Astrology: ಮನೆಯಲ್ಲಿ ಹೆಣ್ಣುಮಕ್ಕಳು ಮಾಡುವ ಈ ತಪ್ಪು ಕೆಲಸವೇ ಲಕ್ಷ್ಮಿ ದೇವಿ ಮನೆಗೆ ಬಾರದಂತೆ ಮಾಡುತ್ತೆ; ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ ನೋಡಿ!

Astrology: ಭಾರತೀಯರು ಸನಾತನಿಗಳು. ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡುತ್ತ ಬಂದಿದ್ದಾರೆ. ಈ ಹಿಂದೂ ಧರ್ಮದಲ್ಲಿ ಒಂದಿಷ್ಟು ನಂಬಿಕೆಗಳಿವೆ. ಈ ನಂಬಿಕೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಆದ್ದರಿಂದ ಇವುಗಳನ್ನು ಎಲ್ಲರೂ ಅನುಸರಿಸಬೇಕು. ಅದು ಹಿಂದೂಗಳು ಕರ್ತವ್ಯವಾಗಿದೆ. ಆದ್ದರಿಂದ ಈಗ ನಾವು ಹೇಳುವ ಆರು ಕೆಲಸಗಳನ್ನು ತಪ್ಪದೆ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ, ಮನಸ್ಸಿನಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ದೂರ ಹೋಗಿ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ. ಅದರಲ್ಲೂ ಗೃಹಿಣಿಯರು ಈ ಆಚರಣೆಗಳನ್ನು ತಪ್ಪದೆ ಪಾಲಿಸಬೇಕು.

ಶುಕ್ರವಾರ ಎಂದರೆ ಲಕ್ಷ್ಮಿದೇವಿಗೆ ಪ್ರಿಯವಾದ ವಾರವಾಗಿದೆ. ಹಾಗಾಗಿ ಮುತ್ತೈದೆಯರು ಆ ದಿನ ಲಕ್ಷ್ಮಿಪೂಜೆಯನ್ನು ತಪ್ಪದೆ ಮಾಡುತ್ತಾರೆ. ಹೀಗೆ ಪೂಜೆ ಮಾಡುವಾಗ ಧವಸ ಧಾನ್ಯಗಳನ್ನು ಇಟ್ಟು ಪೂಜೆ ಮಾಡುವ ರೂಡಿಯೂ ಇದೆ. ಮೊದಲ ಮತ್ತು ಎರಡನೇ ವಿಷಯ– ಶುಕ್ರವಾರದ ದಿನ ಅರಿಶಿನ ಹಾಗೂ ಉಪ್ಪು ಖಾಲಿಯಾಗಿದೆ ಎಂದು ಹೇಳಬಾರದು. ಈ ಎರಡು ವಸ್ತುಗಳು ಯಾವಾಗಲೂ ಮನೆಯಲ್ಲಿ ಇರಲೇಬೇಕು. ಅದು ಖಾಲಿಯಾಗುವ ಮುನ್ನವೇ ಮನೆಯಲ್ಲಿ ತಂದಿಡಬೇಕು.

ಈ 4 ರಾಶಿಯವರಿಗೆ ಅದೃಷ್ಟ ತರಲಿದೆ ಬುಧಾದಿತ್ಯ ಯೋಗ; ನೀವೂ ಆ ಅದೃಷ್ಟವಂತರಾ ನೋಡಿ!

 ಅದರಲ್ಲೂ ಉಪ್ಪು ಖಾಲಿಯಾಗಿದೆ ಎಂದರೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಎಂದರ್ಥ. ಆದ್ದರಿಂದ ಈ ವಸ್ತುಗಳು ಖಾಲಿಯಾದರೂ ಸಹ ಖಾಲಿಯಾಗಿದೆ ಎಂದು ಹೇಳದಿರಿ. ಮನೆಯಲ್ಲಿ ಅಕ್ಕಿ ಡಬ್ಬದಲ್ಲಿ ಅಕ್ಕಿಯನ್ನು ಅಳೆಯಲು ಒಂದು ಲೋಟವನ್ನು ಇಟ್ಟಿಯೇ ಇಟ್ಟಿರುತ್ತಾರೆ. ಈ ಲೋಟ ಯಾವಾಗಲೂ ನೇರವಾಗಿ ಇರುವಂತೆ ನೋಡಿಕೊಳ್ಳಿ. ಅದನ್ನು ಬೋರಲಾಗಿ ಯಾವಾಗಲೂ ಇಡಲೇಬೇಡಿ.

ಇನ್ನೂ ಮೂರನೆಯದಾಗಿ ರಾತ್ರಿ ಎಲ್ಲರಿಗೂ ಊಟ ಮುಗಿದ ಮೇಲೆ ಉಳಿದ ಅನ್ನವನ್ನು ಒಂದು ತಟ್ಟೆಯಲ್ಲಿ ಹಾಕಿಡಿ. ಯಾವಾಗಲೂ ರಾತ್ರಿ ಅನ್ನದ ಪಾತ್ರೆ ತೊಳೆಯಬೇಡಿ. ಅನ್ನ ಇರದಿದ್ದರೆ ರಾತ್ರಿ ವೇಳೆ ಲಕ್ಷ್ಮಿ ದೇವಿ ಬಂದರೆ ಅವಳು ಉಪವಾಸ ಹೋಗುತ್ತಾಳೆ ಎನ್ನುವ ಮಾತಿದೆ. ಹಾಗಾಗಿ ರಾತ್ರಿ ವೇಳೆ ಒಂದು ಪ್ಲೇಟಿನಲ್ಲಿ ಒಬ್ಬರಿಗೆ ಆಗುವಷ್ಟು ಅನ್ನವನ್ನು ಇಡುವ ರೂಡಿ ಮಾಡಿಕೊಳ್ಳಿ. ಅದರಲ್ಲೂ ಶುಕ್ರವಾರದ ದಿನ ಮಾತ್ರ ಮರೆಯದೆ ಒಂದು ಪ್ಲೇಟಿನಲ್ಲಿ ಅನ್ನ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ನಾಲ್ಕನೆಯದಾಗಿ ಬೆಳಿಗ್ಗೆ ಕಚೇರಿ ಕೆಲಸಕ್ಕೆ ಹೋಗುವವರು ಮಹಿಳೆಯರಾಗಲಿ, ಪುರುಷರಾಗಲಿ ಹಣೆಗೆ ತಿಲಕ ಇಟ್ಟುಕೊಂಡು ಹೋಗುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಮಾಡುವ ಕಾರ್ಯ ಯಶಸ್ವಿಯಾಗುತ್ತದೆ. ನೀವು ಯಾವುದಾದರೂ ಕಚೇರಿ ಕೆಲಸಕ್ಕೆ ಹೋಗುವುದಾದರೆ ಅಲ್ಲಿ ಕೆಲಸಗಳು ನೀವು ಎಣಿಸಿದಂತೆ ಸುಲಭವಾಗಿ ಆಗುತ್ತದೆ. ಹಣೆಗೆ ತಿಲಕ ಇಡುವುದು ವಿಜಯಲಕ್ಷ್ಮಿಯ ಸಂಕೇತವಾಗಿದೆ.

ಐದನೇಯದಾಗಿ ಬೆಳಿಗ್ಗೆ ಇರಬಹುದು, ಸಂಜೆ ಇರಬಹುದು ಯಾವಾಗಲೂ ಬೆರಳಿನ ನೆಟಿಗೆ ಮುರಿಯುವ ರೂಡಿ ಇದ್ದರೆ ಅದನ್ನು ಬಿಟ್ಟುಬಿಡಿ. ಇದು ದಾರಿದ್ರ್ಯದ ಲಕ್ಷಣವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ನೆಟಿಗೆ ಮುರಿಯುವ ಅಭ್ಯಾಸ ಹೊಂದಿದವರು ಬಿಡುವುದು ಒಳಿತು. ಅದರಲ್ಲೂ ಶುಕ್ರವಾರದ ದಿನ ಮಾತ್ರ ಯಾವುದೇ ಕಾರಣಕ್ಕೂ ನೆಟಿಗೆ ಮುರಿಯಲು ಹೋಗಬೇಡಿ.

ಆರನೇಯದಾಗಿ ಶುಕ್ರವಾರದ ದಿನ ಪುರುಷರಾಗಿರಲಿ, ಮಹಿಳೆಯರಾಗಿರಲಿ ಈ ಹಿಂದೆ ಧರಿಸಿದ ಅಥವಾ ತೊಳೆಯದ ಬಟ್ಟೆ ಧರಿಸಬೇಡಿ. ಇದು ಸಹ ದಾರಿದ್ರ್ಯದ ಲಕ್ಷಣವಾಗಿದೆ. ಶುಕ್ರವಾರದ ದಿನ ಮಾತ್ರ ತೊಳೆದು ಇಸ್ತ್ರಿ ಮಾಡಿದ ಮಡಿ ಬಟ್ಟೆಯನ್ನು ಮಾತ್ರ ಧರಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಪ್ರಾಪ್ತವಾಗುತ್ತದೆ.

Comments are closed.