Astrology; ನೀವು ಗಿರವಿ ಇಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ ಈ ಕೆಲಸ ಮಾಡಿ; ನೀವು ಇಟ್ಟ ಚಿನ್ನ ವಾಪಸ್ ಬರುತ್ತದೆ ನೋಡಿ!

Astrology; ಚಿನ್ನವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಪ್ರತಿಯೊಬ್ಬರು ಸಹ ಚಿನ್ನವನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರು ಬಂಗಾರದ ಆಭರಣಗಳನ್ನು ತೊಡಲು ಖಷಿಪಡುತ್ತಾರೆ. ಅದರಲ್ಲೂ ಮಹಿಳೆಯರು ಬಂಗಾರದ ಮೇಲೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರು ದುಡಿದ ಹಣದಲ್ಲಿ ಸ್ವಲ್ಪ ಸ್ವಲ್ಪ ಕೂಡಿಟ್ಟು ನಂತರ ಅದನ್ನು ಬಂಗಾರ ಕೊಂಡುಕೊಳ್ಳಲು ಉಪಯೋಗಿಸುತ್ತಾರೆ. ಹೀಗೆ ಕೊಂಡುಕೊಂಡ ಬಂಗಾರವು ನಮ್ಮ ಸೌಂದರ್ಯ ಹೆಚ್ಚಿಸಲು ಮಾತ್ರವಲ್ಲದೆ ನಮ್ಮ ಕಷ್ಟಕಾಲದಲ್ಲಿ ನಮ್ಮ ಕಷ್ಟ ನಿವಾರಣೆಗೂ ಸಹಾಯಕ್ಕೆ ಬರುತ್ತದೆ.

ಮನೆಯಲ್ಲಿ ಏನಾದರೂ ಕಷ್ಟ ಬಂದ ತಕ್ಷಣ ನೆನಪಾಗುವುದೇ ಬಂಗಾರ. ಕೂಡಲೇ ಅದನ್ನು ತೆಗೆದುಕೊಂಡು ಹೋಗಿ ಅಡ ಇಟ್ಟು ಹಣ ತಂದು ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಳ್ಳುತ್ತಾರೆ. ಆದರೆ ಒಮ್ಮೆ ಹೀಗೆ ಮನೆಯಿಂದ ಆಚೆ ಹೋದ ಚಿನ್ನವು ಮನೆಗೆ ವಾಪಸ್ ಬರುವ ಸಾಧ್ಯತೆ ಕಡಿಮೆ. ಆದರೆ ನಮ್ಮ ಹಿಂದೂ ಧರ್ಮದಲ್ಲಿ ಬಂಗಾರವನ್ನು ಲಕ್ಷ್ಮಿಯ ಸ್ವರೂಪ ಎಂದು ತಿಳಿಯಲಾಗುತ್ತದೆ. ಹಾಗಾಗಿ ನಾವು ತೆಗೆದುಕೊಂಡು ಬಂದ ಬಂಗಾರವನ್ನು ಜೋಪಾನ ಮಾಡಬೇಕು.

ಎಷ್ಟೇ ಕಷ್ಟ ಬಂದರೂ ಅದನ್ನು ಅಡ ಇಡಲು ಹೋಗಬಾರದು. ಬೇರೆ ಯಾವ ದಾರಿ ಇದೆ ಎಂದೇ ಯೋಚಿಸಬೇಕು. ಆದರೂ ಏನೋ ಒಂದು ಕಾರಣಕ್ಕೆ ನೀವು ಅಡ ಇಟ್ಟ ಚಿನ್ನ ಮನೆಗೆ ವಾಪಸ್ ಬರುವಂತೆ ಮಾಡಲು ಒಂದು ಸರಳವಾದ ಆಚರಣೆ ಇದೆ. ಅದನ್ನು ನೀವು ಮಾಡಿದರೆ ನೀವು ಅಡ ಇಟ್ಟ ಚಿನ್ನವನ್ನು ವಾಪಸ್ ಮನೆಗೆ ತರಬಹುದು. ಆ ಸಾಮರ್ಥ್ಯ ನಿಮಗೆ ಬರುತ್ತದೆ.

ಈ ಆಚರಣೆಯನ್ನು ನೀವು ಸತತ ಮೂರು ಶನಿವಾರ ಮಾಡಬೇಕಾಗುತ್ತದೆ. ಪ್ರತಿ ಶನಿವಾರ ಸಹಜವಾಗಿಯೇ ಎಲ್ಲರಿಗೂ ಮನೆಯ ಹತ್ತಿರ ಇರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರೂಢಿ ಇರುತ್ತದೆ. ಹೀಗೆ ದೇವಸ್ಥಾನಕ್ಕೆ ಹೋದ ಸಮಯದಲ್ಲಿ ದೇವರ ಬಳಿ ಚಿನ್ನವನ್ನು ವಾಪಸ್ ತರಲು ಶಕ್ತಿ ಕರುಣಿಸು ಎಂದು ಮನಸಾರೆ ಪ್ರಾರ್ಥಿಸಬೇಕು. ನಂತರ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ತುಳಸಿಯನ್ನು ನೀಡುತ್ತಾರೆ. ಹೆಚ್ಚಿನವರು ಇದನ್ನು ತುಳಸಿಯನ್ನು ತಿನ್ನುತ್ತಾರೆ.

ಇನ್ನೂ ಕೆಲವರು ಮರದ ಹತ್ತಿರ ಹಾಕುತ್ತಾರೆ. ಆದರೆ ಹಾಗೆ ಮಾಡಲು ಹೋಗಬೇಡಿ. ಈ ತುಳಸಿಯ ಜೊತೆ ಪಚ್ಚ ಕರ್ಪೂರ ತೆಗೆದುಕೊಳ್ಳಿ. ಇವೆರಡನ್ನು ಮಡಿ ಇರುವ ಶುದ್ಧ ಬಟ್ಟೆಯನ್ನು ಗಂಟು ಕಟ್ಟಿ ನೀವು ಯಾವ ಜಾಗದಿಂದ ಬಂಗಾರವನ್ನು ತೆಗೆದಿದ್ದೀರೋ ಆ ಜಾಗದಲ್ಲಿ ಇಡಿ. ನಂತರ ಎರಡನೇ ವಾರವೂ ಹೀಗೆ ಮಾಡಿ. ಎರಡನೇ ವಾರ ಗಂಟು ಇಡುವ ಮೊದಲು ನೀವು ಮೊದಲ ವಾರ ಇಟ್ಟ ಗಂಟನ್ನು ಯಾರಿಗೂ ಕಾಣದ ರೀತಿಯಲ್ಲಿ ನದಿಯಲ್ಲಿ, ಹೊಳೆಯಲ್ಲಿ ಇಲ್ಲವೇ ನಿರ್ಜನ ಪ್ರದೇಶಕ್ಕೆ ತೆರಳಿ ವಿಸರ್ಜನೆ ಮಾಡಬೇಕು. ನಂತರ ಎರಡನೇ ವಾರ ತಂದ ಗಂಟು ಇಡಬೇಕು.

ಈ ರೀತಿ ಸತತ ಮೂರು ವಾರ ನೀವು ಮಾಡಿದರೆ ನೀವು ಅಡವಿಟ್ಟ ಚಿನ್ನವನ್ನು ನೀವು ವಾಪಸ್ ಮನೆಗೆ ತರುವ ಸಾಮರ್ಥ್ಯ ನಿಮಗೆ ಬರುತ್ತದೆ.

Comments are closed.