RBI: ಹೊಸದಾಗಿ ಸಾಲ ಮಾಡುವವರಿಗೆ ಆರ್ಬಿಐನಿಂದ ಸಿಹಿ ಸುದ್ದಿ; ಏನದು ಗೊತ್ತಾ? ಇನ್ಮುಂದೆ ಬ್ಯಾಂಕ್ ಗಳು ಹೀಗೆ ಮಾಡುವಂತಿಲ್ಲ!

RBI: ಈಗಿನ ಫಾಸ್ಟ್ ಲೈಪ್ನಲ್ಲಿ ಸಾಲ ಮಾಡದೆ ಬದುಕುವುದು ಒಂದು ಸಾಧನೆಯೇ ಸರಿ. ಆದರೂ ಒಂದಲ್ಲ ಒಂದು ಕಾರಣಕ್ಕಾಗಿ ಸಾಲ ಮಾಡಲೇ ಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮಕ್ಕಳ ಮದುವೆಗಾಗಿ, ಮನೆ ನಿರ್ಮಾಣಕ್ಕಾಗಿ, ಕೃಷಿ ಅಭಿವೃದ್ಧಿಗಾಗಿ ಹೀಗೆ ಹಲವಾರು ಕಾರಣಗಳಿಂದ ಸಾಲ ಮಾಡುವುದು ಅನಿವಾರ್ಯವಾಗಿದೆ. ಸಾಲ ಪಡೆಯಲು ನಾವು ಬ್ಯಾಂಕ್ಗಳಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಹೇಳಿದ ಮಾತನ್ನು ನಂಬಿ ಅವು ಹೇಳಿದಂತೆ ಮಾಡಬೇಕಾಗುತ್ತದೆ. ಆದರೆ ಇನ್ಮುಂದೆ ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಸಂಬಂಧಪಟ್ಟಂತೆ ಗ್ರಾಹಕರಿಗೆ ಎಲ್ಲ ಮಾಹಿತಿ ನೀಡಬೇಕಾಗುತ್ತದೆ. ಈ ಕುರಿತು ಭಾರತೀಯ ರಿಸರ್ವ ಬ್ಯಾಂಕ್ (RBI) ಎಲ್ಲ ಬ್ಯಾಂಕ್ಗಳಿಗೆ ಸುತ್ತೋಲೆ ಹೊರಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತದಲ್ಲಿರುವ ಎಲ್ಲ ಬ್ಯಾಂಕುಗಳನ್ನು ನಿಯಂತ್ರಿಸುವ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಆರ್ಬಿಐ ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ರಾಷ್ಟ್ರೀಕೃತ ಹಾಗೂ ಎಲ್ಲ ವಾಣಿಜ್ಯ ಬ್ಯಾಂಕುಗಳು ಪಾಲಿಸಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ಆರ್ಬಿಐ ಅಂತಹ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ಆರ್ಬಿಐ (RBI)  ಗ್ರಾಹಕರು ಕಷ್ಟಪಡಬಾರದು, ಗ್ರಾಹಕರಿಗೆ ಬ್ಯಾಂಕ್ನ ಎಲ್ಲ ಸೇವೆಗಳು ಸುಲಭವಾಗಿ ಸಿಗಬೇಕು ಎನ್ನುವ ಕಾರಣಕ್ಕೆ ಕಾಲ ಕಾಲಕ್ಕೆ ತನ್ನ ನಿಯಮದಲ್ಲಿ ಬದಲಾವಣೆ ಮಾಡುತ್ತ ಇರುತ್ತದೆ. ಅದರಲ್ಲೂ ಆರ್ಬಿಐ ಬ್ಯಾಂಕುಗಳು ನೀಡುವ ಸಾಲದತ್ತ ಹೆಚ್ಚಿನ ಗಮನ ಹರಿಸಿದೆ.

ಮೂರು ಕೋಟಿ ಮಹಿಳೆಯರಿಗೆ ಬಂಪರ್ ಕೊಟ್ಟ ಮೋದಿ- 1 ಲಕ್ಷ ಉಚಿತ, 8 ಲಕ್ಷ ಸಹಾಯ. ಅರ್ಜಿ ಹಾಕಿ ಸಾಕು. ಹಣ ಹುಡುಕಿಕೊಂಡು ಬರುತ್ತೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI)  ಸಾಲ ಪಡೆಯುವವರಿಗಾಗಿ ಹಲವು ನಿಯಮಗಳನ್ನು ಈಗಾಗಲೇ ಜಾರಿಗೆ ತಂದಿದೆ. ಗ್ರಾಹಕರು ಸಾಲ ಪಡೆದುಕೊಳ್ಳಲು ಕಷ್ಟ ಆಗಬಾರದು, ಅವರು ಸರಳವಾಗಿ ಯಾವುದೇ ಚಿಂತೆ ಇಲ್ಲದೆ ಸಾಲ ಪಡೆದುಕೊಳ್ಳಬೇಕು ಎನ್ನುವ ಸಲುವಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಭಾರತೀಯರ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಾಗೂ ಎಂಎಸ್ಎಂಇ  (MSME Loan) ಸಾಲಗಾರರಿಗೆ ತಾವು ಪಡೆದುಕೊಂಡ ಸಾಲಕ್ಕೆ ಬಡ್ಡಿ ಎಷ್ಟಾಗುತ್ತದೆ ಹಾಗೂ ಇತರೆ ಷರತ್ತುಗಳನ್ನು ಒಳಗೊಂಡ ಫ್ಯಾಕ್ಟ್ ಸ್ಟೇಟ್ಮೆಂಟ್ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಫೆ.೧೬ರಂದು ಆರ್ಬಿಐ ಈ ಆದೇಶ ಹೊರಡಿಸಿದೆ. ಪ್ರಸ್ತುತ ವೈಯಕ್ತಿಕ ಸಾಲ (Personal Loan)  ಪಡೆದವರಿಗೆ, ವಾಣಿಜ್ಯ ಬ್ಯಾಂಕುಗಳಿಂದ ಸಾಲಪಡೆದವರಿಗೆ ಆರ್ಬಿಐ ನಿಯಂತ್ರಿತ ಘಟಕಗಳು, ಮೈಕ್ರೋ ಫೈನಾನ್ಸ್  ಸಂಸ್ಥೆಗಳಿಗೆ ಫ್ಯಾಕ್ಟ್  ಸ್ಟೇಟ್ಮೆಂಟ್  ನೀಡುವುದನ್ನು ಕಡ್ಡಾಯಗೊಳಿಸಿದೆ.

ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಗ್ರಾಹಕರಿಗೆ ಸಾಲಗಳಿಗೆ ವಿಧಿಸುವ ಬೆಲೆ ಹಾಗೂ ಇತರೆ ಶುಲ್ಕಗಳ ಮೇಲೆ ಪಾರದರ್ಶಕತೆ ತರುವ ಸಲುವಾಗಿ ಕೇಂದ್ರ ಬ್ಯಾಂಕ್ ಈ ನಿರ್ಣಯಕ್ಕೆ ಬಂದಿದೆ. ಇದರಿಂದ ಸಾಲಗಾರರಿಗೆ ತಾವು ಮಾಡಿದ ಸಾಲಕ್ಕೆ ಬಡ್ಡಿ ಎಷ್ಟು, ಇತರೆ ಚಾರ್ಜಸ್ ಎಷ್ಟಾಗುತ್ತದೆ ಎಂದು ತಿಳಿದುಕೊಳ್ಳಲು ಸಹಾಯಕವಾಗಲಿದೆ. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಸರಳವಾಗಿ ಈ ಮಾಹಿತಿ ನೀಡಬೇಕು ಎಂದೂ ಸೂಚನೆಯಲ್ಲಿ ತಿಳಿಸಲಾಗಿದೆ.a

Comments are closed.