Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ನಮಗೆ ಬೇಡವೇ ಬೇಡ ಎಂದ ಮಹಿಳೆಯರು ! 2,000 ರೂ. ನ್ನೂ ಮಹಿಳೆಯರು ನಿರಾಕರಿಸಿದ್ದೇಕೇ? ಆದರೂ ಸರ್ಕಾರದ ಕೊಡ್ತು ಗುಡ್ ನ್ಯೂಸ್!

Gruhalakshmi Scheme: ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯೂ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2೦೦೦ ರೂ. ಜಮಾ ಮಾಡಲಾಗುತ್ತದೆ. ಆದರೆ ಇಂತಹ ಯೋಜನೆಯನ್ನು ಕೆಲವೊಂದು ಮಹಿಳೆಯರು ತಿರಸ್ಕರಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮಹಿಳೆಯರು ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ನಮಗೆ ಬೇಡ ಎಂದು ಹೇಳಿದ್ದಾರೆ. ಇದು ಮೌಕಿಕವಾಗಿ ಹೇಳಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಗೃಹ ಲಕ್ಷ್ಮಿ ಯೋಜನೆ ಜಾಗೃತಿ ಮೂಡಿಸುವ ಸಲುವಾಗಿ ಮನೆ ಮನೆಗೆ ತೆರಳಿದ ವೇಳೆ ಹಲವಾರು ಮಹಿಳೆಯರು ಈ ಯೋಜನೆ ನಮಗೆ ಬೇಡ ಎಂದು ಹೇಳಿದ್ದಾರೆ. ಈ ಕುರಿತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅದರ ಮುಖ್ಯ ಕಚೇರಿಗೆ ಮಾಹಿತಿ ರವಾನೆಯಾಗಿದೆ. ಆದರೆ ಮಹಿಳೆಯರು ಈ ಯೋಜನೆ ನಿರಾಕರಿಸಲು ಕಾರಣ ಏನು ಎನ್ನುವುದು ಮಾತ್ರ ಇದುವರೆಗೆ ತಿಳಿದಿಲ್ಲ.

ಕರೆಂಟ್ ಬಿಲ್ ಬರ್ತಾ ಇಲ್ವಾ? ಇನ್ನು ಮುಂದೇನು ಫ್ರೀ ಬೇಕೇ? ಹಾಗಿದ್ದರೆ ಈ ಕೂಡಲೇ ಈ ಕೆಲಸ ಮಾಡಿ. ಇಲ್ಲವಾದಲ್ಲಿ ಬಂದ್.

ಈ ಹಿಂದೆ ತಾಂತ್ರಿಕ ಕಾರಣಗಳಿಂದಾಗಿ ಹಲವಾರು ಮಹಿಳೆಯರ ಖಾತೆಗೆ ಹಣ ಜಮಾ ಆಗಿರಲಿಲ್ಲ. ನಂತರ ಮಹಿಳೆಯರು ಅದನ್ನು ಸರಿ ಪಡಿಸಿಕೊಂಡರೂ ಸಹ ಕೆಲವೊಂದು ಕಾರಣಗಳಿಂದ ಹಣ ಬಂದಿರಲಿಲ್ಲ. ಇದರಿಂದಾಗಿಯೇ ಗೃಹ ಲಕ್ಷ್ಮಿ ಯೋಜನೆಯೇ ಬೇಡ ಎನ್ನುವ ನಿರ್ಧಾರಕ್ಕೆ ಮಹಿಳೆಯರು ಬಂದಿದ್ದಾರೆ ಎನ್ನಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಆದೇಶದಂತೆ ಮನೆ ಮನೆಗೆ ತೆರಳಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಸೇರಿದಂತೆ ವಿವಿಧ ತಾಲೂಕಿನ 992 ಮಹಿಳೆಯರು ಈ ಯೋಜನೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಆದಾಯ ತೆರಿಗೆ ಪಾವತಿ ಮಾಡುವವರಿಗೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜಿಲ್ಲೆಯಲ್ಲಿ 6312 ಜನ ಮಹಿಳೆಯರು ಈ ಕಾರಣಕ್ಕಾಗಿ ನಿರಾಕರಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೃಹ ಲಕ್ಷ್ಮಿ ನೋಂದಣಿ:

ಆಗಸ್ಟ ತಿಂಗಳಿಂದ ಈಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಗಸ್ಟ ತಿಂಗಳಿನಲ್ಲಿ 2,85,827 ಜನರು ಅರ್ಜಿ ಸಲ್ಲಿಸಿದ್ದರು. ಸಪ್ಟೆಂಬರ್ನಲ್ಲಿ 2,95,937 ಜನರು ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ನಲ್ಲಿ 2,98,654, ನವೆಂಬರ್ನಲ್ಲಿ 2,99,209, ಡಿಸೆಂಬರ್ನಲ್ಲಿ 2,99,772, ಈವರೆಗೆ 3,13,198 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಹಲವು ಮಹಿಳೆಯರಿಗೆ ಹಣ ಜಮಾ ಆಗಿಲ್ಲ. ಅದನ್ನು ಆದಷ್ಟು ಶೀಘ್ರ ಸರಿಪಡಿಸಿ ಎಲ್ಲರ ಖಾತೆಗೂ ಹಣ ಜಮಾ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.