E-Shram Card: ಕಾರ್ಮಿಕ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ; ಬರೋಬ್ಬರಿ ಏಳು ಲಕ್ಷ ಕಾರ್ಮಿಕರ ಕಾರ್ಡ್ ರದ್ದು, ಇದೇನ್ ಮಾಡ್ಕೊಂಬಿಟ್ರಪ್ಪಾ!

E-Shram Card: ಯಾವುದೇ ಒಂದು ದೇಶವಿರಲಿ, ರಾಜ್ಯವಿರಲಿ ಅದು ಅಭಿವೃದ್ಧಿಹೊಂದಬೇಕಾದರೆ ಕಾರ್ಮಿಕರ ಅವಶ್ಯಕತೆಯೂ ಇರುತ್ತದೆ. ಹಾಗಾಗಿ ಕಾರ್ಮಿಕರು ಸಹ ದೇಶದ ಬೆನ್ನೆಲುಬು ಎಂದರೆ ಅತಿಶಯೋಕ್ತಿ ಆಗಲಾರದು. ಶ್ರಮಜೀವಿಗಳಾದ ಕಾರ್ಮಿಕರು ಹೆಚ್ಚಿನದಾಗಿ ಬಡತನದಲ್ಲಿ ಜೀವನ ನಡೆಸುತ್ತಿರುತ್ತಾರೆ. ಅವರ ಆರ್ಥಿಕ ಸ್ಥಿತಿ ಬಹಳ ಹದಗೆಟ್ಟಿರುತ್ತದೆ.

 ಹಾಗಾಗಿ ಆಳುವ ಸರ್ಕಾರಗಳು ಕಾರ್ಮಿಕರ ಜೀವನವನ್ನು ಅಭಿವೃದ್ಧಿ ಪಡಿಸಲು ಅಥವಾ ಅವರಿಗೆ ಆರ್ಥಿಕ ಸ್ವಾವಲಂಬನೆ ತರುವ ಸಲುವಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ. ಈ ಮೂಲಕ ಕಾರ್ಮಿಕರ ಜೀವನದ ಅಭಿವೃದ್ಧಿಗೆ ಸರ್ಕಾರಗಳು ಶ್ರಮಿಸುತ್ತವೆ. ಇದೀಗ ಬಂದ ಮಾಹಿತಿಯ ಪ್ರಕಾರ ರಾಜ್ಯ ಕಾರ್ಮಿಕ ಇಲಾಖೆಯು ಸುಮಾರು ಏಳು ಲಕ್ಷ ಜನರ ಕಾರ್ಮಿಕ ಕಾರ್ಡ್ (E-Shram Card) ರದ್ದು ಮಾಡಲಾಗಿದೆ ಎಂದು ತಿಳಿಸಿದೆ.

ಆದರೆ ನಿಜವಾದ ಕಟ್ಟಡ ಕಾರ್ಮಿಕರು ಚಿಂತಿಸುವ ಅಗತ್ಯವಿಲ್ಲ. ಅಂತಹವರ ಕಾರ್ಡ್ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಯಾವುದೇ ಕಾರ್ಮಿಕ ಆಗಿಲ್ಲದಿದ್ದರೂ ಸರ್ಕಾರಿ ಯೋಜನೆಗಳ ಲಾಭ ಪಡೆಯುವ ಸಲುವಾಗಿ ನಕಲಿ ದಾಖಲೆಗಳನ್ನು ನೀಡಿ ಕಾರ್ಮಿಕ ಕಾರ್ಡ್ ಪಡೆದುಕೊಂಡವರಿಗೆ ಸರ್ಕಾರ ಶಾಕ್ ನೀಡಿದೆ. ಸರ್ಕಾರದ ಈ ಕ್ರಮದಿಂದ ನಿಜವಾದ ಕಾರ್ಮಿಕರಿಗೆ ಲಾಭವೇ ಆಗಲಿದೆ. ಹಲವಾರು ಜನರು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರೂ ತಾವು ಕಟ್ಟಡ ಕಾರ್ಮಿಕರು ಎಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಕಾರ್ಮಿಕ ಕಾರ್ಡ್ ಪಡೆದುಕೊಂಡಿದ್ದರು.

3000ರೂ. -5000ರೂ.  ಪೆನ್ಷನ್ ಸಿಗತ್ತೆ ನಿಮಗೂ; ಕೆಂದ್ರ ಸರ್ಕಾರದ ಈ ಹೊಸ ಯೋಜನೆಗೆ ಹೀಗೆ ಅಪ್ಲೈ ಮಾಡಿ!

ಸರ್ಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಇವರು ಬೇರೆ ಕಡೆ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ನಕಲಿ ದಾಖಲೆ ಸೃಷ್ಟಿಸಿ ಕಾರ್ಡ್ ಪಡೆದವರನ್ನು ಪತ್ತೆ ಹಚ್ಚಿ ಅಂತಹವರ ಕಾರ್ಡ್ ರದ್ದು ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಈ ಕುರಿತು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು ಹೇಳಿಕೆ ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಕಾರ್ಡ್ ಪಡೆದುಕೊಂಡ ೭ ಲಕ್ಷ ಜನರ ಕಾರ್ಮಿಕ ಕಾರ್ಡ್ ರದ್ದು ಮಾಡಲಾಗಿದೆ. ಈ ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ. ನಿರಂತರವಾಗಿ ನಡೆಯುತ್ತದೆ. ನಿಜವಾದ ಫಲಾನುಭವಿಗೆ ಸೌಲಭ್ಯ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾರ್ಮಿಕ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು:

ಅಪಘಾತ ಪರಿಹಾರ, ಮಕ್ಕಳ ಜನನದ ವೇಳೆ ಆರ್ಥಿಕ ನೆರವು, ಮದುವೆಗೆ ಸಹಾಯಧನ, ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿವೇತನ, ದುರ್ಬಲತೆ ಪಿಂಚಣಿ, ಅಂತ್ಯಕ್ರಿಯೆ ವೆಚ್ಚ, ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ ಸಿಗಲಿದೆ.

ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಕಾರ್ಡ್ಗಾಗಿ ರಾಜ್ಯದಾದ್ಯಂತ ಇಲ್ಲಿಯವರೆಗೆ ೫೩ ಲಕ್ಷ ಜನ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಎಲ್ಲ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಕಾರ್ಮಿಕ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಈ ವೇಳೆ 7 ಲಕ್ಷ ಜನರು ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದ್ದು, ಅಂತಹವರ ಕಾರ್ಡ್ ರದ್ದು ಮಾಡಲಾಗಿದೆ.

Comments are closed.