಂದೆಗೆ ಕೂಡ ದಾನ ರೂಪದಲ್ಲಿ ಬಂದಿರುವ ಆಸ್ತಿಯನ್ನು ಅವರು ಇಷ್ಟ ಬಂದವರಿಗೆ ನೀಡಬಹುದಾಗಿದೆ.

4. 2005ರ ಹಿಂದೇನೆ ಆಸ್ತಿಯನ್ನು ಭಾಗ ಮಾಡಿ ಗಂಡು ಮಕ್ಕಳಿಗೆ ನೀಡಿದ್ರೆ ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳುವುದಕ್ಕೆ ಬರುವುದಿಲ್ಲ. ಇದೇ ರೀತಿ ಆಸ್ತಿಯ ಹಂಚಿಕೆ ವಿಚಾರದಲ್ಲಿ ಸಾಕಷ್ಟು ನಿಯಮಗಳನ್ನು ರೂಪಿಸಲಾಗಿದೆ.

Comments are closed.